02-02-2019 ರಿಂದ ದಿ: 05-02-2019 ರವರೆಗೆ ಏರ್ಪಡಿಸಲಿರುವ ‘ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ-10’ರ ಕುರಿತ ಪತ್ರಿಕಾ ಗೋಷ್ಠಿಯನ್ನು  ಸಾಗರ ರೆಸಿಡೆನ್ಸಿ, ಹೊನ್ನಾವರ ಇಲ್ಲಿ ಕರೆಯಲಾಗಿತ್ತು.  ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ದಶಮಾನೋತ್ಸವದ ಕಾರ್ಯಕ್ರಮಗಳ ವಿವರ ನೀಡಲಾಗಿದ್ದು ಅವು ಈ ಕೆಳಗಿನಂತಿವೆ.


ಮೊದಲನೇ ದಿನ 02-02-2019 ಶನಿವಾರ ಉದ್ಘಾಟನಾ ಸಮಾರಂಭ     ಸಂಜೆ 4.30 ರಿಂದ

ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನ: ಶ್ರೀ ಡಿ. ವಿ. ಸದಾನಂದ ಗೌಡರು, ಕೇಂದ್ರ ಸಾಂಖ್ಯಿಕ ಮತ್ತು ಯೋಜನೆಗಳ ಅನುಷ್ಠಾನ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರು

ಅಧ್ಯಕ್ಷತೆ: ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾನ್ಯ ವಿಧಾನಸಭಾ ಸದಸ್ಯರು, ಶಿರಸಿ

ಸ್ವಾಗತ, ಪ್ರಸ್ತಾವನೆ: ಶ್ರೀ ಲಕ್ಷ್ಮೀನಾರಾಯಣ ಕಾಶಿ, ಶಿವಮೊಗ್ಗ, ಕಾರ್ಯಾಧ್ಯಕ್ಷರು, ನಾಟ್ಯೋತ್ಸವ ಸಮಿತಿ

“ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ-2018” ಪ್ರದಾನ

ಪುರಸ್ಕøತರು: ನೀನಾಸಂ ಸಂಸ್ಥೆ, ಹೆಗ್ಗೋಡು, ಸಾಗರ

ಅಭಿನಂದನೆ: ಶ್ರೀ ಇಕ್ಬಾಲ್ ಅಹಮದ್, ರಂಗ ನಿರ್ದೇಶಕರು, ಗುಡಿ ಸಾಂಸ್ಕೃತಿಕ ಕೇಂದ್ರ, ಶಿಕಾರಿಪುರ

ಮಂಡಳಿಯ ಯಕ್ಷಗಾನ ಪ್ರದರ್ಶನದ ಡಿವಿಡಿ ಬಿಡುಗಡೆ

ಮುಖ್ಯ ಅತಿಥಿಗಳು:
ಶ್ರೀ ಅನಂತಕುಮಾರ ಹೆಗಡೆ, ಮಾನ್ಯ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಖಾತೆ ರಾಜ್ಯ ಸಚಿವರು, ಭಾರತ ಸರಕಾರ
ಶ್ರೀ ಕೋಟಾ ಶ್ರೀನಿವಾಸ ಪೂಜಾರಿ, ಮಾನ್ಯ ವಿಧಾನ ಪರಿಷತ್ ವಿಪಕ್ಷ ನಾಯಕರು
ಶ್ರೀ ಸುನೀಲ್ ನಾಯ್ಕ, ಮಾನ್ಯ ವಿಧಾನಸಭಾ ಸದಸ್ಯರು, ಭಟ್ಕಳ-ಹೊನ್ನಾವರ
ಡಾ. ಬಿ.ಎಲ್. ಶಂಕರ್, ಹಿರಿಯ ರಾಜಕಾರಣ ಗಳು ಹಾಗೂ ಮಾನ್ಯ ಅಧ್ಯಕ್ಷರು, ಕರ್ನಾಟಕ ಚಿತ್ರಕಲಾ ಪರಿಷತ್, ಬೆಂಗಳೂರು
ಶ್ರೀ ಟಿ. ಎಸ್. ನಾಗಾಭರಣ, ರಂಗಕರ್ಮಿ, ನಿರ್ದೇಶಕರು ಹಾಗೂ ಸ್ಥಾಪಕ ಅಧ್ಯಕ್ಷರು, ಕರ್ನಾಟಕ ಚಲನಚಿತ್ರ ಅಕಾಡೆಮಿ, ಬೆಂಗಳೂರು
ಶ್ರೀ ಜೋಗಿ, ಬೆಂಗಳೂರು, ಖ್ಯಾತ ಸಾಹಿತಿ, ಅಂಕಣಕಾರರು, ಪತ್ರಕರ್ತರು
ಶ್ರೀ ಆನಂದ ವಿ. ಭಟ್, ಉದ್ಯಮಿಗಳು, ಬೆಂಗಳೂರು
ಶ್ರೀಮತಿ ದೇವಿ ಮಹಾಬಲ ಗೌಡ, ಅಧ್ಯಕ್ಷರು, ಗ್ರಾಮ ಪಂಚಾಯತ್, ಕೆಳಗಿನೂರು



