ಕುಮಟಾ : ‘ಹಾಲಕ್ಕಿ ಟ್ರೋಪಿ’ ಸಮಾರೋಪ ಸಮಾರಂಭ ಕುಮಟಾದ ಮಣಕಿ ಮೈದಾನದಲ್ಲಿ ಸಂಕ್ರಾಂತಿ ದಿನ ಜರುಗಿತು.


ಎರಡು ದಿನಗಳ ಕಾಲ ನಡೆದ ಹಾಲಕ್ಕಿ ಗೆಳೆಯರ ಬಳಗದ ಟೆನ್ನಿಸ್ ಬಾಲ್  ಕ್ರಿಕೇಟ್ ಟೂರ್ನಾಮೆಂಟ್ ಯಶಸ್ವಿಯಾಗಿ ಜರುಗಿದ ಸಂಕ್ರಾಂತಿ ದಿನ ಸಮಾರೋಪಗೊಂಡಿತು.


ಸಮಾರೋಪದ ದಿನ ಗೆದ್ದ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಉದ್ಯಮಿ ಸುಬ್ರಾಯ ವಾಳ್ಕೆ ಹಾಲಕ್ಕಿ ಗೆಳೆಯರ ಬಳಗ ದವರು ತುಂಬಾ ಉತ್ತಮ ವಾಗಿ ಈ ಟೂರ್ನಿ ಸಂಘಟನೆ ಮಾಡಿದ್ದೀರಿ.. ಹಾಲಕ್ಕಿ ಸಮಾಜ ಎಲ್ಲ ರಂಗಗಳಲ್ಲಿಯೂ ಮುಂದೆ ಬರುತ್ತಿದ್ದು ಇದು ಉತ್ತಮವಾದ ಬೆಳವಣಿಗೆ. ಸ್ವಸಹಾಯ ದಿಂದ ಸಮಾಜದ ಏಳ್ಗೆ ಸುಲಭಸಾಧ್ಯ. ಸಾಂಸ್ಕೃತಿಕವಾಗಿ ಹಾಲಕ್ಕಿ ಸಮಾಜ ಶ್ರೀಮಂತವಾಗಿದೆ.. ಹಾಲಕ್ಕಿ ಸಮಾಜದ ಜೊತೆ ಮೊದಲಿನಿಂದಲೂ ನಮ್ಮ ಕುಟುಂಬಕ್ಕೆ ಅನ್ನೋನ್ಯ ನಂಟಿದೆ ಎಂದರು..

RELATED ARTICLES  ಜೈಹಿಂದ ಶಾಲೆಯಲ್ಲಿ ಉಚಿತ ದಂತ ತಪಾಸಣಾ ಶಿಬಿರ
IMG 20190116 WA0001 1


ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಸಾಹಿತಿ ಡಾ ಶ್ರೀಧರ ಗೌಡ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.. ವೇದಿಕೆಯಲ್ಲಿ ಪುರಸಭಾ ಸದಸ್ಯ ತುಳುಸು ಗೌಡ, ಸೂರ್ಯಕಾಂತ ಗೌಡ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಿಶ್ವನಾಥ ನಾಯ್ಕ ಹಾಗೂ ಇತರ ಯುವ ಮುಖಂಡರು ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು

RELATED ARTICLES  ಉತ್ತರ ಕನ್ನಡದ ಪ್ರಮುಖ ತಾಲೂಕಿನ ಕೊರೋನಾ ಅಪ್ಡೇಟ್ ಇಲ್ಲಿದೆ.