ಬರಹ – ಉಮೇಶ ಮುಂಡಳ್ಳಿ ಭಟ್ಕಳ
9945840552
ಸನಾತನ ಹಿಂದು ಸಂಸ್ಕøತಿಯಲ್ಲಿ ಗ್ರಾಮದೇವತೆಗಳ ಆರಾಧನೆ ಶತಶತಮಾನಗಳಿಂದ ನಡೆದುಕೊಂಡು ಬಂದಿದೆ. ಗ್ರಾಮದಲ್ಲಿ ಸ್ವಚ್ಚತೆ ಇಲ್ಲದಿರುವುದು, ಭಯ ಭಕ್ತಿಗಳ ಕೊರÀತೆ ಹೀಗೆ ನಾನಾ ಕಾರಣಗಳಿಂದ ಸಾಂಕ್ರಾಮಿಕ ರೋಗ ರುಜಿನಗಳಿಗೆ ತುತ್ತಾಗಿ ಅನೇಕ ಸಾವು ನೋವುಗಳು ಸಂಭವಿಸಿದಾಗಲೆಲ್ಲ ಇವುಗಳಿಂದ ಮುಕ್ತಿ ಕಾಣದೆ ಕಂಗಾಲಾದ ಜನರು ಇವುಗಳಿಂದ ಬಿಡುಗಡೆ ಹೊಂದಲು ಒಂದು ಶಕ್ತಿಯನ್ನು ಅಚಲವಾಗಿ ನಂಬಿ ಪೂಜಿಸುತ್ತಾ ಬಂದಿರುವುದನ್ನು ನಾವು ಕೇಳಿರಿತ್ತೇವೆ.
“ಸಂಸಾರೇಸ್ಮಿನ್ ಮಹಾಘೋರೇ ಜನ್ಮರೋಗ ಭಯಾಕುಲೇ
ಅಯಮೇಕೋ ಮಹಾಭಾಗ: ಪೂಜ್ಯತೇಯದಧೋಕ್ಷಜ:”
ಕಲಿಯುಗದ ಸಂಸಾರ ಸಾಗರ ಬಹಳ ಘೋರವಾದದ್ದು, ಬಹಳ ಮುಖ್ಯವಾದ ಈ ದೇಹಕ್ಕೆ ಎಂದಿಗಾದರೂ ರೋಗ ಬರಬಹುದು, ಎಂದಾದರೂ ಮೃತ್ಯು ಭಾಧಿಸಬಹುದು. ಹಾಗಾಗಿ ನಿತ್ಯವು ದೇವಿಯ ಆರಾಧನೆಯಿಂದ ಅವಳ ಅನುಗ್ರಹ ಪಡೆದು ತೊಂದರೆಯಿಂದ ದೂರವಿರಬಹುದು. ಹೀಗೆ ಭಯ ಭಕ್ತಿಯಿಂದ ಹುಟ್ಟಿಕೊಂಡ ಶಕ್ತಿ ಅಮ್ಮನ ರೂಪದಲ್ಲಿ ದುರ್ಗೆಯಾಗಿ, ಗ್ರಾಮದೇವತೆಯಾಗಿ, ದುರ್ಗಾಪರಮೇಶ್ವರಿಯಾಗಿ ರೂಪ ಗೊಂಡಿದ್ದಾಳೆ ಎನ್ನುವ ಅಚಲ ನಂಬಿಕೆ ನಮ್ಮದು.
ಇಂತಹ ಶಕ್ತಿ ದೇವತೆಗಳಲ್ಲಿ ಒಂದಾದ ಶಿರಾಲಿ ಅಳ್ವೆಕೋಡಿಯ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಎರಡು ವರ್ಷಕ್ಕೊಮ್ಮೆ ಅದ್ದೂರಿಯಾಗಿ ಮಾರಿಜಾತ್ರಾ ಮಹೋತ್ಸವ ನಡೆಯುತ್ತದೆ. ಜನವರಿ 15, 16 ನಡೆಯುವ ಮಾರಿ ಜಾತ್ರಾ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಈ ವಿಶೇಷ ಲೇಖನ.
