ಭಟ್ಕಳ : ಜಿಲ್ಲೆಯಲ್ಲಿ ದಾಖಲೆ ವೀಕ್ಷಣೆ ಕಾಣುತ್ತಿರುವ ವಿನಾಯಕ ಬ್ರಹ್ಮೂರು ನಿರ್ದೇಶನದ ಪ್ರೌಢಶಾಲೆ ಚಿತ್ರ ಇಲ್ಲಿಯ ಗುರುಸುಧೀಂದ್ರ ಕಾಲೇಜಿನಲ್ಲಿ ವಿಶೇಷ ಪ್ರದರ್ಶನವನ್ನು ಕಂಡಿತು. ಜಿಲ್ಲೆಯ ಮೊಟ್ಟ ಮೊದಲ ಸೆಮಿಫಿಲ್ಮನ್ನ ನೋಡಿದ ವಿದ್ಯಾರ್ಥಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು.


ಪ್ರದರ್ಶನಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಚಿತ್ರ ನಿರ್ದೇಶಕ ವಿನಾಯಕ ಬ್ರಹ್ಮೂರು ಮಾತನಾಡಿ ‘ಯುವ ಪೀಳಿಗೆ ಮೊಬೈಲ್ ಗೀಳಿಗೆ ಅಂಟಿಕೊಳ್ಳುತ್ತಿರುವುದು ಆತಂಕದ ವಿಚಾರವಾಗಿದ್ದು ಆ ವ್ಯಾಮೋಹದಿಂದ ಹೊರ ಬರಬೇಕಿದೆ. ಮೊಬೈಲ್‍ಗಳು ಹಾಗೂ ಸಾಮಾಜಿಕ ಜಾಲತಾಣಗಳನ್ನ ಸದ್ಬಳಕೆ ಮಾಡಿಕೊಳ್ಳಬೇಕೇ ಹೊರತು ದುರ್ಬಳಕೆಯಾಗಬಾರದು. ಇವತ್ತಿನ ದಿನದಲ್ಲಿ ಮೊಬೈಲ್‍ಗಳಿಂದ ಸಂಬಂಧಗಳ ಮೌಲ್ಯ ಕಡಿಮೆಯಾಗುತ್ತಿದೆ, ಎಷ್ಟೋ ಸಂಬಂಧಗಳನ್ನ ಬೇರ್ಪಡಿಸುವಲ್ಲಿ ಮೊಬೈಲ್ ಪಾತ್ರವೇ ಹೆಚ್ಚಾಗಿ ಕಾಣುತ್ತಿದೆ. ಇದೇ ವಿಷಯವನ್ನ ಆಧರಿಸಿ “ಪ್ರೌಢಶಾಲೆ” ಚಿತ್ರವನ್ನ ಕಟ್ಟಿಕೊಟ್ಟಿದ್ದೇವೆ. ಎಂದರು. ಗುರುಸುಧೀಂದ್ರ ಕಾಲೇಜು ಸಾವಿರಾರು ಪ್ರತಿಭೆಗಳನ್ನು ಬೆಳೆಸಿದ ಹಿರಿಮೆಯನ್ನು ಹೊಂದಿದ್ದ ಚಿತ್ರನಟ ಶ್ಯಾಮ್ ಕೂಡಾ ಇಲ್ಲಿಯೇ ವಿದ್ಯಾಭ್ಯಾಸ ಮಾಡಿದವರಾಗಿದ್ದಾರೆ. ಮಕ್ಕಳ ಕೌಶಲ್ಯಗಳನ್ನು ಗುರುತಿಸಿ ಅವರಿಗೆ ಮಾರ್ಗ ತೋರಿಸುವ ಪ್ರಯತ್ನ ಇಲ್ಲಿ ನಡೆಯುತ್ತಿದೆ. ಎಂದು ಶ್ಲಾಘಿಸಿದರು.

RELATED ARTICLES  ಉತ್ತರಕನ್ನಡದಲ್ಲಿ ಡಿ.31 ರಂದು ರಾತ್ರಿ ಎಂಟು ಗಂಟೆಯಿಂದ ನೈಟ್ ಕರ್ಫ್ಯೂ
IMG 20190116 WA0020


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪತ್ರಕರ್ತ ರಾಧಾಕೃಷ್ಣ ಭಟ್ಟ ಮಾತನಾಡಿ “ಮಕ್ಕಳು ಶಾಲೆಯಿಂದ ಮನೆಗೆ ಹೋದ ತಕ್ಷಣ ಮೊಬೈಲನ್ನ ಕೈಯಲ್ಲಿ ಹಿಡಿಯಲು ಉತ್ಸುಕರಾಗಿರ್ತಾರೆ. ಪ್ರಾಥಮಿಕ ಶಾಲೆಯ ಮಕ್ಕಳಲ್ಲೂ ಈಗ ಮೊಬೈಲ್ ಮಾಯೆ ಕಾಡತೊಡಗಿದೆ. ವಿದ್ಯಾರ್ಥಿಗಳು ತಮ್ಮ ವಿವೇಚನೆಯನ್ನು ಬಳಸಿ ತಮ್ಮ ಮಾರ್ಗವನ್ನು ಆಯ್ದುಕೊಳ್ಳಬೇಕಿದೆ. ಇದಕ್ಕೆ ಪಾಲಕರ ಪ್ರಯತ್ನವೂ ಬಹಳಷ್ಟಿದೆ. ನಕಾರಾತ್ಮಕ ವಿಚಾರಗಳಿಂದ ಹೊರಬಂದು ಸಕಾರಾತ್ಮಕದೆಡೆ ಮಕ್ಕಳ ಗಮನ ಕೇಂದ್ರೀಕೃತವಾಗಬೇಕು” ಎಂದರು.
ಪದವಿ ಕಾಲೇಜಿನ ಪ್ರಾಂಶುಪಾಲ ನಾಗೇಶ ಭಟ್ಟ ಮಾತನಾಡಿ ಈ ಚಿತ್ರವು ಪ್ರತಿಯೊಬ್ಬ ವಿದ್ಯಾರ್ಥಿಗೂ ಪಾಠವಾಗಿದೆ. ಶಿಕ್ಷಣಕ್ಕೆ ಸಂಬಂಧಪಟ್ಟಂತೆ ಇನ್ನೂ ಹೆಚ್ಚೆಚ್ಚು ಪ್ರಯತ್ನಗಳು ಜಿಲ್ಲೆಯಲ್ಲಿ ನಡೆಯಲಿ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.

RELATED ARTICLES  ದೇಶಪಾಂಡೆ ಬಗ್ಗೆ ಅನಂದ ಅಸ್ನೋಟಿಕರ್ ಹೇಳಿಕೆ: ಕೆಂಡಾಮಂಡಲವಾದ ಕಾಂಗ್ರೆಸ್ ಮುಖಂಡರು.


ಭಟ್ಕಳ ಎಜ್ಯುಕೇಶನ್ ಟ್ರಸ್ಟ್‍ನ ಮ್ಯಾನೇಜರ್ ರಾಜೇಶ ನಾಯ್ಕ ಪ್ರೌಢಶಾಲೆಯ ಯಶಸ್ವಿ ಪ್ರಯೋಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಿಸಿಎ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ ಸ್ವಾಗತಿಸಿದರು. ವಿದ್ಯಾರ್ಥಿ ಅಕ್ಷಯ್ ಪ್ರಭು ನಿರೂಪಿಸಿದರು. ಕಾರ್ಯಕ್ರಮದಲ್ಲಿ ನಿರ್ಮಾಪಕ ರಾಜೇಶ ಆಚಾರ್ಯ ಚಂದಾವರ, ಚಿತ್ರ ನಟ ಶ್ಯಾಮಸುಂದರ್ ಪ್ರಭು, ನಟಿಯರಾದ ಕಾವ್ಯ ನಾಯ್ಕ, ಅನು ಹೊನ್ನಾವರ ಹಾಗೂ ಉಪನ್ಯಾಸಕ ಫಣ ಯಪ್ಪ ಹೆಬ್ಬಾರ ಉಪಸ್ಥಿತರಿದ್ದರು.