ಸಿದ್ದಾಪುರ: ಸಾಗರ ಹಾಗೂ ಕೆಲಭಾಗಗಳಲ್ಲಿ ಕೇಳಿಬರುತ್ತಲಿದ್ದ ಮಂಗನ ಕಾಯಿಲೆ ಉತ್ತರ ಕನ್ನಡಕ್ಕೂ ಬಂದಿತೇ ಎಂಬ ಶಂಕೆ ವ್ಯಕ್ತವಾಗುತ್ತುದೆ.
ಸಿದ್ದಾಪುರ ತಾಲೂಕಿನ ಕವಂಚೂರು ಗ್ರಾಮದ ವ್ಯಕ್ತಿ ಒಬ್ಬರಿಗೆ ಮಂಗನ ಕಾಯಿಲೆ ಬಂದಿರುವ ಶಂಕೆ ವ್ಯಕ್ತವಾಗಿದೆ. ರೋಗಿಯ ರಕ್ತದ ಮಾದರಿಯನ್ನು ಸಾಗರದ ವೈದ್ಯರು ಪುಣೆಗೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.
ಸಿದ್ದಾಪುರ ತಾಲೂಕಿನ ಪಕ್ಕದ ಸಾಗರ ತಾಲೂಕಿನ ಅರಲಗೋಡು ಗ್ರಾಮದಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಗಡಿ ಭಾಗದ ಊರುಗಳಿಗೂ ಖಾಯಿಲೆ ಹರಡುವ ಆತಂಕ ಮಾವಿನಗುಂಡಿ, ಹಲಗೇರಿ ಗ್ರಾಮಸ್ಥರಿಗೆ ಮೂಡಿದೆ.
ಮಂಗನ ಕಾಯಿಲೆ ಕುರಿತು ತಾಲೂಕ ಆರೋಗ್ಯ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ. ಕಾಯಿಲೆಯ ಕುರಿತು ಅರಿವು ಮೂಡಿಸಲು ಪಾಂಪ್ಲೆಟ್ ಹಂಚಿಕೆ ಮಾಡಿ ಜಾಗೃತಿ ಮೂಡಿಸಿದೆ. ಅಲ್ಲದೇ ವೈದ್ಯರ ತಂಡ ತಾಲೂಕಿನ ಗಡಿ ಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.