ಸುಮಾರು ಮುನ್ನೂರು ವರ್ಷಗಳಿಗಿಂತಲೂ ಹಿಂದೆ ನಿರ್ಜನವಾದ ಕೆದಗೆ ಹಿಂಡಿನ ದಟ್ಟ ಪೊದೆಗಳಿಂದ ಆವೃತ್ತವಾದ ಕಡಲಂಚಿನ ಪ್ರದೇಶವೊಂದರಲ್ಲಿ ನಿತ್ಯ ಹಸುವೊಂದು ತಾನಾಗಿಯೇ ಹಾಲನೆರೆಯುವುದು ಕಂಡುಬರುತ್ತದೆ. ಪ್ರತಿ ನಿತ್ಯವು ಹಸುವು ಪೊದೆಯ ಹಿಂಡಿನಲ್ಲಿ ಹೋಗುವುದನ್ನು ಗಮನಿಸಿದ ಈ ಪರಿಸರದ ಹಿರಿಯರೊಬ್ಬರು ಹಸುವನ್ನು ಹಿಂಬಾಲಿಸುತ್ತಾರೆ. ಕೊನೆಗೂ ಅಲ್ಲಿ ಒಂದು ದೇವಿಯ ವಿಗ್ರಹವಿರುವುದು ಮತ್ತು ನಿತ್ಯವು ಆ ಹಸುವು ಅಲ್ಲಿನ ವಿಗೃಹಕ್ಕೆ ಹಾಲೆಯುವುದು ಗೋಚರವಾಗುತ್ತದೆ. ಇದರಿಂದ ಪ್ರೇರಣೆಗೊಂಡ ಊರ ಜನರು ಈ ದೇವರ ವಿಗೃಹಕ್ಕೆ ಚಿಕ್ಕ ಗುಡಿಯನ್ನು ಕಟ್ಟಿ ಪೂಜಿಸುವ ನಿರ್ಧಾರಕ್ಕೆ ಬರುತ್ತಾರೆ. ಎಲ್ಲರೂ ಒಂದಾಗಿ ಕೂಡಿಕೊಂಡು ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಹಂಚಿನ ಮಾಡಿನ ಚಿಕ್ಕ ಗುಡಿಯನ್ನು ನಿರ್ಮಿಸುತ್ತಾರೆ. ಗೋಳಿಕೇರಿ ಎನ್ನುವ ಹವ್ಯಕ ಬ್ರಾಹ್ಮಣ ಕುಟುಂಬದವರನ್ನು ಅರ್ಚಕರನ್ನಾಗಿ ನೇಮಿಸಿ, ಶೃದ್ಧೆಯಿಂದ ಪೂಜಾ ಕೈಂಕರ್ಯವನ್ನು ನಡೆಸಿಕೊಂಡು ಬರುತ್ತಾರೆ. ಕಾಲಕ್ರಮೇಣ ಗೋಳಿಕೇರಿ ಭಟ್ಟರಿಗೆ ಅನಾನುಕೂಲವಾದ ಕಾರಣ ಮೂಡಭಟ್ಕಳದ ಪುರಾಣ ಕ ಕುಟುಂಬ ಇಲ್ಲಿನ ಪೂಜಾ ಕಾರ್ಯವನ್ನು ಮುನ್ನಡೆಸಿಕೊಂಡು ಬರುತ್ತದೆ.
ಹೀಗೆ ಗ್ರಾಮದ ಎಲ್ಲ ಜನಾಂಗದ ಕಷ್ಟ ಕಾರ್ಪಣ್ಯಗಳನ್ನು ದೂರಗೊಳಿಸುತ್ತಾ ದುರ್ಗಾಪರಮೇಶ್ವರಿಯಾಗಿ ಎಲ್ಲರ ಆರಾಧ್ಯ ದೈವವಾಗುತ್ತಾಳೆ. ಈ ದೇವಿಯಲ್ಲಿ ಅನೇಕ ವಿಶೇಷತೆಗಳನ್ನು ಪವಾಡಗಳನ್ನು ಕಂಡವರು ಇಂದಿಗೂ ಇದ್ದಾರೆ. ದೇವಾಲಯದ ಇತಿಹಾಸದ ಬಗ್ಗೆ ಯಾವುದೆ ಲಿಖಿತ ಮೂಲಗಳು ಇಲ್ಲದೇ ಇದ್ದರೂ ತುಂಬಾ ಹಿಂದಿನದು ಎಂದು ಹೇಳಬಹುದಾಗಿದೆ.
