ಗೋಕರ್ಣ: ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ರಾಮಚಂದ್ರಾಪುರ ಮಠದ ಹವ್ಯಕ ಮಹಾಮಂಡಳ ಮತ್ತು ಉಪಾಧಿವಂತ ಮಂಡಳಿಯ ಸಹಯೋಗದಲ್ಲಿ ಪುರಾಣ ಪ್ರಸಿದ್ದ ಮಹಾಬಲೇಶ್ವರ ದೇವಾಲಯದಲ್ಲಿ ಲೋಕಕಲ್ಯಾಣಾರ್ಥವಾಗಿ ಎರಡು ದಿನಗಳ ಕಾಲ ನಡೆಯಲಿರುವ ಅತಿರುದ್ರಾಭಿಷೇಕ ಕಾರ್ಯಕ್ರಮ ಶನಿವಾರ ಪ್ರಾರಂಭಗೊಂಡಿತು.

ಸಾವಿರಕ್ಕೂ ಹೆಚ್ಚಿನ ವೈದಿಕರು ರುದ್ರಪಾರಾಯಣ ಮಾಡಿದರು. ನಂತರದಲ್ಲಿ ಆತ್ಮಲಿಂಗಕ್ಕೆ ವಿಶೇಷ ಪೂಜೆ ನೆರವೇರಿತು. ದೇವಾಲಯದ ಮುಖ್ಯ ಅರ್ಚರಾದ ವೇ. ಶಿತಿಕಂಠ ಹಿರೇ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರವೇರಿತು.

RELATED ARTICLES  ಉತ್ತರಕನ್ನಡ ಜಿಲ್ಲೆಯಲ್ಲಿ ಮರು ಭೂ ಮಾಪನ ಕಾರ್ಯ: ಮಾಹಿತಿ ನೀಡಿದ ಸಚಿವರು

 ಇದೇ ಸಂದರ್ಭದಲ್ಲಿ ಶ್ರೀ ದೇವರ ಉತ್ಸವ ನೆರವೇರಿತು. ಉತ್ಸವದ ಜೊತೆಯಲ್ಲಿ ಭಜನಾ ತಂಡ , ಪಂಚವಾದ್ಯ, ಚಂಡೆ, ಶಂಖ, ಜಾಗಟೆ ಸಹಿತ ವಿಶಿಷ್ಟ ವಾದ್ಯಘೋಷದ ಉತ್ಸವ ಭಕ್ತರನ್ನು ಆಕರ್ಷಿಸಿತು.

RELATED ARTICLES  ಉತ್ತರಕನ್ನಡದ ಹಲವೆಡೆ ಮುಂದುವರೆದ ಕೊರೋನಾ ಆರ್ಭಟ

ಹವ್ಯಕ ಮಹಾಮಂಡಳದ ಅಧ್ಯಕ್ಷೆ ಈಶ್ವರೀ ಬೇರ್ಕಡವು, ದೇವಾಲಯದ ಆಡಳಿತಾಧಿಕಾರಿ ಜಿ.ಕೆ.ಹೆಗಡೆ ಹಾಗೂ ಮಹಾಮಂಡಳ ಸದಸ್ಯರು ಮತ್ತು ಮಠದ ಶಿಷ್ಯ ವೃಂದ , ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ರಾಮಚಂದ್ರಾಪುರ ಮಠದ ಶಿಷ್ಯವರ್ಗ ಮತ್ತು ಉಪಾಧಿವಂತ ಮಂಡಳಿ ಸದಸ್ಯರು ಮತ್ತು ಊರಿನವರು ಪಾಲ್ಗೊಂಡಿದ್ದರು.