ಯಲ್ಲಾಪುರ; ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಾಲೂಕಿನ ಸಾತನಕೊಪ್ಪ ಗ್ರಾಮದಲ್ಲಿ ವಿನೂತನವಾಗಿ ಕ್ರಷಿ ಹಬ್ಬವನ್ನು ಆಚರಿಸಲಾಯಿತು.

ನೆಟ್ಟಿ ಮಾಡುವ ಮುಖಾಂತರ ಕ್ರಷಿ ಹಬ್ಬಕ್ಕೆ ಚಾಲನೆ ನೀಡಲಾಯಿತು. ನಂತರ ಚಿಕ್ಕ ಕಾರ್ಯಾಗಾರದ ಮೂಲಕ ಕೃಷಿಯ ಮಹತ್ವವನ್ನು ತಿಳಿಸಿಕೊಡಲಾಯಿತು.
ಬಿಜೆಪಿ ನಾಯಕರಾದ ಬಾಬು ಬಾಂದೇಕರ, ಪ್ರಸಾದ ಹೆಗಡೆ ಮತ್ತು ರವಿ ದೇವಡಿಗ ಭಾಗವಹಿಸಿದ್ದರು.
ಶಿಕ್ಷಕ ಹೇಮಂತ ದುರಂಧರ ಕಾರ್ಯಕ್ರಮ ಸಂಘಟಿಸಿದ್ದರು. ಸಾತನಕೊಪ್ಪದ ನೂರಾರು ಗ್ರಾಮಸ್ಥರು ಭಾಗವಹಿಸಿ ಸುಲಭ ಹಾಗೂ ಸರಳ ಕೃಷಿ ಕುರಿತು ಮಾಹಿತಿ ಪಡೆದರು. ಹೊಸ ಪರಿಕಲ್ಪನೆ ಹೊಸ ಯೊಚನೆಯೊಂದಿಗೆ ಹಮ್ಮಿಕೊಳ್ಳಲಾದ ಕಾರ್ಯಕ್ರಮ ನೆರೆದಿದ್ದ ಜನರ ಸಂತೋಷ ಇಮ್ಮಡಿ ಗೊಳಿಸಿತು.

RELATED ARTICLES  ವಿದೇಶಿಗರಿಗೆ ಲಿಂಗ ದೀಕ್ಷೆ : ಗೋಕರ್ಣದಲ್ಲಿ ನಡೆದ ಕಾರ್ಯಕ್ರಮ.