ಮೇಷರಾಶಿ:- ನಿಮ್ಮ ನಂಬಿಕೆ ಹಾಗೂ ಸ್ಥೈರ್ಯ, ಧೈರ್ಯಗಳು ನಿಮ್ಮ ದಾರಿಯಲ್ಲಿನ ಅಡೆತಡೆಗಳನ್ನು ನಿವಾರಿಸುತ್ತವೆ. ಹಾಗಾಗಿ ನೀವು ಸುಲಭವಾಗಿ ಇಚ್ಛಿತ ಗುರಿಯನ್ನು ಮುಟ್ಟಬಲ್ಲಿರಿ. ಸಾಮಾಜಿಕವಾಗಿ ಗೌರವಿಸಲ್ಪಡುವಿರಿ.
ವೃಷಭ:- ನಿಮಗಾಗಿ ಬಹು ಸೂಕ್ತ ಸಮಯದ ಪದೋನ್ನತಿಯೊಂದು ಕಾದಿದೆ. ನಿರಾಳ ಆಗಿ. ಮನಸ್ಸಿನ ತುಮುಲಗಳೆಲ್ಲ ತಮ್ಮಷ್ಟಕ್ಕೆ ಕಡಿಮೆ ಆಗುವವು. ಜಗತ್ತು ಸುಂದರವಾಗಿ ಕಾಣಿಸಿಕೊಳ್ಳುವುದು.
ಮಿಥುನ:-ಬಹು ಎಚ್ಚರಿಕೆಯಿಂದ ಹೆಜ್ಜೆಯನ್ನು ಇಡಬೇಕಾಗುವುದು. ಅನವಶ್ಯಕ ವಾದ ವಿವಾದಗಳಲ್ಲಿ ಸಿಲುಕದಿರಿ. ಕುಲದೇವರನ್ನು ಪ್ರಾರ್ಥನೆ ಮಾಡಿ. ಆರೋಗ್ಯದ ಕಡೆ ಎಚ್ಚರವಿರಲಿ.
ಕಟಕ:- ಜನರಿಗೆ ಸಹಾಯ ಮಾಡುವ ನಿಮ್ಮ ಮನೋಭಾವದಿಂದಾಗಿ ಎಲ್ಲಾ ರೀತಿಯ ಶ್ಲಾಘನೆ ಪಡೆಯುವಿರಿ. ದೈವಾನುಗ್ರಹ ಆಗುತ್ತಿರುವುದರಿಂದ ನಿಮ್ಮ ಎಲ್ಲಾ ಮನೋಕಾಮನೆಗಳು ಪೂರ್ಣಗೊಳ್ಳುವವು.
ಸಿಂಹ:- ನಿಮ್ಮ ಬುದ್ಧಿಬಲ ಶಕ್ತಿಯುತವಾದದ್ದು. ಸಂಪನ್ನವಾದ ನಿಮ್ಮ ಊಹೆಗಳು ಕಾರ್ಯರೂಪಕ್ಕೆ ಯಶಸ್ಸನ್ನು ನೀಡುವವು. ಮಡದಿ ಮಕ್ಕಳ ಜತೆ ಸ್ವಲ್ಪ ಕಾಲ ಕಳೆಯುವುದು ಒಳ್ಳೆಯದು.
ಕನ್ಯಾ:- ಅರಿತು ನಡೆಯುವ ಗೆಳೆಯರ ಗುಂಪು ನಿಮ್ಮ ಸಹಾಯಕ್ಕೆ ಬಂದು ಅಭಿವೃದ್ಧಿಗೆ ದಾರಿ ಮಾಡಿಕೊಡುವುದು. ನೂತನ ಕಾರ್ಯಯೋಜನೆಗಳಿಗೆ ಬೆಂಬಲ ನೀಡುವುದು. ಹಾಗಾಗಿ ನೀವು ವೃತ್ತಿರಂಗದಲ್ಲಿ ಬೆಳೆಯಲು ಸಹಕಾರಿ ಆಗುವುದು.
