ಮೇಷರಾಶಿ:- ನಿಮ್ಮದೇ ಯೋಚನೆ ಹಾಗೂ ಪ್ರಪಂಚದಿಂದ ಹೊರಗೆ ಬನ್ನಿ. ನಿಮಗಿಂತಲೂ ಬಹು ಕಷ್ಟಜೀವನ ನಡೆಸುತ್ತಿರುವವರು ನಿಮ್ಮ ಕಣ್ಣಿಗೆ ಬೀಳುವರು. ಆಗ ನೀವು ಅನುಭವಿಸುತ್ತಿರುವ ಕಷ್ಟ ಕಷ್ಟವೇ ಅಲ್ಲ ಎಂದು ಗೊತ್ತಾಗುವುದು.
ವೃಷಭ:- ಕೆಲಸದ ಸ್ಥಳಗಳಲ್ಲಿ ವಿಶೇಷ ಸ್ಥಾನಮಾನಗಳು ಲಭ್ಯವಾಗಲಿವೆ. ಇದಕ್ಕಾಗಿ ಹಲವರ ಸಹಕಾರವು ದೊರೆಯಲಿದೆ. ಮಕ್ಕಳಿಂದ ಸುವಾರ್ತೆಯನ್ನು ಕೇಳುವಿರಿ. ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುವುದು. ಮನಸ್ಸು ಉಲ್ಲಾಸಮಯವಾಗುವುದು.
ಮಿಥುನ:- ನಿಮ್ಮನ್ನು ಕಾಡುತ್ತಿರುವ ಹಲವು ಪ್ರಶ್ನೆಗಳಿಗೆ ಉತ್ತರ ಸಿಗದೆ ಚಡಪಡಿಸುತ್ತಿದ್ದೀರಿ. ಆತಂಕರಾಗದಿರಿ. ಬಂದ ಸಮಸ್ಯೆಗಳು ಹಿರಿಯರ ಆಶೀರ್ವಾದದಿಂದ ಕಡಿಮೆ ಆಗುವುದು. ದುರ್ಗೆಯ ಆರಾಧನೆ ಮಾಡಿ.
ಕಟಕ:- ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂಬ ಪ್ರಶ್ನೆಗೆ ಸೂಕ್ತ ಉತ್ತರ ದೊರೆಯಲಿದೆ. ನಿಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದ ವ್ಯಕ್ತಿಗಳು ನಿಮ್ಮದೆರು ಬಂದು ಕ್ಷ ಮೆ ಯಾಚಿಸುವ ಸಂದರ್ಭ ಎದುರಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.
ಸಿಂಹ:- ಹೆಚ್ಚಿನ ನಿರೀಕ್ಷೆಗಳಿಂದ ನಿರಾಸೆಯೇ ಉಂಟಾಗುವುದು. ಹಾಗಾಗಿ ಪಾಲಿಗೆ ಬಂದದ್ದು ಪಂಚಾಮೃತ ಎಂದು ಭಾವಿಸಿ. ನಿಮಗೆ ದೊರಕಿದಷ್ಟರಲ್ಲೇ ತೃಪ್ತಿಯನ್ನು ಕಾಣಿ. ಇದರಿಂದ ನೀವು ಸಮಾಜದಲ್ಲಿ ಗೌರವಿಸಲ್ಪಡುವಿರಿ.
ಕನ್ಯಾ:- ಬಾಳಸಂಗಾತಿಯೊಂದಿಗೆ ಕಲಹ ಸಾಧ್ಯತೆ ಇದೆ. ಇದನ್ನು ಜಾಣ್ಮೆಯಿಂದ ಎದುರಿಸಿದಲ್ಲಿ ಒಳಿತಾಗುವುದು. ಅವರ ವಿಚಾರಧಾರೆಗಳಿಗೂ ಬೆಲೆ ಕೊಡುವುದರಿಂದ ನಿಮಗೆ ಹೆಚ್ಚಿನ ಲಾಭವುಂಟಾಗುವುದು.
ತುಲಾ:-ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಸಮಾಜದಲ್ಲಿ ಕೀರ್ತಿ ಗೌರವ ಆದರಗಳಿಂದ ಮನಸ್ಸಿಗೆ ಸಂತೋಷ ಎನಿಸುವುದು. ವದಂತಿಗಳಿಗೆ ಕಿವಿಗೊಡದಿರಿ. ಮನೆಯ ಹಿರಿಯರನ್ನು ಗೌರವಿಸಿ ಹಿರಿತನದಿಂದ ಬಾಳಿ.
ವೃಶ್ಚಿಕ:- ವ್ಯಾಪಾರ, ವ್ಯವಹಾರಗಳಿಗೆ ಮೀಸಲಿಟ್ಟ ಹಣ ಆರೋಗ್ಯದ ಸಲುವಾಗಿ ಖರ್ಚಾಗುವ ಸಾಧ್ಯತೆ ಇದೆ ಅಥವಾ ಟ್ಯಾಕ್ಸ್ ಕಟ್ಟುವುದಕ್ಕಾಗಿ ಉಪಯೋಗಿಸಬೇಕಾಗುವುದು. ಸರ್ಕಾರಕ್ಕೆ ಸಲ್ಲಿಸಬೇಕಾದ ಕರವನ್ನು ಸಕಾಲಕ್ಕೆ ಪಾವತಿಸಿ.
ಧನುಸ್ಸು:- ಹಳೆಯ ಸಾಲದ ತೀರುವಳಿ ಆಗುವುದು. ಕೆಲವರು ವೃತ್ತಿಯಲ್ಲಿ ಬದಲಾವಣೆ ಬಗ್ಗೆ ಚಿಂತಿಸಿದರೆ ಮತ್ತೆ ಕೆಲವರು ಮನೆ ಬದಲಾಯಿಸುವ ಚಿಂತೆಯಲ್ಲಿದ್ದೀರಿ. ಮನೆ ಬದಲಾವಣೆಯಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದು.
ಮಕರ:- ಮರಕ್ಕಿಂತ ಮರ ದೊಡ್ಡದು. ಅಂತೆಯೇ ನಿಮ್ಮ ಬುದ್ಧಿವಂತಿಕೆಯನ್ನು ಮೀರಿಸುವ ಜನರು ಜಗತ್ತಿನಲ್ಲಿ ಕಾಣಬರುತ್ತಾರೆ. ಹಾಗಾಗಿ ನಿಮ್ಮ ಬುದ್ಧಿಮತ್ತೆಯ ವಿಚಾರವಾಗಿ ಅಹಂಕಾರ ಪಡುವುದು ಸೂಕ್ತವಲ್ಲ.
ಕುಂಭ:- ಹಲವು ಪ್ರಶ್ನೆಗಳಿಗೆ ಉತ್ತರಗಳು ಸಿಗದೇ ಚಡಪಡಿಸಲಿದ್ದೀರಿ. ಈ ಬಗ್ಗೆ ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ನಿಮ್ಮ ಮಾರ್ಗದರ್ಶಕರನ್ನು ಕಂಡು ನಿಮ್ಮ ಸಮಸ್ಯೆ, ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಿ.
ಮೀನ:- ಮನೆಯಲ್ಲಿನ ಮಂಗಳಕಾರ್ಯಗಳಿಗೆ ಚಾಲನೆ ದೊರೆಯಲಿದೆ. ಇದರಿಂದಾಗಿ ಮನೆಯಲ್ಲಿ ಸಂತೋಷದ ವಾತಾವರಣ ಮೂಡುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ದೂರದಿಂದ ಬರುವ ವಾರ್ತೆಯು ನಿಮಗೆ ಮುದ ನೀಡುವುದು.