ಜಿಲ್ಲೆ ಚಿತ್ರಗಳಲ್ಲಿ ದಾಖಲೆ ವೀಕ್ಷಣೆ ಕಂಡ ‘ಪ್ರೌಢಶಾಲೆ’
ವಿನಾಯಕ ಬ್ರಹ್ಮೂರು ನಿರ್ದೇಶನದ ಪ್ರೌಢಶಾಲೆ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದ್ದು ಬಿಡುಗಡೆಯಾದ 24 ಗಂಟೆಯಲ್ಲೇ 8 ಸಾವಿರಕ್ಕಿಂತ ಹೆಚ್ಚು ಜನ ಯೂಟ್ಯೂಬ್‍ನಲ್ಲಿ ವೀಕ್ಷಣೆ ಮಾಡಿದ್ದಾರೆ. ಇದು ಜಿಲ್ಲೆಯಲ್ಲಿ ನಿರ್ಮಾಣವಾದ ಚಿತ್ರದ ಮೊದಲ ದಿನದ ದಾಖಲೆಯ ವೀಕ್ಷಣೆ ಎನಿಸಿದೆ.


ಆರ್‍ಕೆ ಪ್ರೊಡಕ್ಷನ್‍ನ ರಾಜೇಶ ಆಚಾರ್ಯ ಚಂದಾವರ ಅವರ ನಿರ್ಮಾಣದ ಚಿತ್ರ ಗುರುವಾರ ಬೆಳಿಗ್ಗೆ ವೈಭವ ಪ್ಯಾಲೇಸ್‍ನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿತ್ತು. ಗುರುವಾರ ಸಂಜೆ ಯೂಟ್ಯೂಬ್‍ನಲ್ಲಿ ವೀಕ್ಷಣೆಗೆ ಬಿಡಲಾಯಿತು. ಶುಕ್ರವಾರ ಸಂಜೆಯೊಳಗೆ 8ಸಾವಿರ ಜನ ವೀಕ್ಷಿಸಿದ್ದು “ಸಂಧಿಗ್ಧಂ-2” ಚಿತ್ರದ ದಾಖಲೆಯನ್ನೂ ಮುರಿದಿದೆ. ಈ ಹಿಂದೆ ಎಂ.ಹೆಚ್. ಗಣೇಶ್ ಹಾಗೂ ಕಲ್ಪನಾ ಪಟಗಾರ್ ಅಭಿನಯಿಸಿದ್ದ “ಸಂಧಿಗ್ಧಂ-2” ಎಂಬ ಸೈಕಾಲಾಜಿಕಲ್ ಥ್ರಿಲ್ಲರ್ ಚಿತ್ರವನ್ನ ವಿನಾಯಕ ಬ್ರಹ್ಮೂರು ನಿರ್ದೇಶಿಸಿದ್ದರು. ಅದು 24 ಗಂಟೆಯೊಳಗೆ 5000 ವೀಕ್ಷಣೆ ಪಡೆದು ಅದ್ಭುತ ಓಪನಿಂಗ್ ಪಡೆದುಕೊಂಡಿತ್ತು.

RELATED ARTICLES  ಕಾರವಾರ ನೌಕಾನೆಲೆ ಮೇಲೆ ಡ್ರೋನ್ ಹಾರಾಟಕ್ಕೆ ಬ್ರೇಕ್..!

ಇನ್ನು ಪ್ರೌಢಶಾಲೆ ಚಿತ್ರದಲ್ಲಿ ಮೊದಲ ಬಾರಿ ಕ್ಯಾಮೆರಾ ಎದುರಿಸಿದವರೇ ಜಾಸ್ತಿ ಇರುವುದರಿಂದ ಅಭಿನಯದಲ್ಲಿ ಪರಕಾಯ ಪ್ರವೇಶ ಮಾಡಿದವರು ಮೂರ್ನಾಲ್ಕು ಜನ ಮಾತ್ರ. ಉಳಿದವರಿಂದ ನೈಜ ಅಭಿನಯ ಮೂಡಿಬಂದಿಲ್ಲ. ಆದರೆ ಸಿನಿಮಾಟೋಗ್ರಫಿ, ಸಂಕಲನ ಶ್ರೀಮಂತಿಕೆಯನ್ನು ತಂದುಕೊಟ್ಟಿದೆ. ವಿನಾಯಕ ಬ್ರಹ್ಮೂರು ಅವರ ಪಂಚಿಂಗ್ ಡೈಲಾಗ್‍ಗಳು ಚಿತ್ರದುದ್ದಕ್ಕೂ ಕಚಗುಳಿ ಇಡುವಂತಿದೆ. 85ರ ಅಜ್ಜ ಗೋಳಿ ಪಟಗಾರ್ ನಗಿಸುತ್ತಾರೆ, ಇಡೀ ಚಿತ್ರಕ್ಕೆ ಯಜಮಾನನೆಂಬಂತೆಯೇ ಕಾಣ ಸಿಕೊಳ್ಳುತ್ತಾರೆ. ನಾಯಕ ಶ್ಯಾಮಸುಂದರ ಪ್ರಭು ಕ್ಲಾಸ್ ಹಾಗೂ ಮಾಸ್ ಆಗಿಯೂ ಮಿಂಚಿದ್ದಾರೆ. ಚಿಕ್ಕ ಪಾತ್ರವಾದರೂ ಸುರೇಂದ್ರ ಗೌಡ ಅವರ ಕುಡುಕನ ಪಾತ್ರ ಚಿತ್ರ ಮುಗಿದ ಮೇಲೆಯೂ ಕಾಡುತ್ತದೆ. ಚಿಕ್ಕಪುಟ್ಟ ತಪ್ಪುಗಳನ್ನು ಹೊರತುಪಡಿಸಿದರೆ ಚಿತ್ರವನ್ನ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವಿನಾಯಕ ಬ್ರಹ್ಮೂರು.

RELATED ARTICLES  ಲಕ್ಷ್ಮೀ ಮೋಟಾರ್ಸನಲ್ಲಿ ಇಂದಿನಿಂದ‌ ಬೃಹತ್ ಎಕ್ಸ್‌ಚೇಂಜ್ ಮೇಳ ಮತ್ತು ಸಾಲ ಮೇಳ.