ತುಲಾ:- ಹೊಸದಾದ ಜವಾಬ್ದಾರಿಯೊಂದು ನಿಮ್ಮ ಹೆಗಲೇರುವ ಸಾಧ್ಯತೆ ಅಧಿಕವಾಗಿರುವುದು. ಸಮಾಜದಲ್ಲಿ ಪ್ರಭಾವಿ ಜನರ ಸಂಪರ್ಕ ಬೆಳೆಯುವುದರಿಂದ ನಿಮ್ಮ ಹಣಕಾಸಿನ ವ್ಯವಸ್ಥೆಯಲ್ಲಿ ಪ್ರಗತಿ ಕಂಡು ಬರುವುದು.
ವೃಶ್ಚಿಕ:- ಹಿರಿಯರನ್ನು ದೂರ ಇಡಬೇಡಿ ಮತ್ತು ಅವರ ದಿನಚರಿಗಳನ್ನು ದೂಷಿಸಬೇಡಿ. ಅವರ ಸೇವೆಯನ್ನು ಮಾಡಿ. ಇದು ಮಹತ್ತರವಾದ ಗೆಲುವನ್ನು ಸಾಧಿಸಲು ಅನುಕೂಲಕರ.
ಧನುಸ್ಸು:- ಅಪತ್ ಕಾಲದಲ್ಲಿ ಆದವನೇ ನೆಂಟ ಎಂಬಂತೆ ನಿಮ್ಮ ಕಷ್ಟದ ದಿನಗಳಲ್ಲಿ ನಿಮ್ಮ ಮಕ್ಕಳು, ಬಂಧು-ಬಾಂಧವರು ಸಹಾಯ ಹಸ್ತ ನೀಡುವುದರಿಂದ ಜೀವನದಲ್ಲಿ ಹೊಸ ಬೆಳಕೊಂದು ಮೂಡುವುದು. ಜೀವನ ನಡೆಸಲು ಧೈರ್ಯ ಬರುವುದು.
ಮಕರ:- ಮೇಲಧಿಕಾರಿಯ ಎದುರು, ವಿಷಯ ಗೊತ್ತಿದ್ದರೂ ಮಾಡುವ ಕೆಲಸದಲ್ಲಿ ಅವರ ಸಲಹೆಯನ್ನು ಸ್ವೀಕರಿಸಿ ಮುಂದಡಿ ಇಟ್ಟಲ್ಲಿ ಅವರಿಗೂ ಖುಷಿ ಆಗುವುದು. ಇಲ್ಲವೆ ನಿಮ್ಮ ಬುದ್ಧಿಚಾತುರ‍್ಯಕ್ಕೆ ಅಸೂಯೆ ಪಡುವರು.
ಕುಂಭ:- ಅಲ್ಪರ ಸಂಗ ಅಭಿಮಾನ ಭಂಗ ಎನ್ನುವಂತೆ ಕ್ಷ ುಲ್ಲಕರನ್ನು ದೂರವಿಡುವುದೇ ಒಳ್ಳೆಯದು. ಇಲ್ಲದೆ ಇದ್ದಲ್ಲಿ ಅವರು ನಿಮ್ಮ ಮಾನಹಾನಿ ಮಾಡುವರು. ಆಂಜನೇಯ ಸ್ವಾಮಿ ಸ್ತೋತ್ರವನ್ನು ಪಠಿಸಿ.
ಮೀನ:- ನಿಮಗೆ ನೀವೇ ಗುರುವಾಗಿ ನಿಮ್ಮ ಮಿತಿಯ ಬಗ್ಗೆ ತಿಳಿಯಿರಿ. ಜನರು ನಿಮ್ಮನ್ನು ಪ್ರಶಂಸಿಸುವಂತಹ ದೈವಕೃಪೆಗೆ ಪಾತ್ರರಾಗಿರುವುದರಿಂದ ಮುಂದಿನ ದಿನಗಳು ಸಹ ಉತ್ತಮವಾಗಿರುತ್ತವೆ.