ಧನ್ಯವಾದ ಸಮರ್ಪಣೆ : ಕೆರೆಮನೆ ಶಿವಾನಂದ ಹೆಗಡೆ, ನಿರ್ದೇಶಕರು, ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ಕೆರೆಮನೆ(ರಿ)       

ಸಂಜೆ 6 ರಿಂದ ಸಾಂಸ್ಕøತಿಕ ಕಾರ್ಯಕ್ರಮ :
* ಗೋಟಿಪುವಾ ಜಾನಪದ ನೃತ್ಯ, ಓರಿಸ್ಸಾ     

* ವಯಲಿನ್ ಜುಗಲಬಂದಿ- ಡಾ. ಮೈಸೂರು ಮಂಜುನಾಥ ಮತ್ತು ಮೈಸೂರು ನಾಗರಾಜ್ ಸಹೋದರರಿಂದ
    ಮೃದಂಗ- ಶ್ರೀ ಅರ್ಜುನ್ ಕುಮಾರ್   ತಬಲಾ- ಶ್ರೀ ರಾಜೇಂದ್ರ ನಾಕೋಡ್
* ‘ಈಡಿಪಸ್’ ನಾಟಕ- ನೀನಾಸಂ, ಹೆಗ್ಗೋಡು ಇವರಿಂದ
    ಕನ್ನಡ ರೂಪ ಮತ್ತು ನಿರ್ದೇಶನ: ಶ್ರೀ ಗಣೇಶ್ ಮಂದಾರ್ತಿ



ಎರಡನೇ ದಿನ 03-02-2019 ರವಿವಾರ ಬೆಳಿಗ್ಗೆ 10.00 ರಿಂದ 12.30 ರವರೆಗೆ


ಏಕವ್ಯಕ್ತಿ ತಾಳಮದ್ದಳೆ – ಶ್ರೀ ದಿವಾಕರ ಹೆಗಡೆ, ಧಾರವಾಡ ಇವರಿಂದ
ಪ್ರಸಂಗ : ದಾಂಪತ್ಯದರ್ಶನ (ರಾವಣ ವಧೆ ಸಂದರ್ಭ)

