ಕುಮಟಾ:  ಖಚಿತ ಮಾಹಿತಿಯ ಮೇರೆಗೆ ಹೊನ್ನಾವರ ಹೊದ್ಕೆ ಶಿರೂರಿನ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸಾಗವಾನಿ ಕಟ್ಟಿಗೆಯನ್ನು ಅರಣ್ಯಾಧಿಕಾರಿಗಳ ತಂಡ ವಶಪಡಿಸಿಕೊಂಡಿದೆ.ಸುಮಾರು ಒಂದು ಲಕ್ಷ ಮೌಲ್ಯದ ಕಟ್ಟಿಗೆಯನ್ನು ವಶಪಡಿಸಿಕೊಂಡಿರುವುದಾಗಿ ವಲಯ ಅರಣ್ಯಾಧಿಕಾರಿ ರಂಗನಾಥ ಅವರು ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

      ಹೊದ್ಕೆ ಶಿರೂರಿನ ಶ್ರೀಕಾಂತ ರಮೇಶ ನಾಯ್ಕ, ಹಾಗೂ ಗೋಪಾಲ ಸತ್ಯಪ್ಪ ನಾಯ್ಕ ಆರೋಪಿಗಳಾಗಿದ್ದು ಇವರ ವಿರುದ್ದ ಬೆಲೆಬಾಳುವ ಮರಗಳನ್ನು ಕಡಿದು ಕಾಡುರಕ್ಷಕರ ಕಣ್ಣು ತಪ್ಪಿಸಿ ಸಾಗಿಸುತ್ತಾರೆ ಎಂಬ ಆರೋಪ ಕೇಳಿಬರುತ್ತಿದೆ.ಸಾಂತಗಲ್ ಅರಣ್ಯ ವಲಯ ಪ್ರದೇಶದಲ್ಲಿ ಇತ್ತೀಚೆಗೆ ಸಾಗುವಾನಿ ಮರ ಕಡೆಯಲಾಗಿದ್ದು ಅರಣ್ಯ ಇಲಾಖೆ ಮರಗಳ್ಳರ ಹುಡುಕಾಟ ನಡೆಸಿತ್ತು.ಆದರೆ ಹೊದ್ಕೆ ಶಿರೂರಿನ ಶ್ರೀಕಾಂತ ನಾಯ್ಕ ಇವರ ಮನೆಯ ದಾಳಿಯಲ್ಲಿ ಸಾಂತಗಲ್ ಅರಣ್ಯದಲ್ಲಿ ಕಡಿಯಲಾಗಿದ್ದ ಮರದ ತುಂಡುಗಳು ದೊರೆತಿದೆ.ಇಂತಹ ಅನೇಕ ಪ್ರಕರಣಗಳು ಇವರ ಮೇಲಿದೆ.

RELATED ARTICLES  ಕಾಂಗ್ರೆಸ್ ಪದಾಧಿಕಾರಿಗಳ ನೇಮಕ

ಅಷ್ಟಕ್ಕೂ ಆರೋಪಿ ಮನೆಯಲ್ಲಿಯೇ ಸಾಗುವಾನಿ ಮರದ ತುಂಡುಗಳು ದೊರೆತಿರುವುದು ಸಾಕ್ಷಿ ಸಮೇತ ಸಾಭಿತಾದರೂ ಆರೋಪಿಯನ್ನು ಬಂಧಿಸದೆ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.ಆರೋಪಿಯು ರಾಜಾರೋಷವಾಗಿ ಅಧಿಕಾರಿಗಳ ಮುಂದೆ ಒಡಾಡುತ್ತಿರುವುದರ ಹಿಂದೆ ಪ್ರಬಲ ವ್ಯಕ್ತಿಗಳು ಆರೋಪಿಯ ಬೆನ್ನೆಲುಬಾಗಿ ನಿಂತಿದ್ದಾರೆ ಎನ್ನುವುದು ಸ್ಥಳೀಯರ ಅನುಮಾನವಾಗಿದೆ.

RELATED ARTICLES  ಉಪ್ಪಾರ ಸಮಾಜವನ್ನು ಪ.ಪಂಗಡಕ್ಕೆ ಸೇರಿಸಲು ಕೇಳಿಬಂತು ಆಗ್ರಹ: ಕಾರವಾರದಲ್ಲಿ ನಡೆಯಿತು ಪ್ರತಿಭಟನೆ.

  ಇವರ ಹಿಂದೆ ಕಾಣದ ಕೈಗಳ ಕೈವಾಡವಿರುವ ಶಂಕೆ ವ್ಯಕ್ತವಾಗುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಆರೋಪಿಗಳಾದ ಪ್ರಕಾಶ ಎಮ್.ಪಟಗಾರ,ಮಾರುತಿ ಜಿ.ನಾಯ್ಕ ತಲೆಮರೆಸಿಕೊಂಡಿದ್ದು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.