ಕಾರವಾರ: ದಿನಾಂಕ 5 ಮತ್ತು 6 ಜನವರಿ ರಂದು ನಡೆದ ಜಿಲ್ಲಾ ಮಟ್ಟದ ಯುವಜನ ಮೇಳದಲ್ಲಿ ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶ್ರೀ ಸಿದ್ಧಿವಿನಾಯಕ ಮಹಾಲಸಾ ಯುವಕ ಯುವತಿ ಮಂಡಳಯ ಮೂಲಕ ಭಾಗವಹಿಸಿರುತ್ತಾರೆ.
ಯುವಜನ ಮೇಳದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಚರ್ಮವಾದ್ಯ ಪ್ರಥಮ, ಏಕಪಾತ್ರಾಭಿನಯ ದ್ವಿತೀಯ ಮತ್ತು ಗಂಡು ಮಕ್ಕಳ ವಿಭಾಗದಲ್ಲಿ ಭಜನೆ ತೃತೀಯ ಸ್ಥಾನ ಪಡೆದಿರುತ್ತದೆ. ಮತ್ತು ತುಮಕೂರಲ್ಲಿ ನಡೆಯುವ ರಾಜ್ಯ ಮಟ್ಟದ ಯುವಜನ ಮೇಳಕ್ಕೆ ಆಯ್ಕೆಯಾಗಿರುತ್ತಾರೆ.
ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಚಾರ್ಯರಾದ ಡಾ|| ಕಲ್ಪನಾ ಕೆರವಡಿಕರ್, ಕಲಾ ವೇದಿಕೆಯ ಕಾರ್ಯಧ್ಯಕ್ಷ ಪ್ರೊ.ರಾಜೇಶ್ವರಿ ಭಟ್, ಕಾಲೇಜು ಯೂನಿಯನ್ ಚೆರ್ಮನ್ನರಾದ ಪ್ರೊ. ವಿಜಯಾ ನಾಯಕ್, ಐ.ಕ್ಯೂ.ಎ.ಸಿ ಕಾರ್ಯಾಧ್ಯಕ್ಷರಾದ ಡಾ. ವಸಂತ್ ಕುಮಾರ್, ವಿದ್ಯಾರ್ಥಿ ಕಲ್ಯಾಣ ಅಧಿಕಾರಿಗಳಾದ ಡಾ. ವಿ ವಿ ಗಿರಿ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಶಿವಾನಂದ್ ಭಟ್ ಮತ್ತು ಕಾಲೇಜಿನ ಮ್ಯಾನೇಜರ್ ಶ್ರೀ ಸಂತೋಷ್ ನಾಯ್ಕ್ ಇವರು ವಿಜೇತರಾದ ವಿದ್ಯಾರ್ಥಿಗಳಿಗೆ ಹಾರ್ದಿಕವಾಗಿ ಅಭಿನಂದಿಸಿದ್ದಾರೆ.