ಗೋಕರ್ಣ :ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಶ್ರೀ ರಾಮಚಂದ್ರಾಪುರಮಠ, ಇವರ ದಿವ್ಯ ಸಂಕಲ್ಪ ಮತ್ತು  ಮಾರ್ಗದರ್ಶನದಲ್ಲಿ  ಉಪಾಧಿವಂತ ಮಂಡಳ (ರಿ)  ಗೋಕರ್ಣ ಇವರ ನೇತೃತ್ವದಲ್ಲಿ , ಹವ್ಯಕ ಮಹಾಮಂಡಲದ ಸಹಯೋಗದೊಂದಿಗೆ ಶ್ರೀ ಕ್ಷೇತ್ರ ಗೋಕರ್ಣ ದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಲೋಕಕಲ್ಯಾಣಾರ್ಥ “ಅತಿರುದ್ರ” ಪಾರಾಯಣ , ಶ್ರೀ ದೇವರ ವಿಶೇಷ “ಪಲ್ಲಕ್ಕಿ ಉತ್ಸವ” ಸಂಪನ್ನಗೊಂಡಿತು .

RELATED ARTICLES  ಜಿಲ್ಲಾಮಟ್ಟದ ಕರಾಟೆ ಪಂದ್ಯಾವಳಿ : ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜನೆ : ಕರಾಟೆ ಕಲೆಯ ಮೂಲಕ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ : ರಾಜೇಂದ್ರ ಭಟ್ಟ.

ಶ್ರೀ ಕ್ಷೇತ್ರ ಉಪಾಧಿವಂತ  ಮಂಡಳದ ವತಿಯಿಂದ “ಮಹಾರುದ್ರ ಹವನ” ಸಹ ಜರುಗಿತು .  ಪ್ರಧಾನ ಅರ್ಚಕ ವೇ ಶಿತಿಕಂಠ ಹಿರೇಭಟ್ ಹಾಗು ಉಪಾಧಿವಂತ ಮಂಡಳದ ಸದಸ್ಯರು , ಹವ್ಯಕ ಮಹಾ ಮಂಡಳದ ಅಧ್ಯಕ್ಷೆ ಶ್ರೀಮತಿ ಈಶ್ವರಿ ಬೇರ್ಕಡವು, ಕಾರ್ಯದರ್ಶಿ ಶ್ರೀ ಹರಿಪ್ರಸಾದ ಪೆರಿಯಪ್ಪು ಹಾಗು ಪದಾಧಿಕಾರಿಗಳು,  ಮಂಡಲಗಳ ಅಧ್ಯಕ್ಷರು, ಪದಾಧಿಕಾರಿಗಳು , ದೇವಾಲಯದ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಮತ್ತು ಶ್ರೀರಾಮಚಂದ್ರಾಪುಮಠದ ಶಿಷ್ಯ ವೃಂದದವರು  ಭಾಗವಹಿಸಿದ್ದರು . 

RELATED ARTICLES  ಶಿರಸಿ–ಸಿದ್ದಾಪುರ ವಿಧಾನಸಭಾ ಕ್ಷೇತ್ರದ 50ಸಾವಿರಕ್ಕೂ ಹೆಚ್ಚು ಮತದಾರರನ್ನು ಕುಳಿತಲ್ಲಿಂದಲೇ ಸಂಪರ್ಕಿಸಿ, ಮತ ಯಾಚಿಸಲು ಬಿಜೆಪಿ ವ್ಯವಸ್ಥಿತ ಕಾರ್ಯತಂತ್ರ ರೂಪಿಸಿದೆ!

ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಭಾಗವಹಿಸಿದ್ದ ರುದ್ರಾಧ್ಯಾಯಿಗಳನ್ನು ಉದ್ಧೇಶಿಸಿ  ಆಶೀರ್ವಾದ ಪೂರ್ವಕ ಸಂದೇಶವನ್ನು ಕಳುಹಿಸಿದ್ದರು .