ಕುಮಟಾ:ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಕೊಂಕಣ ಎಜ್ಯುಕೇಶನ್‍ಟ್ರಸ್ಟ್ನ ಸಿ.ವಿ.ಎಸ್.ಕೆ ವಿದ್ಯಾರ್ಥಿಗಳು ಗದಗಿನಲ್ಲಿ ನಡೆದರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಶಾಲೆಯ ವಿಜ್ಞಾನ ಶಿಕ್ಷಕರುಗಳಾದ ಎಚ್.ಆರ್.ರವಿಶಂಕರ ಹಾಗೂ ಭಾಸ್ಕರ ಹೆಗಡೆ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಸೂರ್ಯಕಿರಣಎನ್. ಮತ್ತು ಪ್ರಮೋದಎಲ್. ನಾಯ್ಕಇವರು ಸಾರಿಗೆ ಮತ್ತು ಸಂವಹನ ವಿಷಯಕ್ಕೆ ಸಂಬಂಧಿಸಿದಂತೆರಾಜ್ಯ ಮಟ್ಟದವಿಜ್ಞಾನ ವಸ್ತು ಪ್ರದರ್ಶನದಲ್ಲಿ ದ್ವಿತೀಯ ಸ್ಥಾನಗಿಟ್ಟಿಸಿ ಬೆಂಗಳೂರಿನಲ್ಲಿ ನಡೆಯಲಿರುವ ಭಾರತದ ದಕ್ಷಿಣವಲಯ ಮಟ್ಟದ ಸ್ಪರ್ಧೆಗೆಕರ್ನಾಟಕವನ್ನು ಪ್ರತಿನಿಧಿಸುತ್ತಿರುವುದು ನಿಜಕ್ಕೂ ಪ್ರಶಂಸನೀಯ ಹಾಗೂ ಹೆಮ್ಮೆಯ ವಿಷಯವಾಗಿದೆ.
ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆಶಾಲೆಯಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶೈಕ್ಷಣಿಕ ಸಲಹೆಗಾರರು, ಶಿಕ್ಷಕರು, ಪಾಲಕರು ಅಭಿನಂದಿಸಿ ಮುಂದಿನ ಹಂತದ ಸ್ಫರ್ಧೆಗೆ ಶುಭ ಹಾರೈಸಿದ್ದಾರೆ.