ಭಾಗವತರು : ಶ್ರೀ ಅನಂತ ಹೆಗಡೆ ದಂತಳಿಗೆ
ಮದ್ದಳೆ : ಶ್ರೀ ನರಸಿಂಹ ಹೆಗಡೆ ಮೂರೂರು

________________________________________________________________________________
ಎರಡನೇ ದಿನ 03-02-2019 ರವಿವಾರ

ಸಂಜೆ 5.00 ರಿಂದ “ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನ”
                ಸನ್ಮಾನಿತರು: * ಶ್ರೀ ಸಿದ್ಧಿವಿನಾಯಕ ದುರ್ಗಾಂಬಾ ಯಕ್ಷಗಾನ ಮಿತ್ರ ಮಂಡಳಿ, ಹುಕ್ಕಲಮಕ್ಕಿ ಮೇಳ, ಸಿದ್ಧಾಪುರ
ಡಾ. ಬಿ.ಎ. ಸನದಿ, ಕುಮಟಾ, ಹಿರಿಂiÀi ಕವಿ, ಲೇಖಕರು
* ಶ್ರೀ ಹೆರಂಜಾಲು ಸುಬ್ಬಣ್ಣ ಗಾಣ ಗ, ಯಕ್ಷಗಾನ ಕಲಾವಿದರು, ಗುರು
* ಡಾ. ವಿಜಯನಳಿನಿ ರಮೇಶ, ಶಿರಸಿ, ಯಕ್ಷಗಾನ ಸಂಶೋಧಕರು, ಕಲಾವಿದರು
* ಶ್ರೀ ರವೀಂದ್ರ ಭಟ್ ಐನಕೈ, ಬರಹಗಾರರು, ಕಲಾಚಿಂತಕರು ಹಾಗೂ ಕಾರ್ಯನಿರ್ವಾಹಕ ಸಂಪಾದಕರು, ‘ಪ್ರಜಾವಾಣ ’, ಬೆಂಗಳೂರು
* ಶ್ರೀ ಜಿ.ಎನ್. ಹೆಗಡೆ ಅಮ್ಮಿನಳ್ಳಿ, ಯಕ್ಷಗಾನ ಕಲಾವಿದರು

ಅಧ್ಯಕ್ಷತೆ: ಶ್ರೀ ಮಂಕಾಳ ಎಸ್. ವೈದ್ಯ, ಮಾಜಿ ಶಾಸಕರು, ಭಟ್ಕಳ

ಮುಖ್ಯ ಅತಿಥಿಗಳು:
ಶ್ರೀ ಶಿವರಾಮ ಹೆಬ್ಬಾರ, ಮಾನ್ಯ ಶಾಸಕರು, ಯಲ್ಲಾಪುರ.
ಶ್ರೀ ಎಸ್. ಎಸ್. ನಕುಲ (IಂS), ಮಾನ್ಯ ಜಿಲ್ಲಾಧಿಕಾರಿಗಳು, ಕಾರವಾರ
ಶ್ರೀ ಚಿದಂಬರ ರಾವ್ ಜಂಬೆ, ರಂಗ ನಿರ್ದೇಶಕರು     
ಶ್ರೀ ಬಿ. ಬಾಲಚಂದ್ರ ರಾವ್, ಮಾನ್ಯ ಅಧ್ಯಕ್ಷರು, ಕನ್ನಡ ಕಲಾಕೇಂದ್ರ, ಮುಂಬೈ
ಶ್ರೀ ಕೃಷ್ಣ ನಾಯ್ಕ, ಇಡಗುಂಜಿ, ಸದಸ್ಯರು, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಬೆಂಗಳೂರು
ಶ್ರೀ ಗಣಪಯ್ಯ ಗೌಡ ಮುಗಳಿ, ಅಧ್ಯಕ್ಷರು, ವ್ಯವಸಾಯ ಸೇವಾ ಸಹಕಾರಿ ಸಂಘ, ಕೆಳಗಿನೂರು



RELATED ARTICLES  ಉತ್ತರಕನ್ನಡದಲ್ಲಿ ಮತ್ತೆ ಏರಿದ ಕೊರೋನಾ..! ಇಂದು ಎರಡು ಸಾವು

ಸಂಜೆ 6.30 ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು:
* ಮಲ್ಲಗಂಬ ಮತ್ತು ಜಾನಪದ ನೃತ್ಯ: ರಂಗಭಾರತಿ, ಹೂವಿನಹಡಗಲಿ ಮಕ್ಕಳಿಂದ
* ಕಥಕ್- ದಿವ್ಯಾ ಭಟ್, ರೂಪ ಕೆ. ಮತ್ತು ರೇಷ್ಮಾ ನಾಯರ್, ನಾಟ್ಯ ಇನ್‍ಸ್ಟಿಟ್ಯೂಟ್ ಆಫ್ ಕಥಕ್ & ಕೋರಿಯೋಗ್ರಫಿ, ಬೆಂಗಳೂರು
* ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ: ಪಂಡಿತ್ ವಿನಾಯಕ ತೊರವಿ, ಬೆಂಗಳೂರು
  ತಬಲಾ: ಶ್ರೀ ಗೋಪಾಲಕೃಷ್ಣ ಹೆಗಡೆ, ಕಲ್ಬಾಗ್, ಹಾರ್ಮೋನಿಯಂ: ಶ್ರೀ ಭರತ್ ಹೆಗಡೆ, ಹೆಬ್ಬಲಸು, ಶಿರಸಿ

