ಪಡುಬಿದ್ರಿ : ಬಸ್ಸು-ಬೈಕ್ ಮುಖಾಮುಖಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಪಡುಬಿದ್ರಿ ನಾಗರಾಜ್ ಎಸ್ಟೇಟ್‌ ಬಳಿ ಸಂಭವಿಸಿದೆ.

ಎಲ್ಲೂರು ಗ್ರಾಮದ ಬಂಡಸಾಲೆ ಬಳಿಯ ಕೆಮುಂಡೇಲು ನಿವಾಸಿ ಅವಿನಾಶ್ ದೇವಾಡಿಗ (28) ಎಂಬವರೇ ಮೃತಪಟ್ಟವರು. ಪಡುಬಿದ್ರಿಯಿಂದ ಯಮಾಹ ಬೈಕ್ ಚಲಾಯಿಸಿಕೊಂಡು ತಾನಿರುವ ಮುಲ್ಕಿ ಕುಬೆವೂರಿನ ಮನೆಗೆ ಹೋಗುತ್ತಿರುವಾಗ ಪಡುಬಿದ್ರಿ ನಾಗರಾಜ್ ಎಸ್ಟೇಟ್ ಬಳಿಯ ಭವ್ಯ ಪೆಟ್ರೋಲ್ ಬಂಕಿನಲ್ಲಿ ರಾತ್ರಿ ತಂಗಿದ್ದ ತಡೆರಹಿತ ಬಸ್ಸು ವಿರುದ್ಧ ದಿಕ್ಕಿನಿಂದ ಬಂದು ಬೈಕಿಗೆ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಬೈಕ್ ಬಸ್ಸಿನ ಒಳ ನುಗ್ಗಿದ್ದು ಸವಾರ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ. ಮೃತ ಅವಿನಾಶ್ ಗಲ್ಫ್ ಉದ್ಯೋಗಿಯಾಗಿದ್ದು ಇತ್ತೀಚೆಗಷ್ಟೆ ಊರಿಗೆ ಬಂದಿದ್ದರೆನ್ನಲಾಗಿದೆ.

RELATED ARTICLES  ದೈಹಿಕ ಕ್ಷಮತೆ ಹಾಗೂ ಆರೋಗ್ಯ ವೃದ್ಧಿಗೆ ಕ್ರೀಡೆಗಳು ಸಹಕಾರಿ: ಗಜಾನನ ಪೈ