ಶಿರಸಿ:ಶಿರಸಿಯಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಯ  ಬೀಗ ಮುರಿದು 150 ಗ್ರಾಂ ಬಂಗಾರ ಸೇರಿ 4 ಲಕ್ಷ ರೂ.ಗಳಷ್ಟು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.

     ನಗರದ ನಿರ್ಮಲನಗರದಲ್ಲಿನ ಮಂಗಲಾ ಶಿವರಾಮ ಭಟ್ಟ ಎಂಬುವರ ಮನೆಯಲ್ಲಿ ಕಳ್ಳತನವಾಗಿದ್ದು, ಇವರು ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಲಾಕ್ ಮುರಿದು ಬೆಡ್ ರೂಮ್ ನಲ್ಲಿದ್ದ ನಗ ನಾಣ್ಯವನ್ನು ದೋಚಿದ್ದಾರೆ ಕಳ್ಳರು.

RELATED ARTICLES  'ಶಕ್ತಿ ಸಂಚಯ' ಮಹಿಳಾ ಸಮಾವೇಶದ ಸಿದ್ಧತೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವ ಮಹಿಳೆಯರು.

ಒಂದು ಬಂಗಾರದ ನೆಕ್ಲೇಸ್, 9 ಗ್ರಾಮ್ ಉಂಗುರ ಸೇರಿದಂತೆ 150 ಗ್ರಾಂ ಬಂಗಾರ, 1 ಲಕ್ಷ ಬೆಲೆಬಾಳುವ ಬೆಳ್ಳಿ ವಸ್ತುಗಳು ಮತ್ತು 10 ಸಾವಿರ ನಗದು ಕಳ್ಳತನ ಮಾಡಲಾಗಿದೆ. ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರ ಬಂಧನಕ್ಕೆ ಪೋಲೀಸರು ಬಲೆ ಬೀಸಿದ್ದಾರೆ.

RELATED ARTICLES  ಆರು ಗ್ರಾಮಗಳಿಗೆ ಇನ್ನೂ ಸಿಕ್ಕಿಲ್ಲ ವಿದ್ಯುತ್ ಸಂಪರ್ಕ: ಹೋರಾಟದ ಹಾದಿ ಹಿಡಿದ ಗ್ರಾಮಸ್ಥರು.