ಗೋಕರ್ಣ: ಇಲ್ಲಿನ ಕುಡ್ಲೆ ಬೀಚ್ ನಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು , ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂಬ ಅನುಮಾನದ ಸುದ್ದಿಗಳು ಕೇಳಿ ಬಂದಿವೆ.
ಇಲ್ಲಿಯ ರವಿ ಉಪಾಧ್ಯ (43) ಕೊಲೆಯಾದ ವ್ಯಕ್ತಿ. ಮೂಲಗಳ ಪ್ರಕಾರ ಸೋಮವಾರ ರಾತ್ರಿ ಐದಾರು ಮಂದಿ ಈತನ ಮೇಲೆ ಹಲ್ಲೆ ನಡಸಿದ್ದಾರೆ ಎನ್ನುವ ಬಗ್ಗೆ ವರದಿಯಾಗಿದ್ದು . ಹಲ್ಲೆಯಿಂದ ಕೊಲೆಯಾಗಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.
ಯಾತಕ್ಕಾಗಿ, ಯಾರು ಕೊಲೆಮಾಡಿದ್ದಾರೆ ಎಮ್ನುವುದು ಸ್ಪಷ್ಟವಾಗಿ ತಿಳಿದು ಬಂದಿಲ್ಲವಾದುದರಿಂದ ಸತ್ಯಾಂಶದ ಸಮಗ್ರ ವಿಶ್ಲೇಷಣೆ ಸಾಧ್ಯವಾಗಿಲ್ಲ.
ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯ ನಂತರ ಸಂಪೂರ್ಣ ಮಾಹಿತಿ ಹೊರ ಬರುವ ನಿರೀಕ್ಷೆ ಇದೆ.