* ಗೋಟಿಪುವಾ ಜಾನಪದ ನೃತ್ಯ, ಓರಿಸ್ಸಾ






ಮೂರನೇ ದಿನ  04-02-2019 ಸೋಮವಾರ   ಬೆಳಿಗ್ಗೆ 10.00 ರಿಂದ 12.30 ರವರೆಗೆ

ಶಾಲಾ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮ
‘ಮಲ್ಲಗಂಬ ಮತ್ತು ಜಾನಪದ ನೃತ್ಯ’ ಪ್ರಾತ್ಯಕ್ಷಿಕೆ
ರಂಗಭಾರತಿ, ಹೂವಿನಹಡಗಲಿ ಮಕ್ಕಳಿಂದ

____________________________________________________________________________________________________________________________

ಮೂರನೇ ದಿನ 04-02-2019 ಸೋಮವಾರ
ಸಂಜೆ 4.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ: ರಾಜಸ್ಥಾನದ ‘ಮಾಂಗ್ನಿಯರ್’ ಸಂಗೀತ- ರೂಪಾಯನ
            ಸಂಸ್ಥಾನ, ರಾಜಸ್ಥಾನ ಇವರಿಂದ

ಸಂಜೆ 5.00 ರಿಂದ “ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂಮಾನ”
ಸನ್ಮಾನಿತರು: * ಶ್ರೀ ಎಂ. ಕೆ. ಭಾಸ್ಕರ ರಾವ್, ಬೆಂಗಳೂರು, ಬರಹಗಾರರು, ಅಂಕಣಕಾರರು, ಕಲಾ ಚಿಂತಕರು
* ಶ್ರೀ ಪಂಡಿತ್ ಪರಮೇಶ್ವರ ಹೆಗಡೆ, ಬೆಂಗಳೂರು, ಖ್ಯಾತ ಹಿಂದೂಸ್ಥಾನಿ ಗಾಯಕರು
* ಶ್ರೀ ಬಿ. ಗಣಪತಿ, ಬೆಂಗಳೂರು, ಬರಹಗಾರರು, ಅಂಕಣಕಾರರು, ಕಲಾ ಚಿಂತಕರು
* ಶ್ರೀ ಕೊಗ್ಗಾ ಭಾಸ್ಕರ ಕಾಮತ್, ಮುಖ್ಯಸ್ಥರು, ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ, ಕುಂದಾಪುರ
* ಶ್ರೀ ಮುಗ್ವಾ ಗಣೇಶ ನಾಯ್ಕ, ಹೊನ್ನಾವರ, ಯಕ್ಷಗಾನ ಕಲಾವಿದರು
ಶ್ರೀ ನಿನಾದ ರಾಮಣ್ಣ, ಕುಮಟಾ, ಧ್ವನಿ, ಬೆಳಕು ತಜ್ಞರು

   
ಅಧ್ಯಕ್ಷತೆ : ಪೆÇ್ರ. ಎಂ. ಎ. ಹೆಗಡೆ, ಮಾನ್ಯ ಅಧ್ಯಕ್ಷರು, ಕರ್ನಾಟಕ ಯಕ್ಷಗಾನ ಅಕಾಡೆಮಿ, ಬೆಂಗಳೂರು

ಮುಖ್ಯಅತಿಥಿಗಳು:
ಶ್ರೀ ದಿನಕರ ಶೆಟ್ಟಿ, ಮಾನ್ಯ ಶಾಸಕರು, ಕುಮಟಾ 
ಶ್ರೀ ಜಯಪ್ರಕಾಶ ಮಾವಿನಕುಳಿ, ಖ್ಯಾತ ಸಾಹಿತಿಗಳು 
ಶ್ರೀ ಕೆ.ಜಿ. ಸರಫ್, ಕಂಪನಿ ಸೆಕ್ರೆಟರಿ & ಪ್ರೈಟರ್, ಸರಫ್ & ಅಸೋಸಿಯೇಟ್ಸ್, ಮುಂಬೈ
ಪ್ರೊ. ಎಂ. ಶ್ರೀಧರಮೂರ್ತಿ, ಖ್ಯಾತ ಮನೋಚಿಕಿತ್ಸಕರು, ಛಾಯಾಗ್ರಾಹಕರು, ಬೆಂಗಳೂರು
ಶ್ರೀ ಮುರಳೀಧರ ಪ್ರಭು, ಖ್ಯಾತ ಉದ್ಯಮಿಗಳು, ಕಲಾಪೋಷಕರು, ಕುಮಟಾ
ಶ್ರೀ ಆರ್. ಜಿ. ಹೆಗಡೆ, ದಾಂಡೇಲಿ ಅಂಕಣಕಾರರು, ಶಿಕ್ಷಣ ತಜ್ಞರು

