ಹೊನ್ನಾವರ :ಇತ್ತೀಚೆಗೆ  ನಡೆದ ಹೊನ್ನಾವರ ತಾಲೂಕಿನ ಹಳದೀಪುರದಲ್ಲಿ ಶ್ರೀ ಗೋಪಿನಾಥ ಸಭಾಗ್ರಹದಲ್ಲಿ ಜಿ.ಎಸ್‌ .ಬಿ ಸಮಾಜದ ಶ್ರೀ ಗೋಪಿನಾಥ ಸೇವಾ ವಾಹಿನಿಯ ವಾರ್ಷಿಕ ಸಹಮಿಲನ ಕಾರ್ಯಕ್ರಮವು ವಿಜೃಂಭಣೆಯಿಂದ ಸಂಪನ್ನಗೊಂಡಿತು. ನ್ಯೂ ಎಜುಕೇಷನ್ ಸೊಸೈಟಿ ,ಹೊನ್ನಾವರದ ಅಧ್ಯಕ್ಷರಾದ ಶ್ರೀ ಜಗದೀಶ್ ಟಿ .ಪೈ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು .


   ಅವರು ಸಮಾಜದ ಹಿರಿಯರು ಕಿರಿಯರಿಗೆ ಮಾರ್ಗದರ್ಶನ ನೀಡಬೇಕು, ಜೊತೆಗೆ ಸಂಧ್ಯಾವಂದನೆ ,ಶ್ರೀ ವಿಷ್ಣು ಸಹಸ್ರನಾಮ ಪಠಣ  ಮತ್ತು ಯೋಗಾಭ್ಯಾಸವನ್ನು ನಿರಂತರವಾಗಿ ಮಾಡಿದರೆ ಮನಸ್ಸು ನಮ್ಮ ಹಿಡಿತದಲ್ಲಿರುತ್ತದೆ ಎಂದು ಮಾರ್ಗ ದರ್ಶಿಸಿದರು . ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಮಂಗಲದಾಸ್ ಕಾಮತ್, ಖ್ಯಾತ ಉದ್ಯಮಿಗಳು ಅವರ್ಸಾ ಇವರು ಮಾತನಾಡಿ ಪ್ರತಿಯೊಬ್ಬರು ಕೂಡ ಕೈಜೋಡಿಸಿದಾಗ ಮಾತ್ರ ಸಮಾಜದ ಏಳಿಗೆ ಸಾಧ್ಯ ಮತ್ತು ನಮ್ಮ ದುಡಿಮೆಯ ಒಂದು ಪಾಲನ್ನು ಸಮಾಜಕ್ಕೆ ಮೀಸಲಾಗಿಡಲು ಸಲಹೆ ನೀಡಿದರು .

RELATED ARTICLES  ಯಲ್ಲಾಪುರದ ರಂಗ ಸಹ್ಯಾದ್ರಿ ಇವರ ಸಹಯೋಗದಲ್ಲಿ ಯಶಸ್ವಿಯಾಗಿ ನಡೆದ 'ಕಲಾಹಬ್ಬ 2018'


ಈ ಶುಭ ಸಂದರ್ಭದಲ್ಲಿ ಶ್ರೀ ಗೋಪಿನಾಥ ಮಠದ ಹಿರಿಯ ಸೇವಕರಾದ ಶ್ರೀ ಮೋಹನ್ ಬಾಬು ಶಾನಭಾಗ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು .
ಕ್ರೀಡಾಕೂಟ ಮತ್ತು ಇತರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಅಲ್ಲದೆ , ಚಿಕ್ಕಮಕ್ಕಳಿಗೆ ಛದ್ಮವೇಶ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಧನಂಜಯ ಪೈ ಇವರು ಕಾರ್ಯಕ್ರಮದ ನಿರೂಪಣೆ  ಮತ್ತು  ವಾರ್ಷಿಕ ವರದಿ ವಾಚಿಸಿದರು. ಅತಿಥಿಗಳ ಪರಿಚಯವನ್ನು  ವೇದಮೂರ್ತಿ ನರಸಿಂಹ ಭಟ್ಟ  ಇವರು ಪರಿಚಯಿಸಿದರು.

RELATED ARTICLES  ಶಾರದಾ ಶೆಟ್ಟಿಯವರ ಪರ ದೇಶಪಾಂಡೆ ಕ್ಯಾಂಪೇನ್: ನಡೆದಿದೆ ಅಬ್ಬರದ ಪ್ರಚಾರ

    ಸೇವಾ ವಾಹಿನಿಯ ಅಧ್ಯಕ್ಷರಾದ ಶ್ರೀ ನಾಗರಾಜ ಪೈ ರವರು ಸ್ವಾಗತಿಸಿದರು. ಕೃಷ್ಣದಾಸ ಶಾನಭಾಗ    ವಂದರ್ನಾಪಣೆ ಮಾಡಿದರು. ನಂತರ ಮನರಂಜನಾ ಕಾರ್ಯಕ್ರಮ ನಡೆಯಿತು.