ಕುಮಟಾ: ಮಂಡಳದ ಯುವಮೋರ್ಚಾ ಕಾರ್ಯಕಾರಣಿ ಹಾಗೂ ವಿವೇಕ ಬ್ಯಾಂಡ್ ಧಾರಣೆ ಕಾರ್ಯಕ್ರಮ ಯಶಸ್ವಿಯಾಗಿ ಸೋಮವಾರ ಜರುಗಿತು…
ಕಾರ್ಯಕಾರಣಿ ಯಲ್ಲಿ ಕುಮಟಾ ಮಂಡಳದ ಯುವಮೋರ್ಚಾ ನೂತನ ಅಧ್ಯಕ್ಷರನ್ನಾಗಿ ವಿಶ್ವನಾಥ ನಾಯ್ಕ ರವರನ್ನು ಹಿರಿಯರಾದ ವಿನೋದ ಪ್ರಭು ಘೋಷಣೆ ಮಾಡಿದರು.. ನಂತರ ಮಾತನಾಡಿದ ಅವರು ನಮ್ಮ ದೇಶ ಉತ್ತಮ ಅಭಿವೃದ್ಧಿ ಪಥದತ್ತ ಸಾಗಿದೆ.. ಇಡೀ ದೇಶ ಮೋದಿಯವರನ್ನು ಇನ್ನೊಮ್ಮೆ ಪ್ರಧಾನಿ ಮಾಡಬೇಕೆಂದು ಹೊರಟಿದೆ ಅದಕ್ಕಾಗಿ ನಾವು ಇವತ್ತಿನಿಂದಲೇ ನಮ್ಮ ನಮ್ಮ ಜವಾಬ್ದಾರಿ ಹಾಗೂ ನಮ್ಮ ಹುದ್ದೆ ಏನು ಏನು ಪಕ್ಷ ಕೊಟ್ಟಿದೆ ಅದನ್ನು ಸಮರ್ಥವಾಗಿ ನಿಭಾಯಿಸಬೇಕು.. ಪಕ್ಕಕ್ಕಾಗಿ ನಮ್ಮ ಸಮಯ ಮೀಸಲಿಟ್ಟು ಹಳ್ಳಿ ಹಳ್ಳಿಗಳಲ್ಲಿ ಪಕ್ಷದ ಸಂಘಟನೆ ಬಲಪಡಿಸಿ ನಮ್ಮ ನಮ್ಮ ಬೂತ್ ನಲ್ಲಿ ಹೆಚ್ಚಿನ ಕಾರ್ಯಕರ್ತರು ನಮ್ಮ ಪಕ್ಷದ ಕಡೆಗೆ ಬರುವಂತೆ ನಾವು ನೋಡಿಕೊಂಡು ಈ ಬಾರಿ ಮತ್ತೊಮ್ಮೆ ಮೋದಿಯವರನ್ನು ನಮ್ಮ ಅಭ್ಯರ್ಥಿ ಯನ್ನು ಗೆಲ್ಲಿಸುವ ಮುಖಾಂತರ ಪ್ರಧಾನಿ ಯನ್ನಾಗಿ ಮಾಡುವಲ್ಲಿ ಶ್ರಮ ವಹಿಸಬೇಕಾಗಿದೆ.. ಜೊತೆಗೆ ಇಪ್ಪತ್ತು ವರ್ಷಗಳ ನಂತರ ಕುಮಟಾದಲ್ಲಿ ಈಗ ನಮ್ಮ ಶಾಸಕರು ಇದ್ದಾರೆ ಅವರ ಸಲಹೆ ಸೂಚನೆಗಳ ಜೊತೆಗೆ ಉತ್ತಮ ಸಂಘಟನೆ ಮಾಡೋಣ ಎಂದರು..

RELATED ARTICLES  ಕುಮಟಾ : ಬಾಡದ ಜಾತ್ರೆ - ರಥ ಎಳೆದ ಭಕ್ತಗಣ.


ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ನಾಯ್ಕ ಪಕ್ಷ ನೀಡಿದ ಕೆಲ ಪ್ರಮುಖ ಕಾರ್ಯಕ್ರಮ ದ ಬಗ್ಗೆ ತಿಳಿಸಿ ಅದನ್ನು ನಾವು ಕಾರ್ಯಗತ ಗೊಳಿಸಬೇಕಿದೆ ಪ್ರತಿ ಬೂತ್ ನಲ್ಲೂ ಹೊಸ ಕಾರ್ಯಕರ್ತರನ್ನು ಸಂಘಟಿಸಬೇಕಿದೆ.. ದೇಶವನ್ನು ವಿಶ್ವಗುರುವನ್ನಾಗಿ ಮಾಡಹೊರಟ ಮೋದಿಜೀ ಯವರನ್ನು ಮತ್ತೊಮ್ಮೆ ಪ್ರಧಾನಿ ಯನ್ನಾಗಿ ಮಾಡಬೇಕಿದೆ.. ಆದರೆ ಹೆಚ್ಚಿನ ಶ್ರಮ ಅಗತ್ಯ ಇದೆ..ಅಧ್ಯಕ್ಷ ವಿಶ್ವನಾಥ್ ನಾಯ್ಕ ನೇತೃತ್ವದಲ್ಲಿ ಯುವಕರ ಪಡೆ ಹೆಚ್ಚಿನ ಸಮಯ ಪಕ್ಷದ ಕೆಲಸಕ್ಕೆ ಮೀಸಲಿಟ್ಟು ಪಕ್ಷವನ್ನು ಇನ್ನೂ ಹೆಚ್ಚು ಸಧೃಡಗೊಳಿಸೋಣ.. ಕರ್ನಾಟಕ ದಲ್ಲಿಯೇ ನಮ್ಮ ಕುಮಟಾ ಯುವಮೋರ್ಚಾ ಉತ್ತಮ ಸಂಘಟನೆ ಇದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಬೇಕಿದೆ ಎಂಬ ಆಶಯ ವ್ಯಕ್ತಪಡಿಸಿದರು..


ಶಿಕ್ಷಕರ ಪ್ರಕೋಷ್ಠ ಸಂಚಾಲಕ ಎಮ್ ಜಿ ಭಟ್ಟ ಯುವಮೋರ್ಚಾ ಯಾವ ರೀತಿ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು ಇಂದಿನ ಪಕ್ಷದ ಸಂಘಟನೆ ಹೇಗಿದೆ ಬರುವ ಚುನಾವಣೆಯಲ್ಲಿ ಹೆಚ್ಚಿನ ಶ್ರಮ ವಹಿಸಿ ಕೆಲಸಮಾಡಬೇಕಿದೆ ತಿಳಿದಷ್ಟು ಸುಲಭ ಎನ್ನುವ ಕಿವಿ ಮಾತನ್ನು ಹೇಳಿದರು.. ಕುಮಟಾ ಮಂಡಳ ಅಧ್ಯಕ್ಷ ಕುಮಾರ ಮಾರ್ಕಾಂಡೆ ಯುವಮೋರ್ಚಾ ಕ್ಕೆ ಉಪಯುಕ್ತ ಸಲಹೆ ನೀಡಿ ಶುಭ ಹಾರೈಸಿದರು..

RELATED ARTICLES  ಕುಮಟಾ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ರವೀಂದ್ರ ಭಟ್ಟ ಸೂರಿ ಆಯ್ಕೆ


ವೇದಿಕೆಯಲ್ಲಿ ಇದ್ದು ಕುಮಟಾ ಮಂಡಳದ ಕಾರ್ಯದರ್ಶಿ ಹೇಮಂತಕುಮಾರ ಗಾಂವಕರ್ ಇವತ್ತಿನ ಕಾರ್ಯಕ್ರಮ ದ ಬಗ್ಗೆ ತಿಳಿಸಿದರು.. ಯುವಮೋರ್ಚಾ ಸಾ ಜಾ ಪ್ರಮುಖ ಪವನ ಶೆಟ್ಟಿ ಎಲ್ಲರನ್ನೂ ಸ್ವಾಗತಿಸಿದರು.. ಯುವಮೋರ್ಚಾ ಕಾರ್ಯದರ್ಶಿ ತಿಮ್ಮಪ್ಪ ಮುಕ್ರಿ ಯುವಮೋರ್ಚಾ ದ ಮುಂದಿನ ಕಾರ್ಯತಂತ್ರ ದ ಬಗ್ಗೆ ತಿಳಿಸಿ ವಿವೇಕ ಬ್ಯಾಂಡ್ ಧಾರಣೆ ಬಗ್ಗೆ ವಿವರಿಸಿದರು… ಕೊನೆಯಲ್ಲಿ ಹೇಮಂತ ಕುಮಾರ್ ವಂದಿಸಿದರು.. ಯುವಮೋರ್ಚಾ ಉಪಾಧ್ಯಕ್ಷ  ನವಿನಕುಮಾರ, ಎಲ್ಲಾ ಸದಸ್ಯರು ಉಪಸ್ಥಿತರಿದ್ದರು..


ಕಾರ್ಯಕಾರಣಿ ನಂತರ ಕುಮಟಾದ ಬಾಳಿಗಾ ಕಾಲೇಜಿನ ಹೊರಬಾಗದಲ್ಲಿ ವಿವೇಕ ಬ್ಯಾಂಡ್ ತೊಡಿಸುವ ಕಾರ್ಯಕ್ರಮ ವನ್ನು ಯುವಮೋರ್ಚಾ ನಡೆಸಿತು