ಕಾರವಾರ : ದುಬೈಯಿಂದ ಮೀನುಗಾರಿಕೆಗೆ ತೆರಳಿದ್ದ ಭಟ್ಕಳ, ಕುಮಟಾ, ಮುರುಡೇಶ್ವರ, ಮಂಕಿಯ 18 ಮಂದಿ ಮೀನುಗಾರರ ಇರಾನ್ ಗಡಿ ಪ್ರವೇಶಿಸಿದ್ದ ಹಿನ್ನೆಲೆಯಲ್ಲಿ ಬಂಧಿಸಲಾಗಿದ್ದು ಇದೀಗ ಅವರು ಬಿಡುಗಡೆಗೊಂಡು ದುಬೈ ಸೇರಿದ್ದಾರೆ ಎನ್ನಲಾಗಿದೆ.

ಕಳೆದ 2 ತಿಂಗಳ ಹಿಂದೆ ಮೀನುಗಾರಿಕೆಗೆ ತೆರಳಿದ ಉತ್ತರಕನ್ನಡ ಜಿಲ್ಲೆಯ ಮುರುಢೇಶ್ವರದ ಇಬ್ರಾಹಿಂ ಮುಲ್ಲಾ ಫಖೀರಾ, ಮುಹಮ್ಮದ್ ಅನ್ಸಾರ್ ಇಸ್ಮಾಯಿಲ್ ಬಾಪು, ನಯೀಮ್ ಹಸನ್ ಭಾಂಡಿ, ಭಟ್ಕಳ ತಾಲೂಕಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ತೆಂಗಿನಗುಂಡಿ ಪ್ರದೇಶದ ಖಲೀಲ್ ಪಾನಿಬುಡು, ಉಸ್ಮಾನ್ ಬೊಂಬಾಝ್‍ಕರ್ ಮುಹ್ಮದ್ ಇಸ್ಹಾಖ್, ಅಬ್ದುಲ್ ಮೊಹಮ್ಮದ್ ಹುಸೇನ್, ಮುಹಮ್ಮದ್ ಷರೀಫ್ ಯಸೂಫ್ ಬಾಪು, ಅಬ್ದುಲ್ಲಾ ಸುಲೈಮಾನ್ ಡಾಂಗಿ, ಕುಮಟಾ ತಾಲೂಕಿನ ಅತಿಖ್ ಸುಲೈಮಾನ್ ಧಾರು, ಯಾಖೂಬ್ ಇಸ್ಮಾಯಿಲ್ ಶಮು,ಇಲ್ಯಾಸ್ ಅಂಬಾಡಿ, ಇಲ್ಯಾಸ್ ಘರಿ, ಇನಾಯತ್ ಅಬ್ದುಲ್ ಖಾದಿರ್ ಶಮ್ಸು, ಖಾಸಿಮ್ ಶೇಖ್, ಅಜ್ಮಲ್ ಮೂಸಾ ಶಮುರವನ್ನುಬಂಧೀಸಲಾಗಿತ್ತು ಇದೀಗ ಬಿಡುಗಡೆಗೊಂಡಿದ್ದಾರೆ.

RELATED ARTICLES  ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ 'ಪಾಲಕರ ಸಮಾಗಮ ಕಾರ್ಯಕ್ರಮ'

 ೧೮ ಮೀನುಗಾರರು ಸುರಕ್ಷಿತವಾಗಿ ಬುಧವಾರ ದುಬೈ ತಲುಪಿದ್ದಾಗಿ ಮೀನುಗಾರರ ಕುಟುಂಬದವರು ದೃಢಪಡಿಸಿದ್ದು ದುಬೈಯಿಂದ ಫೋಟೊ ಮತ್ತು ವಿಡಿಯೋ ಬಿಡುಗಡೆಗೊಳಿಸಿದ್ದಾರೆ.

ಮಂಗಳವಾರ ಬಿಡುಗಡೆಗೊಂಡಿದ್ದ ಭಟ್ಕಳ ಸೇರಿದಂತೆ ಉತ್ತರಕನ್ನಡ ಜಿಲ್ಲೆಯ ೧೮ ಮೀನುಗಾರರು ಈಗ ಸುರಕ್ಷಿತವಾಗಿ ದುಬೈ ತಲುಪಿದ್ದಾರೆ. ಆದಷ್ಟು ಬೇಗನೆ ತಮ್ಮ ಮಾತೃಭೂಮಿಯನ್ನು ಕಾಣುವ ತವಕವನ್ನು ಅವರು ವ್ಯಕ್ತಪಡಿಸಿದ್ದಾರೆ.  

RELATED ARTICLES  ಶ್ರೀ ಕ್ಷೇತ್ರ ಸಿಗಂದೂರ ಚೌಡೇಶ್ವರಿ ದೇವಿ ಅಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದ ಉಪೇಂದ್ರ ಪೈ