ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪತ್ರಕರ್ತರ ಸಂಘದ ಸಹಯೋಗದಲ್ಲಿ ಶ್ರಾವಣ ಕವಿಗೋಷ್ಠಿ ಭಟ್ಕಳದ ಕಮಲಾವತಿ ರಾಮನಾಥ ಶ್ಯಾನಭಾಗ ಸಭಾಗೃಹದಲ್ಲಿ ಜರುಗಿತು. ಈವರೆಗೂ ಅವಕಾಶ ಸಿಗದಿರುವ ಭಟ್ಕಳ ತಾಲೂಕಿನ  ಉದಯೋನ್ಮುಖ ಮತ್ತು ಎಲೆಮರೆಕಾಯಿಯಂತಿರುವ    ಕವಿಗಳಿಗೆ ವೇದಿಕೆಯನ್ನು ಕಲ್ಪಿಸುವ ಸಲುವಾಗಿ  ಕಸಾಪ ಶ್ರಾವಣ ಕವಿಗೋಷ್ಠಿಯನ್ನು ಏರ್ಪಡಿಸಿತ್ತು.ಗೋಷ್ಠಿಯಲ್ಲಿ  ಕವಯತ್ರಿ ಗೀತಾ ಮೋಹನ ಶೇಟ್,      ಯುವ ಕವಿಗಳಾದ ಗುರುಸುಧೀಂದ್ರ ಕಾಲೇಜಿನ ಉಪನ್ಯಾಸಕ ಆನಂದ ದೇವಡಿಗ,ವಿದ್ಯಾರ್ಥಿನಿ ಮೇಘ ದೇವಾಡಿಗ, ನ್ಯೂಇಂಗ್ಲೀಷ್ ಪ.ಪೂ.ಕಾಲೇಜಿನ ವಿಶಾಲಾಕ್ಷಿ ನಾಯ್ಕ, ಬೀನಾ ವೈದ್ಯ ಕಾಲೇಜಿನ  ನಿಖಿತಾ ಖಾರ್ವಿ ತಮ್ಮ ಸ್ವರಚಿತ ಕವನ  ವಾಚಿಸಿದರು.  ಗೋಷ್ಠಿಯ ಅಧ್ಞಕ್ಷತೆ ವಹಿಸಿದ್ದ ಕವಿ ಶ್ರೀಧರ ಶೇಟ್ ಶಿರಾಲಿ ಮಾತನಾಡಿ ಕಾವ್ಯ ಎಂದರೇನು ಕಾವ್ಯ ಹೇಗಿರಬೇಕು ಉದಯೋನ್ಮುಖ ಕವಿಗಳು ಕವಿತೆ ರಚಿಸುವಲ್ಲಿ ಗಮನಿಸಬೇಕಾದ ಅಂಶಗಳ ಕುರಿತು ಮಾತನಾಡಿ ಹಿರಿಯ ಕವಿಗಳ ಕವಿತೆಗಳನ್ನು ಉದಾಹರಿಸಿ ತಮ್ಮ ಕವನವೊಂದನ್ನು ಪ್ರಸ್ತುತಪಡಿಸಿದರು. ಕಸಾಪ ತಾಲೂಕಾಧ್ಯಕ್ಷ   ಗಂಗಾಧರ ನಾಯ್ಕ ತಮ್ಮ ಆಶಯ ನುಡಿಗಳಲ್ಲಿ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ ಶ್ರಾವಣ ಕವಿಗೋಷ್ಠಿ ಆಯೋಜಿಸಿಲಾಗಿದೆ. ತೆರೆ ಮರೆಯಲ್ಲಿರುವ ಇನ್ನಷ್ಟು ಪ್ರತಿಭೆಗಳನ್ನು ಹುಡುಕಿ ಮುಂದಿನ ದಿನಗಳಲ್ಲಿ ವೇದಿಕೆ ಕಲ್ಪಿಸಲಾಗುವುದು ಎಂದು ತಿಳಿಸಿ ಸರ್ವರನ್ನು ಸ್ವಾಗತಿಸಿದರು. ಕಸಾಪ ಗೌರವ ಕಾರ್ಯದರ್ಶಿ ಎಂ.ಪಿ.ಬಂಢಾರಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಕವಿಗೋಷ್ಠಿಞಲ್ಲಿ ಭಾಗವಿಹಿಸಿದ ಕವಿಗಳಿಗೆ ಪ್ರಶಂಸನಾ ಪತ್ರ ಹಾಗೂ  ಪುಸ್ತಕ ಕಾಣಿಕೆ ನೀಡಲಾಯಿತು, ವೇದಿಕೆಯಲ್ಲಿ  ಪತ್ರಕರ್ತ ಸಂಘದ ಅಧ್ಯಕ್ಷ ವಿಷ್ಣು ದೇವಡಿಗ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪತ್ರಕರ್ತ ಸಂಘದ ಸದಸ್ಯರು, ಸಾಹಿತಿಗಳು, ಸಿದ್ಧಾರ್ಥ ಪ.ಪೂ.ಕಾಲೇಜು ಮತ್ತು ಗುರು ಸುಧೀಂದ್ರ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ವಿಧ್ಯಾರ್ಥಿಗಳು   ಉಪಸ್ಥಿತರಿದ್ದರು.