ಮಕ್ಕಳಲ್ಲಿ ಸಾಹಿತ್ಯದ ಬಗೆಗೆ ಒಲವು, ಅಭಿರುಚಿ ಹುಟ್ಟಿಸುವ ನಿಟ್ಟಿನಲ್ಲಿ ಕುಮಟಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲೆಯಲ್ಲೇ ಮೊದಲಬಾರಿಗೆ ಕಳೆದ ವರ್ಷ ಕುಮಟಾ ತಾಲೂಕು ಮಕ್ಕಳ ಮೊದಲನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟಿಸಿ ಹಲವು ಪ್ರತಿಭೆಗಳಿಗೆ ಪ್ರೇರಣೆ ನೀಡಿದ್ದು ಈ ವರ್ಷ ಕೂಡ ಅದೇ ರೀತಿಯಲ್ಲಿ ಇದೇ ದಿನಾಂಕ 21 ರಂದು ತಾಲೂಕಿನ ಹೆಗಡೆ ಹೆಣ್ಣುಮಕ್ಕಳ ಶಾಲಾ ಆವರಣದಲ್ಲಿ ಸಮ್ಮೇಳನ ಸಂಘಟಿಸಲು ಮುಂದಾಗಿದೆ. ಶಿಕ್ಷಕ ಬಂಧುಗಳು, ಪಾಲಕ-ಪೋಷಕರು ತಮ್ಮ ವಿದ್ಯಾರ್ಥಿಗಳನ್ನು ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಹುರಿದುಂಬಿಸಿ ಸಮ್ಮೇಳನ ಯಶಸ್ವಿಯಾಗಲು ಸಹಕರಿಸಬೇಕೆಂದು ಕ.ಸಾ.ಪ ತಾಲೂಕು ಅಧ್ಯಕ್ಷ ಡಾ.ಶ್ರೀಧರ ಗೌಡ ಉಪ್ಪಿನಗಣಪತಿ ತಿಳಿಸಿದ್ದಾರೆ.
ಸಮ್ಮೇಳನದಂದು ಮಕ್ಕಳ ಕಾವ್ಯೋತ್ಸವ ( ಸ್ವರಚಿತ ಕವನ ವಾಚನ- 15 ಕವಿಗಳು ), ಗೀತ-ಭಾವ-ಗಾನ ( ನಾಡಿನ ಪ್ರಸಿದ್ದಕವಿಗಳ ರಾಗಸಂಯೋಜಿಸದ ಹಾಡಿನ ಭಾವಾರ್ಥ, ಕವಿಪರಿಚಯ ಹೇಳಿ ಗೀತೆ ಹಾಡುವುದು-8 ವಿದ್ಯಾರ್ಥಿಗಳು ), ಸಂವಾದ ಗೋಷ್ಠಿ. ಪುಸ್ತಕ-ಮೊಬೈಲ್-ಟಿ.ವಿ ( 10 ವಿದ್ಯಾರ್ಥಿಗಳು ಜೊತೆಗೆ ಪ್ರೇಕ್ಷಕರ ಸಾಲಿನಲ್ಲಿನ 5 ವಿದ್ಯಾರ್ಥಿಗಳಿಗೆ ಪ್ರಶ್ನೆಕೇಳಲು ಅವಕಾಶವಿದೆ), ನಾನು ಓದಿದ ಪುಸ್ತಕದ ಒಳನೋಟ ( 6 ವಿದ್ಯಾರ್ಥಿಗಳು ) ಎಂಬ ನಾಲ್ಕು ಗೋಷ್ಠಿಗಳು ನಡೆಯಲಿದೆ.
ಇದಲ್ಲದೆ ಸಮ್ಮೇಳನದ ಸರ್ವಾಧ್ಯಕ್ಷರು, ಪ್ರತಿಗೋಷ್ಠಿಯ ಅಧ್ಯಕ್ಷರು ಮಕ್ಕಳೇ ಆಗಿರುತ್ತಾರೆ.ಸ್ವಾಗತ, ನಿರೂಪಣೆ ಮತ್ತು ವಂದನಾರ್ಪಣೆಗಳಿಗೆ 15 ವಿದ್ಯಾರ್ಥಿಗಳಿಗೆ ಅವಕಾಶವಿದೆ. ಪ್ರತಿಗೋಷ್ಠಿಗೆ ಮಕ್ಕಳ ಸಾಹಿತ್ಯದದಲ್ಲಿ ಕೃಷಿ ಮಾಡಿದ ಹಿರಿಯ ಸಾಹಿತಿಗಳಿಗೆ ಆಶಯನುಡಿ ರೂಪದಲ್ಲಿ 5 ನಿಮಿಷ ಮಾರ್ಗದರ್ಶನ ಮಾಡಲಾಗುತ್ತದೆ.
ಪ್ರೇಕ್ಷಕರ ಸಾಲಿನಲ್ಲಿನ ವಿದ್ಯಾರ್ಥಿಗಳಿಗೆ ಗೋಷ್ಠಿಯ ಬಿಡುವಿನ ವೇಳೆಯಲ್ಲಿ ಕನ್ನಡ ಸಾಹಿತ್ಯದ ಕುರಿತು ರಸಪ್ರಶ್ನೆ ಕೇಳಿ ಸರಿ ಉತ್ತರ ಹೇಳಿದವರಿಗೆ ಪ್ರೋತ್ಸಾಹಿ¸ಲಾಗುತ್ತದೆ. ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳ ಹೆಸರನ್ನು ಅಧ್ಯಕ್ಷರು ಇಲ್ಲವೇ ಗೌರವಕಾರ್ಯದರ್ಶಿಗಳಾದ ಚಿದಾನಂದ ಭಂಡಾರಿ 8970612257, ಮಂಜುನಾಥ ಎಂ. ನಾಯ್ಕ 8762634266 ಸಂಪರ್ಕಿಸಿ ದಿನಾಂಕ 15-1-2018ರೊಳಗೆ ಯಾವವಿಭಾಗದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಸೂಚಿಸುವುದು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದಲ್ಲಿ ಆಯ್ಕೆಮಾಡಿ ಪ್ರತಿಭಾನ್ವಿತರಿಗೆ ಅವಕಾಶ ನೀಡಲಾಗುವುದು. ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳ ಮುಂಚಿತವಾಗಿ 1-2 ಕವನ ನೀಡುವುದು ಕಡ್ಡಾಯ ಎಂದು ಡಾ.ಶ್ರೀಧರ ಗೌಡ ಉಪ್ಪಿನಗಣಪತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.