ದಾಂಡೇಲಿ: ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರವು ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ದಾಂಡೇಲಿಯ ಜನವಾದಿ ಮಹಿಳಾ ಸಂಘಟನೆಯವರು ಶನಿವಾರ ಸ್ಥಳೀಯ ವಿಶೇಷ ತಹಶೀಲ್ದಾರ್ ಮುಖಾಂತರ ರಾಜ್ಯಪಾಲರಿಗೆ ಮನವಿ ನೀಡಿ ಒತ್ತಾಯಿಸಿದ್ದಾರೆ.
ವಿಶೇಷ ತಹಶೀಲ್ದಾರ ಕಾರ್ಯಾಲಯದ ಬಳಿ ಸಭೆ ನಡೆಸಿದ ಜನವಾದಿ ಸಂಘಟನೆಯವರು ಮಹಿಳಾ ಮೀಸಲಾತಿಗೆ ಒತ್ತಾಯಿಸಿ, ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ಸಾವಿನ ತನಿಖೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಈ ಸಂರ್ದದಲ್ಲಿ ಮಾತನಾಡಿದ ಸಿ.ಪಿ.ಐ. ಎಂ ನ ಜಿಲ್ಲಾ ಕಾರ್ಯದರ್ಶಿ, ಜನವಾದಿ ಸಮಘಟನೆಯ ರಾಜ್ಯ ಸಮಿತಿ ಸದಸ್ಯೆ ಯಮುನಾ ಗಾಂವಕರವರು ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯ ವಾಗ್ದಾನಗಳನ್ನು ಮುರಿಯುತ್ತಿರುವ ಬಿ.ಜೆ.ಪಿ. ನೇತೃತ್ವದ ಎನ್.ಡಿ.ಎ ಕೇಂದ್ರ ಸರ್ಕಾರವು ಲೋಕಸಭಾ ಮುಂಗಾರು ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿ ಜಾರಿಗೊಳಿಸಲು ಮುಂದಾಗಬೇಕು. ಮಹಿಳೆಯರಿಗೆ ಕೆಳ ಸ್ಥರ ಆಡಳಿತದಲ್ಲಿ ಮಾತ್ರ ಮೀಸಲಾತಿ ನೀಡಲಾಗಿದೆ. ಆದರೆ ಅಲ್ಲಿ ಅವರಿಗೆ ಕಾನೂನು ರೂಪಿಸುವ ಅಧಿಕಾರ ಇರುವುದಿಲ್ಲ. ಹಾಗಾಗಿ ಇಂದು ಮಹಿಲಾ ಮೀಸಲಾತಿ ಅತ್ಯವಶ್ಯವಾಗಿದೆ ಎಂದ ಅವರು ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಕಾವ್ಯಾ ಸಾವು ಸಂಶಯಾಸ್ಪದವಾಗಿದ್ದು, ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸಿದರು.
ಸಿ.ಇ.ಟಿ.ಯು ಮುಖಂಡ ಹರೀಶ ನಾಯ್ಕ ಮಾತನಾಡಿ ಆಹಾರಧಾನ್ಯಗಳ ಉತ್ಪಾದನೆಯಲ್ಲಿ ಶೇ 73% ಮಹಿಳೆಯರ ಕೊಡುಗೆಯಿದ್ದೂ, ಕೇವಲ 4% ಮಹಿಳೆಯರ ಹೆಸರಲ್ಲಿ ಮಾತ್ರ ಭೂಮಿಯ ಮಾಲಿಕತ್ವವಿದೆ. ದೇಶದಲ್ಲಿ 50%ಗೂ ಅಧಿಕ ಮಹಿಳೆಯರು ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಬಳಲುತ್ತಿರುವುದು ಈ ದೇಶದ ಮಹಿಳೆಯರ ಸಾಮಾಜಿಕ, ಆರ್ಥಿಕ, ಅಸಮಾನತೆಗೆ ಹಿಡಿದ ಕನ್ನಡಿಯಾಗಿದೆ ಎಂದರು.
ನಗರಸಭಾ ಸದಸ್ಯ, ಡಿ.ವೈಎಪ್.ಐ.ನ ಜಿಲ್ಲಾ ಕಾರ್ಯದರ್ಶಿ ಡಿ. ಸ್ಯಾಮಸನ್ ಮಾತನಾಡಿ ಬೇಟಿ ಬಚಾವ್ ಬೇಟೀ ಪಡಾವ್ ಎಂಬಿತ್ಯಾದಿ ಆಕರ್ಷಕ ಘೋಷಣೆಗಳನ್ನು ನೀಡುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಪಕ್ಷದ ಚುನಾವಣಾ ಭರವಸೆಯನ್ನು ಈಡೆರಿಸುವುದು ಅವರ ಪ್ರಜಾಸತ್ತಾತ್ಮಕ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯಪಾಲರಿಗೆ ಬರೆದ ಮನವಿಯನ್ನು ಜನವಾದಿ ಮಹಿಳಾ ಸಂಘಟನೆಯ ದಾಂಡೇಲಿ ಘಟಕದ ಆಧ್ಯಕ್ಷೆ ರತ್ನದೀಪಾ ಎನ್.ಎಂ. ಕಂದಾಯ ಅದಿಕಾರಿಗೆÉ ಸಲ್ಲಿಸಿದರು. ಕಂದಾಯ ಆಧಿಕಾರಿ ಗೌಡಪ್ಪ ಬನಕದಿನ್ನಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಜನವಾದಿ ಮಹಿಳಾ ಸಂಘಟನೆಯ ಪ್ರಮುಖರಾದ ರೇಣುಕಾ ಉಪ್ಪಾರ, ನಿರ್ಮಲಾ ಫರ್ನಾಂಡಿಸ್, ಸಿ.ಐ.ಟಿ.ಯು ಕಾರ್ಯದರ್ಶಿ ಸಲಿಂ, ಪೌರ ಕಾರ್ಮಿಕ ಸಂಘಟನೆಯ ರಾಮಾಂಜನೇಯ, ಯೂಕುಬು ಜಾಕೊಬ ದರ್ಶಿ, ಡಿ.ವೈ.ಎಪ್.ಐನ ರಾಘವೇಂದ್ರ ಭಜಂತ್ರಿ, ನಾಗರಾಜ, ಮುಂತಾದವರಿದ್ದರು.

RELATED ARTICLES  ಕುಮಟಾ ತಾಲೂಕಿನಲ್ಲಿ ಇಂದು ಒಟ್ಟು 31 ಕರೊನಾ ಪಾಸಿಟಿವ್