Home State News ಗವಿಗಂಗಾಧರೇಶ್ವರ ಸ್ವಾಮಿಗೆ ಸೂರ್ಯರಶ್ಮಿಯ ಅಭಿಷೇಕ: ಕಣ್ತುಂಬಿಕೊಂಡ ಸಾವಿರಾರು ಭಕ್ತರು. ಗವಿಗಂಗಾಧರೇಶ್ವರ ಸ್ವಾಮಿಗೆ ಸೂರ್ಯರಶ್ಮಿಯ ಅಭಿಷೇಕ: ಕಣ್ತುಂಬಿಕೊಂಡ ಸಾವಿರಾರು ಭಕ್ತರು. FacebookTwitterPinterestWhatsApp ಬೆಂಗಳೂರು: ಮಕರ ಸಂಕ್ರಮಣದ ದಿನದಂದು ಪ್ರಖ್ಯಾತವಾದ ಗವಿ ಗಂಗಾಧರೇಶ್ವರ ದೇವಾಲಯದ ಬಲಭಾಗ ಕಿಂಡಿಯಿಂದ ಸೂರ್ಯರಶ್ಮಿ ಪ್ರವೇಶಿಸಿ ಶಿವಲಿಂಗದ ಪಾದವನ್ನು ಸ್ಪರ್ಶಿಸಿತು. ಇಂದು ಸಂಜೆ 5.20ರ ಸುಮಾರಿಗೆ ಸೂರ್ಯರಶ್ಮಿ ನಂದಿಯ ಕೊಂಬಿನ ಸುತ್ತ ಹರಿದು ಶಿವಲಿಂಗದ ಪಾದವನ್ನು ಸ್ಪರ್ಶಿಸಿತು. ಈ ವಿಸ್ಮಯಕಾರಿ ಘಳಿಗೆಗೆ ಸಾವಿರಾರು ಭಕ್ತರು ಸಾಕ್ಷಿಯಾದರು ಎನ್ನಲಾಗಿದೆ. ಮಕರ ಸಂಕ್ರಮಣದ ದಿನ ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ತನ್ನ ಪಥವನ್ನು ಬದಲಿಸುತ್ತಾನೆ. ಈ ಸಮಯದಲ್ಲಿ ಸೂರ್ಯನ ಸಂಪೂರ್ಣ ಬೆಳಕು ಶಿವಲಿಂಗದ ಮೇಲೆ ಬೀಳುವದರಿಂದ ಯಾವುದೇ ರೀತಿ ಅಲಂಕಾರ ಮಾಡುವುದಿಲ್ಲ. ವರ್ಷಕ್ಕೆ ಒಂದು ದಿನ ಅಂದರೆ ಮಕರ ಸಂಕ್ರಾಂತಿಯಂದು ನಡೆಯುವ ಅತ್ಯಂತ ಅದ್ಭುತ ಘಳಿಗೆ ಇದಾಗಿದೆ. ಮಕರ ಸಂಕ್ರಾಂತಿಯ ಮೊದಲು 10 ದಿನ ಸೂರ್ಯ ದಕ್ಷಿಣ ಪಥದಿಂದ ಉತ್ತರ ಪಥಕ್ಕೆ ಚಲಿಸುವ ಎಲ್ಲಾ ಲಕ್ಷಣಗಳು ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಕಾಣಸಿಗುತ್ತದೆ. ಆದರೆ ಮಕರ ಸಂಕ್ರಾಂತಿಯಂದು ಸೂರ್ಯಾಸ್ತ ಸಮಯದಲ್ಲಿ ಸೂರ್ಯನ ಕಿರಣಗಳು ದೇವಸ್ಥಾನದ ದಕ್ಷಿಣ ಕಿಟಿಕಿಯ ಮೂಲಕ ಹಾದು, ನಂದಿಯ ಕೋಡುಗಳ ಮಧ್ಯಭಾಗದಿಂದ ಶಿವನ ಪಾದವನ್ನು ನೇರವಾಗಿ ಸ್ಪರ್ಶಿಸುವ ಮೂಲಕ ಸಂಪೂರ್ಣವಾಗಿ ಪಥ ಬದಲಿಸುವುದನ್ನು ಕಾಣಬಹುದು. ಸೂರ್ಯನ ಕಿರಣಗಳು ಶಿವನ ಲಿಂಗವನ್ನು ಸ್ಪರ್ಶಿಸುವುದನ್ನು ವೀಕ್ಷಿಸುವುದರಿಂದ ದೋಷ ನಿವಾರಣೆಯಾಗಲಿದೆ ಎಂಬುದು ಜನರ ನಂಬಿಕೆ. ಈ ಅಪೂರ್ವವಾದ ದೃಶ್ಯವನ್ನು ನೋಡಲು ಸಾವಿರಾರು ಭಕ್ತರು ಸಾಕ್ಷಿಯಾದರು ಎಂದು ವರದಿಯಾಗಿದೆ. RELATED ARTICLES ರಾಘವೇಶ್ವರ ಶ್ರೀಗಳ ಉಪಸ್ಥಿತಿಯಲ್ಲಿ ನಾಳೆ ಬೆಂಗಳೂರಿನಲ್ಲಿ ಗೋಸ್ವರ್ಗ ಸಂವಾದ. RELATED ARTICLESMORE FROM AUTHOR “ತರಂಗ ಫರ್ನಿಚರ್ ಫೆಸ್ಟಿವಲ್” ಪ್ರಾರಂಭವಾಗಿದೆ. ಡಾ. ಮನಮೋಹನ್ ಸಿಂಗ್ ನಿಧನ ಹಿನ್ನೆಲೆ – ನಾಳೆ ಶಾಲಾ ಕಾಲೇಜಿಗೆ ರಜೆ ದಿವ್ಯ ಭವ್ಯ ಹವ್ಯ ಲೋಕದ ಅನಾವರಣಕ್ಕೆ ಕ್ಷಣಗಣನೆ ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ ಇನ್ನಿಲ್ಲ. ಬ್ರಹ್ಮಗಂಟು ಸೀರಿಯಲ್ ನಟಿ ಶೋಭಿತಾ ಆತ್ಮಹತ್ಯೆ ಡಿ. ೨೭ ರಿಂದ ತೃತೀಯ ವಿಶ್ವ ಹವ್ಯಕ ಸಮ್ಮೇಳನ ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆಗೆ ಶರಣಾದ ನಟ, ನಿರ್ದೇಶಕ ಭಾಗವತ್ ಆಸ್ಪತ್ರೆಯಲ್ಲಿ ಸೇವೆ ಪ್ರಾರಂಭಿಸುತ್ತಿರುವ ಡಾ. ಸುಮಂತ್ ಬಳಗಂಡಿ ಆರೋಗ್ಯವಿದ್ದರೆ ಜೀವನ, ಜೀವನವಿದ್ದರೆ ಸಾಧನೆ : ಬನ್ನೇರುಘಟ್ಟ ಬೇಸ್ ಕಾಲೇಜಿನ ‘ಆರಂಭ-24’ ಸಮಾರಂಭದಲ್ಲಿ ಡಾ.ಶಶಿಧರ ಬುಗ್ಗಿ SSLC ಪರೀಕ್ಷೆಯ ಫಲಿತಾಂಶ (SSLC Result) ಪ್ರಕಟ. ದೇವೇಗೌಡರ ನಿವಾಸದಲ್ಲಿ ಹೆಚ್.ಡಿ.ರೇವಣ್ಣ ಅರೆಸ್ಟ್..! ಯಕ್ಷಗಾನ ಲೋಕದ ಗಾನ ಮಾಂತ್ರಿಕ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ.