ಉಡುಪಿ : 7 ಮಂದಿ ನಾಪತ್ತೆಯಾಗಿರುವ ಮೀನುಗಾರರನ್ನು ಪತ್ತೆ ಮಾಡುವಂತೆ ಆಗ್ರಹಿಸಿ ಅನೇಕ ಕಡೆಗಳಲ್ಲಿ ಮೀನುಗಾರರು ಪ್ರತಿಭಟನೆ ನಡೆಸಿದ್ರು. ಡಿಸೆಂಬರ್‌ 13ರಂದು 7 ಮಂದಿ ಮೀನುಗಾರರು ಮಲ್ಪೆಯ ಬೀಚ್‌ನಿಂದ ನಾಪತ್ತೆಯಾಗಿದ್ದರು. ಇದುವರೆಗೂ ಮೀನುಗಾರರು ಪತ್ತೆಯಾಗದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ, ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ರು. ಮೀನುಗಾರಿಕೆ ಸ್ಥಗಿತಗೊಳಿಸಿ, ಮೀನುಗಾರರನ್ನ ಪತ್ತೆ ಮಾಡುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.

RELATED ARTICLES  ದಿನಾಂಕ 30/05/2019ರ ದಿನ ಭವಿಷ್ಯ ಇಲ್ಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ದಿನಕರ ಶೆಟ್ಟಿಯವರು ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದೆಯೇ ಹೊರತು, ಬಡ ಜನತೆಯ ಬಗ್ಗೆ ನಿಷ್ಕಾಳಜಿಯನ್ನು ತೋರುತ್ತಿದೆ, ಜಾತಿ ಆಧಾರದ ಮೇಲೆ ರಾಜಕಾರಣ ಮಾಡುವ ಈ ಸರ್ಕಾರ ಚಿಕ್ಕ ಸಮಾಜವಾದ ಮೀನುಗಾರರನ್ನು ನಿರ್ಲಕ್ಷಿಸುತ್ತಿದೆ ಎಂದ ಅವರು ಸರ್ಕಾರದ ವಿರುದ್ಧ ಗುಡುಗಿದರು.

 ಕಳೆದ 24 ದಿನಗಳಿಂದ ಕಣ್ಮರೆ ಆಗಿರುವ "ಸುವರ್ಣ ತ್ರಿಭುಜ" ಎಂಬ ಹೆಸರಿನ ಬೋಟ್ ಮತ್ತು ಮೀನುಗಾರರ ಹುಡುಕಾಟಕ್ಕಾಗಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ,  ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಮೀನುಗಾರರನ್ನು ಹುಡಕಿ ಕೊಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಇಂದು ಮಲ್ಪೆಯಲ್ಲಿ ನಡೆದ ಬೃಹತ್ ಪ್ರತಿಭಟನೆ ಮತ್ತು ರಸ್ತೆ ತಡೆಯಲ್ಲಿ ಭಾಗವಹಿಸಿರುವುದಾಗಿ ಶಾಸಕ ‌ಸುನಿಲ್ ನಾಯ್ಕ ತಿಳಿಸಿದರು. .