ಶ್ರೀ ಗಣಪಯ್ಯ ಎಂ. ಗೌಡ ಹೆಬ್ಬಾರಹಿತ್ಲ, ಊರ ಮುಖಂಡರು, ಗುಣವಂತೆ 

ಸಂಜೆ 6.30 ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು (ಮುಂದುವರಿಯುವುದು)
* ರಾಜಸ್ಥಾನದ ‘ಲಾಂಗಾ’ ಸಂಗೀತ, ‘ಕಲಬೇಲಿಯ’ ನೃತ್ಯ- ರೂಪಾಯನ ಸಂಸ್ಥಾನ, ರಾಜಸ್ಥಾನ ಇವರಿಂದ
* ‘ಸೀತಾ ಸ್ವಗತ’ ನೃತ್ಯರೂಪಕ- ಶ್ರೀಮತಿ ಗಾಯತ್ರಿ ಶ್ರೀರಾಮ, ಸಿಂಗಾಪುರ ಇವರಿಂದ
* ‘ಪ್ರಹ್ಲಾದ ನಾಟಕ’- ಶ್ರೀ ಶ್ರೀ ಲಕ್ಷ್ಮೀನರಸಿಂಗ ನಾಟ್ಯ ಸಂಸದ್, ಗಂಜಾಂ, ಓರಿಸ್ಸಾ ಇವರಿಂದ

  
 






ನಾಲ್ಕನೇ ದಿನ  05-02-2019 ಮಂಗಳವಾರ   ಬೆಳಿಗ್ಗೆ 10.00 ರಿಂದ 12.30 ರವರೆಗೆ

ಗೋಷ್ಠಿ: ಅಪೂರ್ವ ಪೂರ್ವ ಸ್ಮರಣೆ
ದಿ. ಸೋಂದಾ ಕೃಷ್ಣ ಭಂಡಾರಿ- ಉಪನ್ಯಾಸ : ಶ್ರೀ ಹೊಸ್ತೋಟ ಮಂಜುನಾಥ ಭಾಗವತರು,
                                    ಯಕ್ಷಗಾನ ವಿದ್ವಾಂಸರು
ದಿ. ದೇರಾಜೆ ಸೀತಾರಾಮಯ್ಯ- ಉಪನ್ಯಾಸ : ಶ್ರೀ ಲಕ್ಷ್ಮೀಶ ತೋಳ್ಪಾಡಿ, ಸಾಹಿತಿಗಳು, ಕಲಾಚಿಂತಕರು

ಅಧ್ಯಕ್ಷತೆ : ಡಾ. ಎಂ. ಪ್ರಭಾಕರ ಜೋಶಿ, ಮಂಗಳೂರು, ಯಕ್ಷಗಾನ ವಿದ್ವಾಂಸರು, ಅರ್ಥಧಾರಿಗಳು, ಚಿಂತಕರು
ಮುಖ್ಯ ಅತಿಥಿಗಳು: ಡಾ. ಜಿ. ಎಲ್. ಹೆಗಡೆ, ಕುಮಟಾ, ಯಕ್ಷಗಾನ ಸಂಶೋಧಕರು, ಕಲಾವಿದರು
ಗೌರವ ಉಪಸ್ಥಿತಿ: ಶ್ರೀ ಮೂರ್ತಿ ದೇರಾಜೆ, ವಿಟ್ಲ, ರಂಗ ನಿರ್ದೇಶಕರು

