ಕಾರವಾರ: ವಿನಾಯಕ ಬ್ರಹ್ಮೂರು ನಿರ್ದೇಶನದ ಐದನೇ ಕಿರುಚಿತ್ರ ‘ಪ್ರೌಢಶಾಲೆ’ಯ ಪ್ರದರ್ಶನವು ನಗರದ ಬಾಡ ಶಿವಾಜಿ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆಯಿತು.
ಚಿತ್ರ ವೀಕ್ಷಣೆಯ ನಂತರ ಮಾತನಾಡಿದ ಶಿವಾಜಿ ಪದವಿ ಕಾಲೇಜಿನ ಪ್ರಾಚಾರ್ಯೆ ಡಾ.ಅನುರಾಧಾ ನಾಯ್ಕ, ‘ಇತ್ತೀಚಿನ ದಿನಗಳಲ್ಲಿ ಮೊಬೈಲ್‌ನಿಂದ ಯುವಜನಾಂಗ ಹಾದಿ ತಪ್ಪುತ್ತಿದೆ. ಇದರ ಕುರಿತಾಗಿ ಚಿತ್ರಿಸಲಾಗಿರುವ ‘ಪ್ರೌಢಶಾಲೆ’ ಉತ್ತಮ ಸಂದೇಶ ಸಾರುತ್ತಿದೆ’ ಎಂದು ಚಿತ್ರ ತಂಡವನ್ನು ಶ್ಲಾಘಿಸಿದರು.
ಕಿರುಚಿತ್ರದ ಕುರಿತು ಅನಿಸಿಕೆ ವ್ಯಕ್ತಪಡಿಸಿದ ವಿದ್ಯಾರ್ಥಿನಿ ಸೌಮ್ಯಾ, ‘ಇತ್ತೀಚಿನ ದಿನಗಳಲ್ಲಿ ತಂದೆ? ತಾಯಿಯರಿಗಿಂತ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದವರೇ ಹೆಚ್ಚು ಮಖ್ಯ ಎನಿಸುತ್ತಿದ್ದಾರೆ. ಮೊಬೈಲ್ ಹಾಗೂ?ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ಕೆಲಸಗಳಿಗೆ ಮಾತ್ರ ಬಳಸಬೇಕು. ಅತಿಯಾಗಿ ಅದನ್ನು ಬಳಸಿದರೆ ಉಂಟಾಗುವ ಅನಾಹುತಗಳ ಬಗ್ಗೆ ‘ಪ್ರೌಢಶಾಲೆ’ ವಿವರಣೆ ನೀಡುತ್ತದೆ’ ಎಂದು ತಿಳಿಸಿದರು.
ಪ್ರಾಸ್ತಾವಿಕ ಮಾತನಾಡಿದ ಕಿರುಚಿತ್ರದ ನಿರ್ದೇಶಕ ವಿನಾಯಕ ಬ್ರಹ್ಮೂರು, ಚಿತ್ರ ತಂಡ ಹಾಗೂ ಚಿತ್ರದ ಪರಿಚಯ ಮಾಡಿಕೊಟ್ಟರು. ಪದವಿ ಹಾಗೂ?ಬಿಸಿಎ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಎರಡು ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಯಿತು.