ಅಗಲಿದ ಗ್ರಾಹಕ ಪ್ರತಿದಿನವೂ ತನ್ನ ಅಂಗಡಿ ಬರುತ್ತಾರೆ ಎಂಬ ನಂಬಿಕೆಯಿಂದ ಬೆಳಿಗ್ಗೆ ವಿಶೇಷವಾಗಿ ಒಂದು ಲೋಟ ಚಹಾ ತಯಾರಿಸಿ ಅದನ್ನು ಹೊರಗೆ ಚಲ್ಲಿ ನಂತರ ಅದರ ಮೇಲೆ ತಿಂಡಿಯನ್ನು ಎರಚಿ ಕಾಗೆಗಳು ಬಂದು ಅವುಗಳನ್ನು ಮುತ್ತಿ ತಿನ್ನುವಾಗ ಅವುಗಳಿಗೆ ಕೈ ಮುಗಿದು ಗಿರಾಕಿಗಳಿಗೆ ಚಹಾ ತಿಂಡಿ ನೀಡುವ ರಮೇಶ ಗೋವಿಂದ ದೇಶ ಭಂಡಾರಿ.
ತಾನು ಕಳೆದ ಮೂವತ್ತು ವರ್ಷಗಳಿಂದ ಈ ಉದ್ಯಮ ಮಾಡುತ್ತಿದ್ದು ಅಂದಿನಿಂದ ಇಂದಿನವರೆಗೂ ಅನೇಕರು ಪ್ರತಿನಿತ್ಯ ತನ್ನ ಅಂಗಡಿಗೆ ಬರುತ್ತಾರೆ.ಅವರಲ್ಲಿ ಕೆಲವರು ಇಹಲೋಕ ತ್ಯಜಿಸಿದ್ದಾರೆ .ಅವರೂ ಕೂಡ ದಿನವೂ ಕಾಗೆಯ ರೂಪದಲ್ಲಿ ಬಂದು ಚಹ ತಿಂಡಿ ಸೇವಿಸುತ್ತಾರೆ ಎಂದು ಮುಗ್ಧವಾಗಿ ಹೇಳುತ್ತಾರೆ.
ಭಾನುವಾರ ಅಂಗಡಿಗೆ ರಜೆ ಇದ್ದರೂ ಕಾಗೆಗಳೆಲ್ಲ ಆ ದಿನ ಅವರ ಮನೆಯ ಬಳಿಬಂದು ತಿಂಡಿತಿಂದೇ ಹೋಗುತ್ತಾರೆ.
ನಾವೇನಾದರೂ ತಿಂಡಿ ಬಡಿಸದಿದ್ದರೆ ಊರೆಲ್ಲ ಒಂದಾಗುವ ಹಾಗೆ ನೂರಾರು ಕಾಗೆಗಳು ಕಿರುಚುತ್ತಾವೆ ಎನ್ನುತ್ತಾರೆ.ಕುಮಟಾ ತಹಸೀಲ್ದಾರ ಕಚೇರಿಯ ಎದುರು ಹೈಟೆಕ್ ಆಸ್ಪತ್ರೆ ಪಕ್ಕದಲ್ಲಿ ಚಿಕ್ಕ ಚಹಾದ ಅಂಗಡಿ ಇರಿಸಿಕೊಂಡಿರುವ ರಮೇಶ ಭಂಡಾರಿ ಗ್ರಾಹಕರೇ ತನ್ನ ದೇವರು ಅವರ ತೃಪ್ತಿಯೇ ತನ್ನ ಕುಶಿ ಎಂದು ಅಭಿಮಾನದಿಂದ ಹೇಳುತ್ತಾರೆ.
ಇದನ್ನು ನಂಬಿಕೆ ಎನ್ನುವುದೋ ಮೂಢನಂಬಿಕೆ ಎನ್ನುವುದೋ ಅರ್ಥವಾಗದು.
ನಂಬಿಕೆಗೆ ನೂರು ನೆಲೆ ಅಲ್ಲವೆ?
ಬರಹ : ಚಿದಾನಂದ ಭಂಡಾರಿ ಕಾಗಾಲ.