ಲಡಾಕ್: ಜಮ್ಮು-ಕಾಶ್ಮೀರದ ಖರ್ದುಂಗಾ ಲಾ ಪರ್ವತದಲ್ಲಿ ಇಂದು ಮುಂಜಾನೆ ಭಾರೀ ಹಿಮಪಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಲೇಹ್​ ಟೌನ್​​ನಿಂದ 40 ಕಿಲೋ ಮೀಟರ್ ದೂರದಲ್ಲಿರುವ 17,500 ಕಿಲೋ ಮೀಟರ್ ಎತ್ತರದ ಪರ್ವತದಲ್ಲಿ ಹಿಮಪಾತ ಸಂಭವಿಸಿದೆ. ಈ ಘಟನೆಯಲ್ಲಿ ಮೂವರು ಮೃತಪಟ್ಟಿದ್ದು, ಏಳು ಮಂದಿ ನಾಪತ್ತೆಯಾಗಿರುವ ಘಟನೆ ಜಮ್ಮು-ಕಾಶ್ಮೀರದ ಖರ್ದುಂಗ್​ ಲಾ ಪಾಸ್​ನಲ್ಲಿ ನಡೆದಿದೆ. ಕಾಣೆಯಾದವರ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವೆದಿದೆ.

ಸ್ಕಾರ್ಪಿಯೋ ವಾಹನವೊಂದು ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಹಿಮದಡಿ ಪ್ರಯಾಣಿಕರು ಸಿಲುಕಿದ್ದಾರೆ ಎನ್ನಲಾಗಿದೆ. ಕೊರೆಯುವ ಚಳಿಯ ನಡುವೆಯೂ ರಕ್ಷಣಾಕಾರ್ಯ ಮುಂದುವರಿದಿದೆ. ಜಿಲ್ಲಾಡಳಿತ ಸಹಕಾರದ ಜೊತೆಗೆ ಪೊಲೀಸ್ ಅಧಿಕಾರಿಗಳು, ರಾಷ್ಟ್ರೀಯ ವಿಪತ್ತು ಪಡೆ ರಕ್ಷಣಾಕಾರ್ಯದಲ್ಲಿ ತೊಡಗಿದೆ ಎಂದು ವರದಿಯಾಗಿದೆ.