ಕ್ರಮೇಣ ಗ್ರಾಮದ ಮೀನುಗಾರ ಜನಾಂಗವಾದ ಮೊಗೇರ, ಕೃಷಿಕ ವರ್ಗದವರಾದ ನಾಮಧಾರಿ, ದೇವಾಡಿಗ, ಸಾರಸ್ವತ, ಗೌಡ ಸಾರಸ್ವತ ಕೊಂಕಣ ಹೀಗೆ ಎಲ್ಲ ಜನಾಂಗದವರ ಅಮ್ಮನಾಗಿ ಊರನ್ನು ಕಾಯುವ ಮಹಾ ಮಾತೆಯಾಗುತ್ತಾಳೆ.
ಕಡಲನ್ನೆ ನಂಬಿ ಜೀವನ ನಡೆಸುತ್ತಿದ್ದ ಮೀನುಗಾರರು ಪ್ರತಿ ದಿನ ಮೀನುಗಾರಿಕೆಗೆ ತೆರಳುವಾಗ ತಾಯಿಯಲ್ಲಿ ಬೇಡಿ ಉದ್ಯೋಗಕ್ಕೆ ಹೊರಹೋಗುವ ರೂಡಿಯಾಯಿತು. ಭಕ್ತಿಯಿಂದ ತಾಯಿಯಲ್ಲಿ ಬೇಡಿ ಮೀನುಗಾರಿಕೆಗೆ ತೆರಳಿದ ಪ್ರತಿಯೊಬ್ಬನಿಗೂ ಆದಾಯ ಅಧಿಕವಾಗತೊಡಗಿತು. ಕೇವಲ ಪಾತಿ ದೋಣ ಯನ್ನು ನಂಬಿದ್ದ ಅನೇಕರು ಯಾಂತ್ರಿಕೃತ ದೋಣ ಯನ್ನು ಕೊಂಡುಕೊಂಡು, ಆರ್ಥಿಕವಾಗಿ ಸಭಲರಾಗತೊಡಗಿದರು. ತಮ್ಮ ಎಲ್ಲ ಈ ಏಳಿಗೆಗೆ ಕಾರಣಳಾದವಳು ತಾಯಿ ದುರ್ಗಾಪರಮೇಶ್ವರಿ ಎನ್ನುವ ನಂಬಿಕೆ ಉಳ್ಳ ಮೀನುಗಾರರು, ತಮ್ಮ ಪ್ರತಿ ದಿನದ ಆದಾಯದ ಒಂದು ಭಾಗವನ್ನು ದೇವರಿಗೆ ಮೀಸಲಿಡಲು ನಿರ್ಧರಿಸಿದರು. ಈ ಶ್ರೀ ಕ್ಷೇತ್ರ ಜ್ಯಾತ್ಯಾತೀತ ನೆಲೆಯಲ್ಲಿ ಗುರುತಿಸಿಕೊಂಡು ಮುನ್ನಡೆಸಿಕೊಮಡು ಬರುತ್ತಿದೆ.
ಧರ್ಮ ಕಾರ್ಯದ ಜೊತೆ ಜೊತೆಗೆ ಶೈಕ್ಷಣ ಕ, ಸಾಮಾಜಿಕ ಸಾಹಿತ್ಯಕ ಸಾಂಸ್ಕøತಿಕ ಕ್ಷೇತ್ರದಲ್ಲಿ ಕ್ಷೇತ್ರ ತನ್ನದೇ ಆದ ಕೊಡುಗೆ ಸಲ್ಲಿಸುತ್ತಿರುವುದು ಕ್ಷೇತ್ರದ ಘನತೆಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ. ಕ್ಷೇತ್ರದಲ್ಲಿ ನಿತ್ಯ ಅನ್ನದಾನ ಸೇವೆ, ಭಕ್ತಾದಿಗಳಿಗೆ ಯಾತ್ರಿ ನಿವಾಸ, ಅಭಯ ಪ್ರಸಾದ ಸೇವೆ, ತೊಟ್ಟಿಲು ಸೇವೆ ಅನೇಕ ಸೌಕರ್ಯಗಳನ್ನು ಆಡಳಿತ ಮಂಡಳಿಯ ವತಿಯಿಂದ ಕಲ್ಪಿಸಲಾಗುತ್ತಿದೆ. ದೇವಸ್ಥಾನದ ವತಿಯಿಂದ ಆರಂಭಿಸಲಾದ ಶ್ರೀ ದುರ್ಗಾಪರಮೆಶ್ವರಿ ಪ್ರೌಡಶಾಲೆ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದಾಹವನ್ನು ತಣ ಸಿ ಇತ್ತೀಚೆಗೆ ರಜತ ಮಹೋತ್ಸವ ಕೂಡ ಆಚರಿಸಿಕೊಂಡಿದೆ.
