ಭಟ್ಕಳ :ಸಾರ್ವಜನಿಕರ ಹಿತಾಸಕ್ತಿಯ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ 45 ಮೀಟರ್ ಅಗಲೀಕರಣಕ್ಕಾಗಿ, ಪಕ್ಷಾತೀತವಾದ ಹೋರಾಟಕ್ಕೆ ಇಂದು ಶಿರಾಲಿ ಗ್ರಾಮ ಸಾಕ್ಷಿಯಾಗಿದೆ.

ಒಂದು ಗ್ರಾಮ ಉದ್ದಾರವಾಗಬೇಕಾದರೆ ಅಲ್ಲಿನ ಹೆದ್ದಾರಿ ಪ್ರಮುಖ ಪಾತ್ರ ವಹಿಸುತ್ತದೆ, ಕಿರಿದಾದ ರಸ್ತೆಯಿಂದ ಅನೇಕ ಸಾವು ನೋವುಗಳು ಸಂಭವಿಸುತ್ತದೆ ಎನ್ನುವುದಕ್ಕೆ ಈ ಹಿಂದೆ ಶಿರಾಲಿಯಲ್ಲಿ ನಡೆದ ಅದೆಷ್ಟೊ ರಸ್ತೆ ಅಪಘಾತಗಳು ಉದಾಹರಣೆಯಾಗಿದೆ.

RELATED ARTICLES  ಭಟ್ಕಳದಲ್ಲಿ ಹೆಲ್ತ್ ಎಮರ್ಜೆನ್ಸಿ ಇದ್ದರು ಅನವಶ್ಯಕವಾಗಿ ಓಡಾಟ ಮಾಡಿದ ವ್ಯಕ್ತಿ ಅರೆಸ್ಟ..!

ಕಾರಣ 45 ಮೀಟರ್ ರಸ್ತೆ ಅಗಲೀಕರಣಕ್ಕಾಗಿ ಶಿರಾಲಿ ಗ್ರಾಮಸ್ಥರು ಇಂದು ಪ್ರತಿಭಟನೆಯನ್ನು ನಡೆಸಿದರು.

ಈ ಸಂಬಂಧ ಹೇಳಿಕೆ ನೀಡಿರುವ ಶಾಸಕ ಸುನೀಲ್ ನಾಯ್ಕ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದ್ದು, ಈ ನಿಟ್ಟಿನಲ್ಲಿ ಮಾನ್ಯ ಸಂಸದರಾದ ಅನಂತಕುಮಾರಹೆಗಡೆ ಅವರು ಕೇಂದ್ರ ರಸ್ತೆ ಸಾರಿಗೆ ಸಚಿವರಾದ ಸನ್ಮಾನ್ಯ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಿದ್ದಾರೆ, ಕ್ಷೇತ್ರದ ಶಾಸಕನಾಗಿ ಈಗಾಗಲೇ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದು, ಇದರ ಬಗ್ಗೆ ವಿಶೇಷ ಕಾಳಜಿ ವಹಿಸಿ ಪಕ್ಷಾತೀತವಾಗಿ ಗ್ರಾಮಸ್ಥರ ಪರ ನಿಂತು ರಸ್ತೆಯ 45 ಮೀಟರ್ ಅಗಲೀಕರಣಕ್ಕೆ ಸಹಕರಿಸುತ್ತೇನೆ ಎಂದಿದ್ದಾರೆ.

RELATED ARTICLES  ಶಿರಸಿಯಲ್ಲಿ ನಗರದ ಭವಿಷ್ಯದ ದೃಷ್ಟಿಯಿಂದ ಬೈಪಾಸ್ ರಸ್ತೆ ನಿರ್ಮಾಣ ತೀರಾ ಅಗತ್ಯ ಎಂದು ಸಾರ್ವಜನಿಕ‌ರ ಮನವಿ.