ಭಾರತೀಯ ರೈಲ್ವೆ ಇಲಾಖೆಯ ಪಶ್ಚಿಮ ವಿಭಾಗದಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ ಎಂದು ತಿಳಿದುಬಂದಿದೆ. ಈ ವಿಭಾಗದ ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇಲ್ಲಿ ಒಟ್ಟು 1944 ಹುದ್ದೆಗಳ ಭರ್ತಿ ನಡೆಯಲಿದ್ದು, ಆಸಕ್ತರು ಮತ್ತು ಅರ್ಹ ಅಭ್ಯರ್ಥಿಗಳು 28/01/ 2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಈ ಹುದ್ದೆಗಳ ಬೇಕಾಗಿರುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿವೆ.
ಹುದ್ದೆಗಳ ವಿವರಗಳು:
ಮೆಕಾನಿಕಲ್ – 64 ಹುದ್ದೆಗಳು
ELT / ಕೋಚಿಂಗ್ – 47 ಹುದ್ದೆಗಳು
ELP
– 49 ಹುದ್ದೆಗಳು
ELT /TRD – 22 ಹುದ್ದೆಗಳು
Med – 72 ಹುದ್ದೆಗಳು
SIG – 197 ಹುದ್ದೆಗಳು
Tele – 88 ಹುದ್ದೆಗಳು
Estt – 04 ಹುದ್ದೆಗಳು
Comm – 27 ಹುದ್ದೆಗಳು
Engg. / P. way – 1260 ಹುದ್ದೆಗಳು
Engg. / Works – 114 ಹುದ್ದೆಗಳು
ಪ್ರತಿಯೊಂದು ಹುದ್ದೆಗಳಿಗೂ ವಿವಿಧ ಶೈಕ್ಷಣಿಕ ಅರ್ಹತೆಗಳನ್ನು ಕೇಳಲಾಗಿದ್ದು, ಆಸಕ್ತರು ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಿ ಅರ್ಜಿ ಸಲ್ಲಿಸಬಹುದು ಮತ್ತು ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪಶ್ಚಿಮ ರೈಲ್ವೆ ನೇಮಕಾತಿಯ ಅನುಸಾರ ವೇತನವನ್ನು ನಿಗದಿ ಪಡಿಸಲಾಗುತ್ತದೆ.
ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಜನವರಿ 28, 2019.
ಪಶ್ಚಿಮ ರೈಲ್ವೆ ಇಲಾಖೆಯ ಅಧಿಕೃತ ವೆಬ್ಸೈಟ್ http://www.wr.indianrailways.gov.in/index.jsp ಗೆ ಭೇಟಿ ನೀಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.