ಸಮಾರೋಪ ಸಮಾರಂಭ 05-02-2019 ಮಂಗಳವಾರ
ಸಂಜೆ 4.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ: ರಾಜಸ್ಥಾನದ ‘ಕಲಬೇಲಿಯ’ ನೃತ್ಯ – ರೂಪಾಯನ
                               ಸಂಸ್ಥಾನ, ರಾಜಸ್ಥಾನ ಇವರಿಂದ

ಸಂಜೆ 5.00 ರಿಂದ  “ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ-2018” ಪ್ರದಾನ

ಅಧ್ಯಕ್ಷತೆ ಮತ್ತು ಪ್ರಶಸ್ತಿ ಪ್ರದಾನ: ಸನ್ಮಾನ್ಯ ಶ್ರೀ ನಳಿನಕುಮಾರ ಕಟೀಲು, ಮಾನ್ಯ ಸಂಸದರು, ದ.ಕ.
  
ಪುರಸ್ಕೃತರು: ಶ್ರೀ ತಿಮ್ಮಣ್ಣ ಯಾಜಿ, ಮಣ್ಣಿಗೆ. ಹಿರಿಯ ಯಕ್ಷಗಾನ ಕಲಾವಿದರು

RELATED ARTICLES  ಬಯಸಿದ ಚುನಾವಣಾ ಚಿನ್ಹೆ ಪಡೆಯುವಲ್ಲಿ ಗೆದ್ದ ನಿಧಿ ದೇಶಭಂಡಾರಿ

ಅಭಿನಂದನೆ : ಶ್ರೀ ನಾರಾಯಣ ಯಾಜಿ ಸಾಲೇಬೈಲ್, ಚಿಂತಕರು ಮತ್ತು ಲೇಖಕರು

ಮುಖ್ಯ ಅತಿಥಿಗಳು: 
ಶ್ರೀ ಬಿ. ಟಾಕಪ್ಪ, ಮಾನ್ಯ ಅಧ್ಯಕ್ಷರು, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು
ಶ್ರೀ ಪ.ರಾ. ಕೃಷ್ಣಮೂರ್ತಿ, ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ, ಸಂಸ್ಕಾರ ಭಾರತಿ
ಶ್ರೀ ಆನಂದ ಸಿ. ಕುಂದರ್, ಕಲಾಪೋಷಕರು, ಉದ್ಯಮಿಗಳು, ಜನತಾ ಫಿಶ್‍ಮೀಲ್, ಕುಂದಾಪುರ
ಶ್ರೀ ಕೃಷ್ಣಮೂರ್ತಿ ಮಂಜರು ಮಾರಣಕಟ್ಟೆ, ಕಲಾಪೋಷಕರು, ಉದ್ಯಮಿಗಳು, ಹೈದ್ರಾಬಾದ್
ಶ್ರೀ ಚಂದ್ರಶೇಖರ್ ಹೆಬ್ಬಾರ್, ಮಾನ್ಯ ಅಧ್ಯಕ್ಷರು, ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ರೆಸ್ಟೋರೆಂಟ್ಸ್ ಅಸೋಸಿಯೇಶನ್, ಬೆಂಗಳೂರು
ಶ್ರೀ ಶಂಕರ್ ಭಟ್, ರಂಗಭೂಮಿ, ಕಿರುತೆರೆ ಮತ್ತು ಚಲನಚಿತ್ರ ಕಲಾವಿದರು, ಬೆಂಗಳೂರು
ಶ್ರೀ ಶೇಷಗಿರಿ ಭಟ್ ಗುಂಜಗೋಡು, ಸಿದ್ಧಾಪುರ, ಸಂಸ್ಕೃತ ವಿದ್ವಾಂಸರು
ಶ್ರೀ ಶಂಭು ಗೌಡ ಅಡಿಮನೆ, ಗುಣವಂತೆ, ಊರ ಮುಖಂಡರು

