ಕಾರವಾರ : ಕೂರ್ಮಗಡ ಜಾತ್ರೆಗೆ ತೆರಳುವ ಸಂದರ್ಭದಲ್ಲಿ ಸಂಭವಿಸಿದ ದೋಣಿ ಅವಘಡಕ್ಕೆ ಸಂಬಂಧಿಸಿದಂತೆ ನಾಪತ್ತೆಯಾದವರ ಶೋಧ ಕಾರ್ಯಾಚರಣೆ ಮುಂದುವರೆದಿದ್ದು ಇಬ್ಬರು ಪುರುಷರು ಹಾಗೂ ಒಬ್ಬ ಮಹಿಳೆಯ ಶವ ಪತ್ತೆಯಾಗಿದೆ.

ದೊರ್ನಿಎರ್ ವಿಮಾನವನ್ನೂ ಸಹ ಈ ಶೋಧ ಕಾರ್ಯಾಚರಣೆಯಲ್ಲಿ ಬಳಸಲಾಗುತ್ತಿದೆ. ನೌಕಾ ಪಡೆಯ ಹಡಗು ತಿಲನ್ಚಂಗ್ ಮಹಿಳೆಯ ಶವ ಪತ್ತೆ ಹಚ್ಚಿದೆ.

ಅದರಂತೆ ದುರಂತದಲ್ಲಿ ನೀರುಪಾಲಾಗಿದ್ದ ಹಾವೇರಿ ಮೂಲದ ಕಿರಣ್ ಎಂಬ ಮಗುವಿನ ಶವ ಇಂದು ಪತ್ತೆಯಾಗಿದೆ.ಈ ಮುಗುವಿನ ದೇಹವನ್ನು ಲೈಟ್ ಹೌಸ್ ಪ್ರದೇಶದಲ್ಲಿ ನೌಕಾದಳದ ಹೆಲಿಕಾಪ್ಟರ್ ಪತ್ತೆ ಮಾಡಿದೆ.

RELATED ARTICLES  24ರಂದು ಭಟ್ಕಳದಲ್ಲಿ ಹೃದಯ ತಪಾಸಣಾ ಉಚಿತ ಶಿಬಿರ

ಇನ್ನು ಮೃತರ ದೇಹದ ಪತ್ತೆಗಾಗಿ ಪೊಲೀಸ್ ಇಲಾಖೆ, ಟ್ಯಾಗೋರ್ ಬೀಚ್ ಸಮಿತಿ ಸಿಬ್ಬಂದಿ, ಲೈಫ್ ಗಾಡ್ರ್ಸ್ ನ ಐದು ತಂಡಗಳನ್ನು ರಚಿಸಲಾಗಿದೆ.

ಇವು ಕಡಲತೀರದಲ್ಲಿ ಶೋಧ ನಡೆಸುತ್ತಿವೆ, ಇದಲ್ಲದೇ ನೌಕಾದಳದ ಹೆಲಿಕಾಫ್ಟರ್ ಹಾಗೂ ಭಾರತೀಯ ಕೋಸ್ಟ್ ಗಾರ್ಡ್ ನ ಛಿ-155, ಛಿ-420, ಛಿ-123 ದೋಣಿಗಳು ಶೋಧ ಕಾರ್ಯದಲ್ಲಿ ತೊಡಗಿವೆ.

RELATED ARTICLES  ಡಿ.22‌ ರಿಂದ‌ ಡಿ.24ರವರೆಗೆ ದತ್ತಿನಿಧಿ ಹಾಗೂ ಪ್ರತಿಭಾ ಪುರಸ್ಕಾರ, ಸಂಗೀತ ಸಿಂಚನ ಸಮಾರಂಭ

ಅಲ್ಲದೆ, ಕೋಸ್ಟ್ ಗಾರ್ಡ್ ನ ಅಮಥ್ರ್ಯ ದೊಡ್ಡ ಬೋಟ್, ನೌಕಾಸೇನೆಯ ತಿಲಂಚಾಂಗ್ ದೊಡ್ಡ ಬೋಟುಗಳು ರಾತ್ರಿಯಿಡೀ ಕಾರ್ಯನಿರ್ವಹಿಸಿವೆ. ನಾಪತ್ತೆಯಾಗಿರುವ ಮಂದಿ ಪೈಕಿ ಇನ್ನೂ ಕೆಲವರ ಶವ ಪತ್ತೆಯಾಗಬೇಕಿದೆ.