‌ಮನೆ ಮನೆಗಳಲ್ಲಿ ಪ್ರತಿನಿತ್ಯವೂ ಬೆಳಿಗ್ಗೆ ಹಾಗೂ ಸಾಯಂಕಾಲ ದೇವರ ಮುಂದೆ ದೀಪ ಹಚ್ಚುವುದು ಬಹಳ ಹಿಂದಿನ ಕಾಲದಿಂದಲೂ ಆಚರಿಸಿಕೊಂಡು ಬಂದ ಒಂದು ಧಾರ್ಮಿಕ ಸಂಪ್ರದಾಯವಾಗಿದೆ. ದೇವರ ದೀಪಗಳಲ್ಲಿ ಹಲವು ಬಗೆಯ ಎಣ್ಣೆಗಳನ್ನು ಉಪಯೋಗಿಸಿ ದೀಪಾರಾಧನೆಯನ್ನು ಮಾಡಲಾಗುತ್ತದೆ. ದೀಪ ದ್ರವ್ಯಗಳಲ್ಲಿ *ತುಪ್ಪ* ಅತ್ಯಂತ ಶ್ರೇಷ್ಠವೂ ಫಲಕಾರಿಯೂ ಆಗಿದೆ. ತುಪ್ಪದಿಂದ ಹಚ್ಚುವ ದೀಪವು ಅತ್ಯಂತ ಶ್ರೇಷ್ಠವಾದುದು. ಅದರಲ್ಲೂ ಬೆಣ್ಣೆ ಕಾಯಿಸಿ ತಯಾರಿಸಿದ ಹಸುವಿನ ತುಪ್ಪವನ್ನು ಬಳಸಿ ದೀಪವನ್ನು ನಿರಂತರವಾಗಿ ಬೆಳಗಿಸಬೇಕು. ಅಂಥವರ ಮನೆಯಲ್ಲಿ ಅಷ್ಟೈಶ್ವರ್ಯ ತುಂಬಿ ತುಳುಕಾಡುತ್ತಿರುತ್ತದೆ‌. ‌ ಜಾತಿ, ಮತ, ಭೇದವಿಲ್ಲದೆ ಯಾರು ಬೇಕಾದರೂ ದೇವರ ಮುಂದೆ 21 ದಿನಗಳು ತುಪ್ಪದ ದೀಪವನ್ನು ಹಚ್ಚಿದರೆ, ಅವರು ನೆನೆದ ಕಾರ್ಯಗಳು ನೆರವೇರುತ್ತವೆ.  ಪುಣ್ಯ ಕ್ಷೇತ್ರಗಳಲ್ಲಿ ತುಪ್ಪದ ದೀಪವನ್ನು ಕ್ಷೇತ್ರದ ದೇವತೆಗಳಿಗೆ ಹಚ್ಚಿದರೆ, ಯಾತ್ರಾರ್ಥಿಗಳಿಗೆ ಕ್ಷೇತ್ರದ ಫಲ ಹೆಚ್ಚಾಗಿ ಲಭಿಸುತ್ತದೆ. ತುಪ್ಪದ ದೀಪಗಳನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಹಚ್ಚಬೇಕು. ಪಶ್ಚಿಮ ಹಾಗೂ ದಕ್ಷಿಣದ ದಿಕ್ಕಿನಲ್ಲಿ ಹಚ್ಚಿದರೆ, ಶುಭ ಕಾರ್ಯಗಳು ನೆರವೇರುವುದು ನಿಧಾನವಾಗುತ್ತದೆ.

RELATED ARTICLES  ದಸರೆಯ ರಜಾದ ಸವಿ ಸವಿಯಲು ಬಂದು ಸಮುದ್ರಕ್ಕಿಳಿದವರು ಅಪಾಯದ ಸುಳಿಯಲ್ಲಿ : ಮೂವರ ರಕ್ಷಣೆ ಮಾಡಿದ ಲೈಫ್ ಗಾರ್ಡ.

ಕುಜ ದೋಷಗಳ ನಿವಾರಣೆಗಾಗಿ:

ದೇವಿಯ ದೇವಾಲಯಗಳಲ್ಲಿ ಮಂಗಳವಾರ ಮತ್ತು ಶುಕ್ರವಾರದ ದಿನಗಳಲ್ಲಿ ತುಪ್ಪದ ದೀಪಗಳನ್ನು ಹಚ್ಚಿ ಮಂಗಳ ಚಂಡಿಕಾ ಸ್ತೋತ್ರವನ್ನು ಪಠಿಸುತ್ತಾ ಬಂದರೆ, ನೆನೆದ ಕಾರ್ಯಗಳು ಕೈಗೂಡುತ್ತವೆ ಹಾಗೂ ಕುಜ ದೋಷಗಳು ನಿವಾರಣೆಯಾಗುತ್ತವೆ. ‌

RELATED ARTICLES  ಗೋಕರ್ಣದ ಕುಡ್ಲೆ ಸಮೀಪ ಕಾಣಿಸಿಕೊಂಡ ಚಿರತೆ : ಭಯದಲ್ಲಿ ಜನತೆ.