ಪತ್ತನಂತ್ತಿಟ್ಟ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ಎಂಬ ಸುಪ್ರೀಂ ಕೋರ್ಟ್ ತೀರ್ಪು ಹಾಗೂ ಭಾರಿ ವಿವಾದಗಳನ್ನು ಕಂಡಿದ್ದ ಪ್ರಸಕ್ತ ವರ್ಷದಲ್ಲಿ ಇಂದು ಮಕರ ಜ್ಯೋತಿ ಕಂಡುಬಂತು.
ಅಯ್ಯಪ್ಪ ಸನ್ನಿಧಾನಕ್ಕೆ ಮಹಿಳೆಯರ ಪ್ರವೇಶ, ಭಾರಿ ವಿವಾದ, ಹಿಂಸಾಚಾರಗಳನ್ನು ಕಂಡಿದ್ದ ಈ ವರ್ಷದಲ್ಲಿ ಸೋಮವಾರ ರಾತ್ರಿ ಪೊನ್ನಂಬಲಮೇಡುವಿನಲ್ಲಿ ಮಕರ ಜ್ಯೋತಿ ಕಾಣಿಸಿಕೊಂಡಿತು.
ವಿವಾದಗಳ ನಡುವೆಯೂ ಭಕ್ತಭಾವವನ್ನು ಹೊಂದಿದ್ದ ಲಕ್ಷಾಂತರ ಮಂದಿ ಆಗಮಿಸಿದ್ದರು.
ಆದರೆ ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ಭಕ್ತರ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದೆ.
ತಿರುವಾಭರಣಂ ಉತ್ಸವ ವೇಳೆ ಈ ಮಕರ ಜ್ಯೋತಿ ಕಾಣಿಸಿಕೊಂಡಿತು.
ಕರ್ನಾಟಕ ಸಹಿತ ಹೊರರಾಜ್ಯಗಳ ಭಕ್ತರು ಹೆಚ್ಚಾಗಿದ್ದು, ಕೇರಳದ ಭಕ್ತ ಸಂಖ್ಯೆಯು ತೀರಾ ಕಡಿಮೆಯಾಗಿತ್ತು.
ಮಕರ ಜ್ಯೋತಿ ಉತ್ಸವಂದಗವಾಗಿ ಜ.19ರ ತನಕ ಶ್ರೀ ಕ್ಷೇತ್ರದ ಗರ್ಭಗುಡಿ ತೆರೆದು ಭಕ್ತರಿಗೆ ದರ್ಶನಕ್ಕೆ ಅವಕಾಶವಿರುವುದು. ಜ.20ರಂದು ರಾಜಪ್ರತಿನಿಗಳಿಗೆ ಮಾತ್ರ ಶಬರಿಮಲೆ ದರ್ಶನ ಪ್ರತ್ಯೇಕ ಅವಕಾಶವಿರುವುದು.
ಬಳಿಕ ಗರ್ಭಗುಡಿ ಬಾಗಿಲು ಮುಚ್ಚುವ ಮೂಲಕ ಈ ಮಕರ ಸಂಕ್ರಾಂತಿ ಉತ್ಸವ ಸಮಾಪ್ತಿಗೊಳ್ಳುವುದು. ಮಕರ ಜ್ಯೋತಿ ಹಿನ್ನೆಲೆಯಲ್ಲಿ ಶಬರಿಮಲೆ ಸನ್ನಿಧಾನದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.