ಕಾರವಾರ: ಕೂರ್ಮಗಡ ಜಾತ್ರೆಗೆ ತೆರಳಿದ್ದ ದೋಣಿ ಸಮುದ್ರದಲ್ಲಿ ಮುಳುಗಿ ಎಂಟು ಮಂದಿ ಮೃತಪಟ್ಟಿದ್ದು ಅವರ ಮೃತದೇಹಗಳನ್ನು ಹೊರತೆಗೆಯಲಾಗಿದೆ.
ವರ್ಷಕ್ಕೆ ಒಮ್ಮೆ ನಡೆಯುವ ಕುರ್ಮಗಡಜಾತ್ರೆ ಪ್ರಯುಕ್ತ ಕಾರವಾರದ ಹಾಗೂ ಹೊರ ರಾಜ್ಯಗಳಿಂದ ಬಂದ ಭಕ್ತರು ನರಸಿಂಹ ದೇವರ ಜಾತ್ರೆಗೆ ಪ್ರಯಾಣ ಬೆಳೆಸಲು ದೋಣಿ ಸಹಾಯಪಡೆಯುತ್ತಾರೆ. ಇಂದು ಭಕ್ತರನ್ನು ತುಂಬಿಕೊಂಡು ದೋಣಿ ಸಾಗುತ್ತಿದ್ದಾಗ ದೋಣಿ ಮುಗುಚಿದೆ ಎನ್ನಲಾಗಿದೆ.
ದೋಣಿಯಲ್ಲಿ ಸುಮಾರು 22 ಜನರಿದ್ದರು ಎನ್ನಲಾಗಿದೆ. ಇವರೆಲ್ಲ ಕೂರ್ಮಗಡ ಜಾತ್ರೆಗೆ ಹೋಗಿ ವಾಪಸ್ ಆಗುತ್ತಿದ್ದಾಗ ಘಟನೆ ನಡೆದಿದೆ. ಉಳಿದವರಿಗಾಗಿ ಶೋಧ ಕಾರ್ಯ ನಡೆದಿದೆ. ಕರಾವಳಿ ಕಾವಲು ಪಡೆ ಮತ್ತು ಸ್ಥಳೀಯ ಮೀನುಗಾರರು ಶೋಧಕಾರ್ಯ ನಡೆಸುತ್ತಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ನಕುಲ್ ಆಗಮಿಸಿದ್ದಾರೆ .