ಧಾರವಾಡ: 7ನೇ ಆವೃತ್ತಿ ಸಾಹಿತ್ಯ ಸಂಭ್ರಮವನ್ನು ಧಾರವಾಡದಲ್ಲಿ ಹಮ್ಮಿಕೊಂಡಿದ್ದು ಇಂದು ಚಾಲನೆ ನೀಡಲಾಯಿತು ಎಂದು ತಿಳಿದುಬಂದಿದೆ.

ನಾಡೋಜ ಬರಗೂರು ರಾಮಚಂದ್ರಪ್ಪ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ದಿವಂಗತ ಗಿರಡ್ಡಿ ಗೋವಿಂದರಾಜ ಅವರ ಪತ್ನಿ ಸರೋಜಾ ಗಿರಡ್ಡಿ, ದಿ. ಎಂ.ಎಂ ಕಲಬುರ್ಗಿ ಅವರ ಪತ್ನಿ ಉಮಾದೇವಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತ್ಯ ಸಂಭ್ರಮದ ಅಧ್ಯಕ್ಷ ರಾಘವೇಂದ್ರ ಪಾಟೀಲ, 7ನೇ ಆವೃತ್ತಿ ಸಾಹಿತ್ಯ ಸಂಭ್ರಮವನ್ನು ಹಿರಿಯ ಸಾಹಿತಿ ಗಿರಡ್ಡಿ ಅವರ ನಿಧನ ಹಿನ್ನೆಲೆಯಲ್ಲಿ ಸಮರ್ಪಿಸಲಾಗಿದೆ ಎಂದರು. ಇದೇ ವೇಳೆ ದಿವಂಗತ ಗಿರಡ್ಡಿ ಗೋವಿಂದರಾಜ ಅವರ ಪತ್ನಿ, ತಮ್ಮ ಪತಿಯನ್ನು ನೆನೆದು ಬಾವುಕರಾದರು ಎನ್ನಲಾಗಿದೆ.