ಬೆಂಗಳೂರು: ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರೆ ನೀಡಿದ್ದ 2 ದಿನಗಳ ಭಾರತ್ ಬಂದ್ ನಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ ಸುಮಾರು 28 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ತಿಳಿದುಬಂದಿದೆ.

ಕಾರ್ಮಿಕ ನೀತಿ ತಿದ್ದುಪಡಿ ,ಮೋಟಾರುವಾಹನ ಕಾಯ್ದೆ ತಿದ್ದುಪಡಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರೆ ನೀಡಲಾಗಿದ್ದ ಬಂದ್ ನಿಂದಾಗಿ ಜನ ಜೀವನ ಅಸ್ಥವ್ಯಸ್ಥಗೊಂಡಿದೆ.

RELATED ARTICLES  ಸಾಮಾಜಿಕ ನ್ಯಾಯದ ಹರಿಕಾರ ಅಂಬೇಡ್ಕರ್ ಅವರ ಜಯಂತಿ ಆಚರಣೆ.

ಇದಲ್ಲದೇ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸುಮಾರು 28 ಸಾವಿರ ಕೋಟಿಗೂ ಅಧಿಕ ನಷ್ಟವಾಗಿದೆ. ಕೇಂದ್ರ ಸರ್ಕಾರಕ್ಕೆ ಸುಮಾರು 28 ಸಾವಿರ ಕೋಟಿ ರೂ ನಷ್ಟವಾಗಿದ್ದು, ರಾಜ್ಯದಲ್ಲಿ ನಡೆದ ಬಂದ್ ನಿಂದಾಗಿ ರಾಜ್ಯ ಸರ್ಕಾರಕ್ಕೆ ಸುಮಾರು 1100 ಕೋಟಿ ರೂಗಳು ನಷ್ಟವಾಗಿದೆ ಎನ್ನಲಾಗಿದೆ.

RELATED ARTICLES  ಕ್ರಿಸ್‌ಮಸ್‌ ದಿನ ಮುಂಬಯಿಗೆ ಮೊದಲ ಎಸಿ ಲೋಕಲ್‌ ಟ್ರೈನ್‌ ಭಾಗ್ಯ

ಇದರ  ಬಗ್ಗೆ ಕರ್ನಾಟಕ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಮಹಾಸಂಸ್ಛೆಯ ಮೂಲಗಳು ಮಾಹಿತಿ ನೀಡಿದ್ದು, 2 ದಿನಗಳ ಬಂದ್ ನಿಂದಾಗಿ ಸಾರಿಗೆ, ಕೃಷಿ. ಕೈಗಾರಿಕೆ, ಮಾರುಕಟ್ಟೆ, ವ್ಯಾಪಾರ, ವಾಣಿಜ್ಯೋದ್ಯಮ ಸೇರಿದಂತೆ  ಎಲ್ಲ ವಿಭಾಗಗಳೂ ಬರಿಸಲಾಗದ ನಷ್ಟವಾಗಿದೆ ಎಂದು ವರದಿಯಾಗಿದೆ.