ಧನ್ಯವಾದ ಸಮರ್ಪಣೆ : ಕೆರೆಮನೆ ಶಿವಾನಂದ ಹೆಗಡೆ

ಸಂಜೆ 6.30 ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು (ಮುಂದುವರಿಯುವುದು)
* ರಾಜಸ್ಥಾನದ ‘ಲಾಂಗಾ’ ‘ಮಾಂಗ್ನಿಯರ್’ ಸಂಗೀತ- ರೂಪಾಯನ ಸಂಸ್ಥಾನ, ರಾಜಸ್ಥಾನ ಇವರಿಂದ
* ‘ಭಾಮ ಕಲಾಪಂ’ ನೃತ್ಯ ನಾಟಕ: ವಿದ್ವಾನ್ ಸೂರ್ಯ ಎನ್. ರಾವ್ ಮತ್ತು ಶ್ರೀ ಕೃಷ್ಣಮೂರ್ತಿ ತುಂಗ ಇವರಿಂದ
* ಭರತನಾಟ್ಯ- ಕು. ಅಮೂಲ್ಯ ಮಂಜ, ಹೈದ್ರಾಬಾದ್ ಇವರಿಂದ
* ಯಕ್ಷಗಾನ ‘ದುಷ್ಯಂತ-ಶಕುಂತಲೆ’- ‘ಯಕ್ಷಗೆಜ್ಜೆ’, ಮಹಿಳಾ ಮತ್ತು ಮಕ್ಕಳ ಯಕ್ಷಗಾನ ತಂಡ, ಶಿರಸಿ ಇವರಿಂದ

ಶ್ರೀಮಯ ಕಲಾ ಪೋಷಕ ಪ್ರಶಸ್ತಿ-2018
ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು, ಮಂಗಳೂರು 
ಶ್ರೀ ನಾರಾಯಣ ಭಟ್, ಮೇಲಿನಗಂಟಿಗೆ, ಯಕ್ಷಗಾನ ಕಲಾವಿದರು, ಸಂಘಟಕರು
ಶ್ರೀ ಜಿ. ಎಸ್. ಭಟ್, ಮೈಸೂರು, ಖ್ಯಾತ ಸಾಹಿತಿಗಳು, ಯಕ್ಷಗಾನ ಸಂಘಟಕರು
ಶ್ರೀ ಕೆ. ಜಿ. ಹೆಗಡೆ, ಅಣ್ಣುಹಿತ್ತಲು, ನಿವೃತ್ತ ಶಿಕ್ಷಕರು, ಕಲಾಪೆÇೀಷಕರು

ಕಾರ್ಯಕ್ರಮ ನಿರ್ವಹಣೆ: ಶ್ರೀ ಅರುಣ ಹೆಗಡೆ ಕುಮಟಾ, ಶ್ರೀ ಎಲ್. ಎಂ. ಹೆಗಡೆ, ಕೆರೆಮನೆ, ಶ್ರೀ ಬಿ. ಎಂ. ಭಟ್ಟ, ಹೊನ್ನಾವರ, ಶ್ರೀ ನಾಗರಾಜ ಹೆಗಡೆ, ಕಾಸ್ಕಂಡ, ಶ್ರೀ ಸುದೀಶ ನಾಯ್ಕ ಹೊಳೆಗದ್ದೆ, ಕುಮಟಾ, ಶ್ರೀಮತಿ ಕಲ್ಪನ ಎಸ್. ಹೆಗಡೆ, ಹೊನ್ನಾವರ, ಶ್ರೀ ರಾಜೇಶ ನಾಯಕ, ಸುರ್ವೆ, ಅಂಕೋಲಾ, ಶ್ರೀ ಮಹೇಶ ಹೆಗಡೆ, ಮಾಳ್ಕೋಡು

ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ (ರಿ)
ಭಾರತೀಯ ರಂಗ ಪರಂಪರೆಯಲ್ಲಿ ಒಂದು ವಿಶಿಷ್ಟ ಕಲಾಪ್ರಕಾರವಾದ ಯಕ್ಷಗಾನಕ್ಕೆ ಧೋರಣೆಯನ್ನು ನೀಡುವುದರಲ್ಲಿ ಮಂಡಳಿ ಅಗ್ರ ಪಂಕ್ತಿಯಲ್ಲಿದೆ. 1934ರಲ್ಲಿ ನಟಶ್ರೇಷ್ಠ ಕೆರೆಮನೆ ಶಿವರಾಮ ಹೆಗಡೆಯವರಿಂದ ಪ್ರಾರಂಭಿಸಲ್ಪಟ್ಟ ಈ ಮಂಡಳಿ, ಕೆರೆಮನೆ ಶಂಭು ಹೆಗಡೆ, ಮಹಾಬಲ ಹೆಗಡೆ, ಗಜಾನನ ಹೆಗಡೆಯವರಿಂದ ವಿಸ್ತಾರಗೊಂಡಿತು. ಈಗ ಮೂರನೇ ತಲೆಮಾರಿನಲ್ಲಿ ಕೆರೆಮನೆ ಶಿವಾನಂದ ಹೆಗಡೆಯವರ ನಿರ್ದೇಶನದಲ್ಲಿ ಸಾಂಪ್ರದಾಯಿಕ ಶೈಲಿ, ಪೌರಾಣ ಕ ಚೌಕಟ್ಟುಗಳನ್ನು ಉಳಿಸಿಕೊಂಡು ಹೊಸ ಆವಿಷ್ಕಾರದೊಂದಿಗೆ ಮುನ್ನಡೆಯುತ್ತಿದೆ. ಮಂಡಳಿಯ ವಿಸ್ತರಣಾ ಕಾರ್ಯವಾಗಿ ಅಮೃತ ಮಹೋತ್ಸವ ಆಚರಣೆ, ಶಂಭು ಹೆಗಡೆ ಸ್ಮಾರಕ ಬಯಲು ರಂಗಮಂದಿರ, ಕಲಾ ಸಾಧಕರಿಗೆ  ‘ಕೆರೆಮನೆ ಶಿವರಾಮ ಹೆಗಡೆ ಮತ್ತು ಕೆರೆಮನೆ ಗಜಾನನ ಹೆಗಡೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ, ಯಕ್ಷಗಾನ ಶಿಲ್ಪ ನಿರ್ಮಾಣ, ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ, ಯಕ್ಷಗಾನ ಭಾಗವತಿಕೆ ಅಧ್ಯಯನ ಹಾಗೂ ಸಂಶೋಧನಾ ಕಾರ್ಯಾಗಾರ, ಶಾಲಾ ಮಕ್ಕಳಿಗೆ ಆಟವೇ ಪಾಠ ಯೋಜನೆ, ಶ್ರೀಮಯ ಯಕ್ಷಗಾನ ರಂಗಶಿಕ್ಷಣ ಕೆಂದ್ರದ ಮೂಲಕ ಯಕ್ಷಗಾನ ಗುರುಕುಲ ತರಬೇತಿ, ಮುಂತಾದವನ್ನು ನಡೆಸಿಕೊಂಡು ಬರುತ್ತಿದೆ. ಅಮೃತೋತ್ತರದ ಈ ಸಂಸ್ಥೆ ಹಲವು ಪ್ರಥಮಗಳನ್ನು ಯಕ್ಷಗಾನದಲ್ಲಿ ದಾಖಲಿಸಿದೆ. ಸುಸಂಸ್ಕೃತ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆದಿದೆ.  ಪ್ರತಿ ತಿಂಗಳು ಯಕ್ಷಾಂಗಣದಲ್ಲಿ ಒಂದು ಯಕ್ಷಗಾನ ಪ್ರದರ್ಶನ ನೀಡುವ É ‘ಮಾಸದ ಆಟ’,  ಹಿರಿಯ ಕಲಾ ಸಾಧಕರ ನೆನಪಿಸುವÀ ‘ಅಪೂರ್ವ ಪೂರ್ವಸ್ಮರಣೆ’  ಮುಂತಾದ ಯೋಜನೆ ನಿರಂತರ ನಡೆಸಿಕೊಂಡು ಬರುತ್ತಿದೆ.

ಕಾರ್ಯಕ್ರಮದ ಮುಖ್ಯ ಪ್ರಾಯೋಜಕರು
*  ಸಂಸ್ಕøತಿ ಇಲಾಖೆ, ನವದೆಹಲಿ * ಸಂಗೀತ ನಾಟಕ ಅಕಾಡೆಮಿ, ನವದೆಹಲಿ*  ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು

ಕಲಾತಂಡಗಳ ಪ್ರಾಯೋಜಕರು
* ಸಪ್ತಕ, ಬೆಂಗಳೂರು  *  ಅನನ್ಯ ಸಂಸ್ಥೆ, ಬೆಂಗಳೂರು