ಭಟ್ಕಳ- ಜಿಲ್ಲೆಯ ಸುಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಭಟ್ಕಳ ತಾಲೂಕಿನ ಅಳ್ವೆಕೋಡಿ ದುರ್ಗಾಪರಮೇಶ್ವರಿ ಕ್ಷೇತ್ರ ಪರಿಚಯ ಒಳಗೊಂಡ ಮಾತಾ ಮಹಿಮಾ ಎಂಬ ಪುಸ್ತಕ ಜನವರಿ ೧೫ ರಂದು ಲೋಕಾರ್ಪಣೆಗೊಳ್ಳಲಿದೆ.
ಇದುವರೆಗೆ ನಾಲ್ಕು ಕವನ ಸಂಕಲನಗಳನ್ನು ,ಕಥಾಸಂಕಲನ ಹಾಗೂ ಪ್ರವಾಸಿ ತಾಣಗಳ ಪರಿಚಯ ಸೇರಿದಂತೆ ಆರು ಕೃತಿಗಳನ್ನು ಹೊರತಂದಿರುವ ಜಿಲ್ಲೆಯ ಪ್ರತಿಭಾನ್ವಿತ ಯುವ ಬರಹಗಾರ ಉಮೇಶ ಮುಂಡಳ್ಳಿ ಅವರು ಬರೆದ ೭ ನೇ ಕೃತಿ ಮಾತಾ ಮಹಿಮಾ ಪುಸ್ತಕವನ್ನು ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಸಾರ್ವಜನಿಕ ಟ್ರಸ್ಟ್ ಪ್ರಕಟಿಸಿದ್ದು, ಜನವರಿ ಹದಿನೈದರಂದು ನಡೆಯುವ ಮಾರಿ ಜಾತ್ರಾ ಮಹೋತ್ಸವದಲ್ಲಿ ಚಿತ್ರಾಪುರ ಮಠದ ಶ್ರೀ ಶ್ರೀ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿಯವರು ಶ್ರೀ ಮಾತಾ ಮಹಿಮಾ ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸರ್ವ ಸದಸ್ಯರು, ಮಾರಿ ಜಾತ್ರಾ ಮಹೋತ್ಸವದ ಸರ್ವ ಸದಸ್ಯರು ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.