ಹೊನ್ನಾವರ : ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಇಳಿಸಿದ್ರೂ ರಾಜ್ಯದ ಸಮ್ಮಿಶ್ರ ಸರ್ಕಾರ ತೆರಿಗೆಯನ್ನು ಹೆಚ್ಚಿಸುತ್ತಿದೆ ಎಂಬ ಕಾರಣದಿಂದ ಹಾಗೂ ನಾಪತ್ತೆಯಾದ ಮೀನುಗಾರರನ್ನು ಪತ್ತೆ ಮಾಡುವಂತೆ ಆಗ್ರಹಿಸಿ ಹೊನ್ನಾವರ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟ‌ನೆ ನಡೆಸಿದರು.

   ಈ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ‌ ಸದಸ್ಯೆ ಶ್ರೀಕಲಾ ಶಾಸ್ತ್ರಿಯವರು ಕುಮಾರ ಸ್ವಾಮಿಯವರು ಮೈತ್ರಿಗೂ ಮುನ್ನ ಕಾಂಗ್ರೆಸ್ ಅನ್ನು ಹೀನಾಯವಾಗಿ ಬಯ್ಯುತ್ತಿದ್ದವರು,ಇದೀಗ ದೋಸ್ತಿ ದರ್ಬಾರ್ ನಡೆಸಿದ್ದಾರೆ ದುಷ್ಟ ರಾಜಕಾರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆ ಏರಿಸಿದೆ ಎಂದು ಬೀದಿಗಿಳಿದು ಹೋರಾಟದ ನಾಟಕ ‌ಆಡಿದವರು ಈಗ ರಾಜ್ಯ ಸರ್ಕಾರ ಬೆಲೆ ಏರಿಸಿದಾಗ ಸುಮ್ಮನೆ ಕುಳಿತಿದ್ದಾರೆ ಎಂದರು.

RELATED ARTICLES  ಗೌರವ ಪಡೆದ ಶ್ರೀ ಶ್ರೀ ಅಭಿನವ ದೇವನಾಚಾರ್ಯ ಮಹಾಸ್ವಾಮಿಗಳು.

ಇದಲ್ಲದೆ ಪುಟ್ಟರಂಗ ಶೆಟ್ಟಿ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಅವರು ಸರಕಾರವನ್ನು ಒತ್ತಾಯಿಸಿದರು.

   ಹೋದ ಹೋದ ವೇದಿಕೆಗಳಲ್ಲಿ ಕುಮಾರ ಸ್ವಾಮಿಯವರು ಕಣ್ಣೀರು ಹಾಕುವ ಕಾರಣಕ್ಕಾಗಿ ಕುಮಾರಸ್ವಾಮಿಯವರನ್ನು ಕಣ್ಣೀರ ಸ್ವಾಮಿ ಎಂದು ಸಂಬೋಧಿಸಿದ ಅವರು, ಜೀವದ ಬೆಲೆ ಅವರಿಗೆ ಅರ್ಥವಾಗಬೇಕು , ತಮ್ಮದಾದರೆ ಜೀವ ಇತರದ್ದಾದರೆ ಅದಕ್ಕೆ ಬೆಲೆ ಇಲ್ಲ ಎಂಬಂತಾಗಿರುವುದು ಬೇಸರದ ಸಂಗತಿ ಎಂದ ಅವರು. ಆದಷ್ಟು ಶೀಘ್ರವಾಗಿ ಕಾಣೆಯಾಗಿರುವ ಮೀನುಗಾರರನ್ನು ಹುಡುಕುವತ್ತ ಸರಕಾರ ಮುಂದಾಗಬೇಕು ಎಂದರು. ಜನತೆಗೆ ಪೆಟ್ರೋಲ್ ,ಡೀಸೆಲ್ ಬೆಲೆ ಕಡಿಮೆಯಾಯ್ತು ಎನ್ನುವಷ್ಟರಲ್ಲಿ ತೆರಿಗೆ ಹೆಚ್ಚಿಸಿ ಬರೆ ಎಳೆದ ಸರಕಾರ ಇದಾಗಿದೆ ಎಂದು ಶ್ರೀಕಲಾ ಶಾಸ್ತ್ರಿ ಸರಕಾರದ ವಿರುದ್ಧ ಗುಡುಗಿದರು.

RELATED ARTICLES  ಉತ್ತರಕನ್ನಡದ ಪ್ರಮುಖ ಸುದ್ದಿಗಳು.

ಡಿಸೆಂಬರ್‌ 13ರಂದು 7 ಮಂದಿ ಮೀನುಗಾರರು ಮಲ್ಪೆಯ ಬೀಚ್‌ನಿಂದ ನಾಪತ್ತೆಯಾಗಿದ್ದರು. ಇದುವರೆಗೂ ಮೀನುಗಾರರು ಪತ್ತೆಯಾಗದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ರು. ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಈ ಬಗ್ಗೆ ಮನವಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಎನ್.ಎಸ್. ಹೆಗಡೆ ಹಾಗೂ ಇನ್ನಿತರ ಪ್ರಮುಖರು ಹಾಜರಿದ್ದರು.