ಭಟ್ಕಳ: ಈಗೀಗ ಎಲ್ಲಿ ನೋಡಿದರೂ ಅಪಘಾತಗಳದ್ದೇ ಸುದ್ದಿ. ಜನತೆ ಪ್ರಾಣ ಕೈಲಿ ಹಿಡಿದು ಸಂಚರಿಸೋ ಹಾಗ ಭಾಸವಾಗುತ್ತೆ. ಅದಕ್ಕೆ ಸಾಕ್ಷಿ ಇಂದಿನ ಮತ್ತೊಂದು ಘಟನೆ.

ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಭಟ್ಕಳ ತಾಲೂಕಿನ ವೆಂಕಟಾಪುರ ಸೇತುವೆಯ ಮೇಲೆ ನಡೆದಿದೆ.

RELATED ARTICLES  ಕಾರವಾರದಲ್ಲಿ ಕಳ್ಳತನ ದಂಗಾದ ಜನತೆ!

FZ ಬೈಕ್ ಸವಾರ, ಸೋಡಿಗದ್ದೆಯ ಮಿಥುನ್ ಮೊಗೇರ ಈ ಅಪಘಾತದಲ್ಲಿ ಸಾವನ್ನಪ್ಪಿದ್ದು ,ರಕ್ತದ ಮಡುವಿನಲ್ಲಿ ಬಿದ್ದಿರುವ ದೃಷ್ಯ ಮನ ಕಲಕುವಂತಿತ್ತು.

RELATED ARTICLES  ಭೀಕರ ಅಪಘಾತ : ಭಟ್ಕಳ ಪಿ.ಎಲ್.ಡಿ. ಬ್ಯಾಂಕ್ ನ ನಿರ್ದೇಶಕ ಸಾವು

ಬೈಕ್ ಗೆ ಯಾವ ವಾಹನ ಡಿಕ್ಕಿಯಾಗಿದೆ ಎನ್ನುವುದರ ಬಗ್ಗೆ ಇನ್ನೂ ವಿವರ ತಿಳಿದು ಬಂದಿಲ್ಲ. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ.