ಕಾರವಾರ: ನಾಪತ್ತೆಯಾಗಿರುವ ಸುವರ್ಣ ತ್ರಿಭುಜ್ ಬೋಟ್ ನಾಪತ್ತೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಪತ್ತೆ ಕಾರ್ಯ ಮುಂದುವರಿಸಲು ಸೂಚಿಸಲಾಗಿದ್ದ ಹಿನ್ನೆಲೆಯಲ್ಲಿ ಎಲ್ಲ ಪ್ರಯತ್ನಗಳೂ ಮುಂದುವರಿದಿವೆ. ಕಾಣೆಯಾಗಿರುವ ಮೀನುಗಾರರ ಪತ್ತೆಗೆ ನಿರಂತರ ಶೋಧ ಕಾರ್ಯಗಳು ನಡೆದಿವೆ. ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಮಹಾಷ್ಟ್ರದ ಮಾಲ್ವಣ ಬಂದರಿನಲ್ಲಿ ಮಲ್ಪೆ ಮೀನುಗಾರರ ದೋಣಿಯಲ್ಲಿರುವ ಟಬ್ ಗಳು ಪತ್ತೆಯಾಗಿದೆ. ಇದನ್ನು ಆಧರಿಸಿ ಸುತ್ತಮುತ್ತಲಿನ ಕಡಲ ತೀರ ಸೇರಿದಂತೆ ಅನೇಕ ಕಡೆಗಳಲ್ಲಿ ಬೋಟ್ ಪತ್ತೆಗೆ ಯತ್ನ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ತಿಳಿಸಿದರು. ಅವರು ಮೀನುಗಾರ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಇಸ್ರೋ ಸೇರಿಂದಂತೆ ಎಲ್ಲ ಉಪಗ್ರಹ ಸಂಸ್ಥೆಗಳಿಂದಲೂ ಪತ್ತೆ ಕಾರ್ಯ ಮುಂದುವರಿದಿದೆ. ಅಲ್ಲದೆ 100 ಹಡಗುಗಳು ಹೆಲಿಕಾಪ್ಟರ್ ದಾಲಿರ್ನಿಯಾಗಳ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬೋಟ್ ಹಾಗೂ ಮೀನುಗಾರರ ಪತ್ತೆಗೆ ತಟ ರಕ್ಷಕ ಪಡೆ, ನೇವಿ, ಸಿವಿಲ್ ಪೊಲೀಸ್, ಕರಾವಳಿ ರಕ್ಷಣಾ ಪೊಲೀಸ್, ಸೇರಿದಂತ ಎಲ್ಲ ಭದ್ರತಾ ಪಡೆಗಳನ್ನು ಮೀನುಗಾರರ ಪತ್ತೆಗೆ ಯತ್ನಿಸುತ್ತಿದ್ದಾರೆ. ಈಗಾಗಲೇ ಮೀನುಗಾರಿಕೆ ಸಚಿವರು ಜಿಲ್ಲೆಯ ಮೀನುಗಾರರ ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬ ನಿರ್ವಹಣೆ ತಲಾ ಒಂದು ಲಕ್ಷ ರು. ಸಹಾಯ ನೀಡುವ ಭರವಸೆ ನೀಡಿದ್ದರು. ಬರುವ ಮಂಗಳವಾರ ಅವರಿಗೆ ಚೆಕ್ ನೀಡಲಾಗುವುದು ಎಂದರು.
ಬಾಂಗ್ಲಾದೇಶ ಸೇರಿ ಯಾವುದೇ ವಿದೇಶಿ ಮೀನುಗಾರರನ್ನು ನಮ್ಮ ದೋಣಿಯಲ್ಲಿ ಕೆಲಸಕ್ಕಿಟ್ಟುಕೊಂಡಿದ್ದು ಪತ್ತೆಯಾದರೆ ಆಯಾ ದೋಣಿ ವಶ ಮತ್ತು ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದು. ಬೋಟಿಯಲ್ಲಿರುವ ಮೀನುಗಾರರ ಹಾಗು ಹೊರ ರಾಜ್ಯದ ಮೀನುಗಾರರ ಐಡಿ ಕಾರ್ಡು ಅಥವಾ ಗುರುತಿನ ಚೀಟಿಯೊಂದಿಗೆ ಇರುವುದು ಕಡ್ಡಾಯವಾಗಿ ಬೋಟ್ ಮಾಲೀಕರು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಬೇಬೇಕು ಎಂದು ಅವರು ತಿಳಿಸಿದರು.
.
ಈ ಸಂದರ್ಭದಲ್ಲಿ ಪೊಲೀಸ್, ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಮೀನುಗಾರಿಕಾ ಸಂಘಟನೆಯ ಅಧಿಕಾರಿಗಳು ಇದ್ದರು.