ಇಂತ ಪುಣ್ಯ ಕ್ಷೇತ್ರದಲ್ಲಿ ಜನವರಿ 15, 16 ಎರಡು ದಿನಗಳು ಮಾರಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಎರಡು ದಿನಗಳ ಕಾಲ ನಡೆಯುವ ಈ ಮಾರಿ ಜಾತ್ರಾ ಮಹೋತ್ಸವದಲ್ಲಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರ ದಂಡೆ ಇಲ್ಲಿ ನೆರೆಯುತ್ತದೆ. ಅಷ್ಟೋಂದು ಭಕ್ತಾದಿಗಳು ಬಂದರೂ ಯಾವುದೇ ಅಡಚಣೆ ತೊಂದರೆಗಳಿಲ್ಲದೆ ಎಲ್ಲ ಭಕ್ತಾಧಿಗಳಿಗೂ ದೇವರ ದರ್ಶನ ಭಾಗ್ಯ ದೊರಕುತ್ತದೆ. ಇದಕ್ಕೆಲ್ಲ ಕಾರಣ ದೇವಿಯ ಕೃಪೆ ಮತ್ತು ಊರಿನ ಸಮಸ್ತ ನಾಗರಿಕರ ಏಕಮುಖ ಸಹಕಾರ ಸೇವಾ ಮನೋಭಾವ. ಪ್ರತಿಯೊಬ್ಬ ನಾಗರಿಕನು ತನ್ನ ಕೈಲಾದ ಸೆವೆಯಲ್ಲಿ ತನ್ನನ್ನು ತೊಡಗಿಸಿ ಕೊಳ್ಳುತ್ತಾನೆ. ಪರೂರುಗಳಿಂದಲೂ ಎರಡು ದಿನಗಳ ಮಾರಿ ಜಾತ್ರಾ ಮಹೋತ್ಸವದಲ್ಲಿ ತಾಯಿಯ ಸೇವೆ ಮಾಡಬೇಕೆಂದು ಭಕ್ತರು ಭಾಗವಹಿಸುವುದನ್ನು ನಾವು ಕಾಣಬಹುದು. ಇದು ಅಮ್ಮನ ಸಂಕಲ್ಪವೇ ಹೊರತು ಬೇರೆನೂ ಅಲ್ಲ. ಎರಡೂ ದಿನಗಳು ಜಾತ್ರೆಗೆ ಬರುವ ಲಕ್ಷಾಂತರ ಜನರಿಗೆ ಅನ್ನಸಂತರ್ಪಣೆ ವ್ಯವಸ್ಥೆ ನಡೆದಿರುತ್ತದೆ. ಮಾರಿ ಅಮ್ಮ, ಮಾತಂಗಿಯ ಜೊತೆಗೂಡಿ ಅಂದು ದೇವಾಲಯದ ಸಭಾಭವನದ ಎದುರು ನಿರ್ಮಿಸಿರುವ ಭವ್ಯ ಮಂಟಪದಲ್ಲಿ ಸಿಂಹವಾಹಿಯಾಗಿ ಶೋಭಿಸುತ್ತಾಳೆ. ಎರಡು ದಿನಗಳ ಕಾಲ ಅಳ್ವೆಕೋಡಿ ಕ್ಷೇತ್ರ ಬೆಳದಿಂಗಳಂತೆ ಸಂಭ್ರಮದಿಂದ ಕಂಗೊಳಿಸುತ್ತದೆ.ಈ ಎರಡು ದಿನದ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾದೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೆರ್ ಸ್ವಾಮಿಜಿಯವರು, ಪರಮ ಪೂಜ್ಯ ಶ್ರೀ ಸದ್ಯೋಜ್ಜಾತ ಶಂಕರಾಶ್ರಮ ಸ್ವಾಮಿಜಿಗಳು ಹಾಗೂ ಉಜಿರೆಯ ಪರಮ ಪೂಜ್ಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಯವರು ಕ್ಷೇತ್ರದಲ್ಲಿ ಉಪಸ್ಥಿತರಿರುವುದರಿಂದ ಈ ದಿನ ಇನ್ನೂ ವಿಶೇಷತೆಯಿಂದ ಕೂಡಿರುತ್ತದೆ. ಜಾತ್ರೆಯ ಕೊನೆಯ ಗಳಿಗೆ ಮಾರಿ ಅಮ್ಮನ ಮೆರವಣ ಗೆ. ಭವ್ಯ ಅಲಂಕೃತ ವಾಹನದಲ್ಲಿ ಅಮ್ಮ ವೀರಾಜಮಾನಳಾಗಿ ಸುಮಾರು ಎಂಟು ಕಿ.ಮಿ.ಗಳ ವರೆಗೆ ಅಮ್ಮನ ಮೆರವಣ ಗೆ ಸಾಗುತ್ತದೆ. ಕ್ಷೇತ್ರದಿಂದ ಸಂಜೆ ಮೂರು ಗಂಟೆಯ ಸುಮಾರಿಗೆ ಪ್ರಾರಂಭವಾದ ಮಾರಿ ಜಾತ್ರಾ ವಿಸರ್ಜನಾ ಮೆರವಣ ಗೆ ಸಣಬಾವಿಯ ಮೂಲಕ ಬೆಂಗ್ರೆ , ಮಾವಿನಕಟ್ಟೆ ಮತ್ತು ಶಿರಾಲಿ ಮಾರ್ಗವಾಗಿ ಗುಡಿಹಿತ್ತಲು ಶ್ರೀ ಕಂಚಿನ ದುರ್ಗಾ ಪರಮೇಶ್ವರಿ ಅಮ್ಮನವರ ದೇವಾಲಯದ ಹತ್ತಿರ ಇರುವ ನದಿಯಲ್ಲಿ ಮಾತಂಗಿ ಅಮ್ಮವನರ ಮೂರ್ತಿ ವಿಸರ್ಜನೆ ನಡೆಯುವುದರೊಂದಿಗೆ ಮಾರಿ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳುತ್ತದೆ.
ಈ ವರ್ಷದ ಜಾತ್ರಾ ಮಹೊತ್ಸವದಲ್ಲಿ ಒಂದು ವಿಶೇಷವೆಂದರೆ ಅಮ್ಮನವರ ಕುರಿತಾಗಿ ಈ ಕ್ಷೇತ್ರದ ಸಂಪೂರ್ಣ ಪರಿಚಯವನ್ನು ಸದ್ಭಕ್ತರಿಗೆ ಸಾಹಿತ್ಯ ಮುಖೇನ ಮನೆ ಮನೆಯನ್ನು ತಲುಪಿಸುವ ಕಾರ್ಯ ಆಡಳಿತ ಮಂಡಳಿಯವರು ಮಾಡುತ್ತಿದ್ದಾರೆ. ಲೇಖಕ ಉಮೇಶ ಮುಂಡಳ್ಳಿಯವರಿಂದ ಬರೆಯಲ್ಪಟ್ಟ ಶ್ರೀ ಮಾತಾ ಮಹಿಮಾ ಕೃತಿಯನ್ನು ಶ್ರೀ ದುರ್ಗಾಪರಮೇಶ್ವರಿ ಸಾರ್ವಜನಿಕ ಟ್ರಸ್ಟ್ (ರಿ) ಪ್ರಕಟ ಮಾಡುತ್ತಿದ್ದು ಜಾತ್ರಾ ಮಹೋತ್ಸವದಲ್ಲಿ ಮಾರಾಟಕ್ಕೆ ಲಭ್ಯವಿರುತ್ತದೆ. ಪ್ರತಿಗಳಿಗಾಗಿ ಲೇಖಕರು ಹಾಗೂ ಆಡಳಿತ ಮಂಡಳಿಯವರನ್ನು ಸಂಪರ್ಕಿಸಬಹುದಾಗಿದೆ.