ಹೊನ್ನಾವರ : ಪಶ್ಚಿಮದಲ್ಲಿ ಭೊರ್ಗರೆಯುವ ಸಮುದ್ರತೀರ.ಪೂರ್ವಕ್ಕೆ ಸಹ್ಯಾದ್ರಿಯ ಶಿಖರಶ್ರೇಣಿ.ಪಕ್ಕದಲ್ಲಿ ತೆಂಗು-ಕಂಗು-ಬಾಳೆ-ಬಳ್ಳಿಗಳಿಂದ ಹಸಿರಾದ ತೋಟ. ಅನತಿ ದೂರದಲ್ಲಿ ಧುಮ್ಮಿಕ್ಕುವ ನಿರ್ಮಲ ಸಲಿಲಧಾರೆ ಅಪ್ಸರತೀರ್ಥ.ಇಂತಹ ಶುಭ್ರ ಸುಂದರ ಪರಿಸರದಲ್ಲಿ ಅರಳಿ ನಿಂತಿದೆ ಅಪ್ಸರಕೊಂಡಮಠ.

  ನಿಃಶ್ರೇಯಸಸಿದ್ಧಿಗಾಗಿ ತಪಿಸಿದ ಯತಿವರೇಣ್ಯರಿಂದ ಆರಾಧಿಸಲ್ಪಟ್ಟ ಶ್ರೀಉಗ್ರನರಸಿಂಹ ಇಲ್ಲಿಯ ಕ್ಷೇತ್ರಾಧಿಪತಿ.ಎಡಭಾಗದಲ್ಲಿ ಶಿಲೆಯ ಪಾಕ್ರತಿಕ ಗುಹೆಯ ಮುಂದೆ ಮಗುವನ್ನು ಮಡಿಲಲ್ಲಿಟ್ಟುಕೊಂಡ ಜಗಜ್ಜನನಿ ಶ್ರೀಉಮಾಂಬಾಗಣಪತಿಯ ಮಂದಿರವಿದೆ.

ಬಲಭಾಗದಲ್ಲಿ ಈ ಪುಣ್ಯಭೂಮಿಯಲ್ಲಿ ಪಾವನರಾದ ಯತಿಶ್ರೇಷ್ಠರ ಐದು ಶ್ರೀ ಗುರುಮೂರ್ತಿಗಳಿವೆ.
ಇಲ್ಲಿ ಹರಿಯುವ ಅಪ್ಸರತೀರ್ಥವು ಸರ್ವರೋಗಹರವಾಗಿದ್ದು ಅಪ್ಸರೆಯರು ಸ್ನಾನಕ್ಕಾಗಿ ಬರುವ ಕುಂಡವಿದು ಎಂಬ ಪ್ರತೀತಿ ಇದೆ.

RELATED ARTICLES  ಸಂಪನ್ನವಾಯ್ತು ಕಬಡ್ಡಿ ಪಂದ್ಯಾವಳಿ : ಶಾಸಕ ಮಂಕಾಳ ವೈದ್ಯರಿಗೆ ಸಂದಿತು ಸನ್ಮಾನ

1954ರಲ್ಲಿ ಶ್ರೀರಾಮಚಂದ್ರಾಪುರಮಠದ 35ನೆಯ ಪೀಠಾಧಿಪತಿಗಳಾದ ಬ್ರಹ್ಮೀಭೂತ ಪರಮಪೂಜ್ಯ ಶ್ರೀ ಶ್ರೀ ರಾಘವೇಂದ್ರಭಾರತೀಮಹಾಸ್ವಾಮಿಗಳವರು ಅಪ್ಸರಕೊಂಡಮಠವನ್ನು ಶಾಖಾಮಠವಾಗಿ ಸ್ವೀಕರಿಸಿದರು.ಅಲ್ಲಿಂದ ಅನೇಕ ಏಳು-ಬೀಳುಗಳಿಗೆ ಸಾಕ್ಷಿಯಾಗಿ,ಅನೇಕ ವತ್ಸರಗಳನ್ನು ದಾಟಿ ಇಂದು ಪರಿವರ್ತನೆಯ ಬೆಳಕಿನಡೆಗೆ ಮುನ್ನುಗ್ಗುತ್ತಿದೆ.
ಕಾಲಾಂತರದಲ್ಲುಂಟಾದ ದೋಷಗಳನ್ನು ಪರಿಹರಿಸಿಕೊಂಡು ಪುನಃ ಮಠಾಯತನಪದ್ದತಿಯಂತೆ ಶ್ರೀಉಗ್ರನರಸಿಂಹ, ಶ್ರೀಉಮಾಂಬಾಗಣಪತಿ ಹಾಗು ಶ್ರೀಗುರುಮೂರ್ತಿಗಳ ಪುನಃ ಪ್ರತಿಷ್ಠಾ ಮಹೋತ್ಸವ ನಡೆಯುತ್ತಿರುವುದು ಪರಮಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯಪ್ರೇರಣೆ ಹಾಗೂ ಅನುಗ್ರಹವಿಶೇಷದಿಂದ.
ಈ ಸಂದರ್ಭದಲ್ಲಿ ಶ್ರೀಉಮಾಂಬಾಗಣಪತಿಯ ಮಂದಿರವನ್ನು ಗಜಪ್ರಷ್ಠವಿನ್ಯಾಸದಲ್ಲಿ ಸಂಪೂರ್ಣ ಶಿಲಾಮಯವಾಗಿ ನಿರ್ಮಿಸಿದ್ದುಅತ್ಯಂತ ಹ್ರದ್ಯವಾಗಿದೆ.

RELATED ARTICLES  ಸೂರಜ್ ನಾಯ್ಕ ಸೋನಿಯವರಿಗೆ ಬಿಜೆಪಿ ಟಿಕೆಟ್ ಸಿಗಲೆಂದು ದೇವರ ಮೊರೆಹೋದ ಕಾರ್ಯಕರ್ತರು!

ಶ್ರೀವಿಲಂಬ ಸಂ!!ದ ಪುಷ್ಯ ಶುಕ್ಲ ಏಕಾದಶೀ ದಿನಾಂಕ:17-01-2019 ಗುರುವಾರದಿಂದ ಪುಷ್ಯ ಶುಕ್ಲ ತ್ರಯೋದಶೀ ದಿನಾಂಕ:19-01-2019. ಶನಿವಾರದವರೆಗೆ ಭಕ್ತಿಪೂರ್ವಕವಾಗಿ ನಡೆಯಲಿರುವ ಸಪರಿವಾರ ಶ್ರೀದೇವತಾ ಪ್ರತಿಷ್ಠಾ-ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡು ತನು ಮನ ಧನ ಸೇವೆಗಳೊಂದಿಗೆ ಗುರುದೇವತಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಕಾರ್ಯಕ್ರಮ ಸಂಯೋಜನಾ ಮಂಡಳಿ ಹಾಗೂ ಹೊನ್ನಾವರ ಹವ್ಯಕ ಮಂಡಳದವರು ವಿನಂತಿ.