ಕುಮಟಾ:- “ಮಗುವಿನ ವರ್ತನೆ ಪರಿವರ್ತನೆಯೇ ಶಿಕ್ಷಣ, ವರ್ತನೆ ಮಗುವಿನ ಸಹಜ ಸ್ವಭಾವ ಅದು ಸರಿಯಾಗಿಯೂ ಇರಬಹುದು ಅಥವಾ ದೋಷಯುಕ್ತವಾಗಿಯೂ ಇರಬಹುದು ದೋಷಯುಕ್ತವಾಗಿದ್ದರೆ ಪರಿವರ್ತನೆ ಅನಿವಾರ್ಯ ಪರಿವರ್ತನೆಗೆ ಶಿಕ್ಷಕರ ಪ್ರಯತ್ನವು ಅಷ್ಟೇ ಅತ್ಯಗತ್ಯ” ಎಂದು ಕಠಿಣಕೋಣ ಹೈಸ್ಕೂಲ್ ಮುಖ್ಯಾಧ್ಯಾಪಕ ರಾಜೇಂದ್ರ ನಾಯ್ಕ ಹೇಳಿದರು.
ಹಿರೇಗುತ್ತಿಯ ಸೆಕೆಂಡರಿ ಹೈಸ್ಕೂಲ್‍ನಲ್ಲಿ ಕಾರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. “ಶಾಲೆಯ ಭೌತಿಕ ಸ್ಥಿತಿಗೆ ಶಾಲೆಯ ವಾತಾವರಣ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸಹಕಾರ ಅಗತ್ಯ ಮುಖ್ಯ ಶಿಕ್ಷಕರ ಆಡಳಿತ ವೈಖರಿ ಶಿಕ್ಷಕರ ಕರ್ತವ್ಯಪರತೆ ಪ್ರಶಂಶಿಸಿದರು”.
ಸಂದರ್ಶನ ತಂಡದಲ್ಲಿ ದಿನೇಶ.ವಿ.ಗಾಂವಕರ ಮುಖ್ಯಾಧ್ಯಾಪಕರು ಶಿವಾಜಿ ವಿದ್ಯಾಮಂದಿರ ಅಸ್ನೋಟಿ ಕಾರವಾರ, ಶೈಲೇಶ.ಡಿ.ರಾಣೆ ಮುಖ್ಯಾಧ್ಯಾಪಕರು ಆದರ್ಶ ವಿದ್ಯಾಲಯ ದೇವಳಮಕ್ಕಿ, ಸುಬ್ರಹ್ಮಣ್ಯ ಶೇರೆಗಾರ ಮುಖ್ಯಾಧ್ಯಾಪಕರು ಹಾಗೂ ಜಿಲ್ಲಾ ಸಮಾಜ ವಿಜ್ಞಾನ ಸಂಘದ ಅಧ್ಯಕ್ಷರು ಜನತಾ ವಿದ್ಯಾಲಯ ಕಡವಾಡ,ಕಾರವಾರ, ಉಮೇಶ.ಸಿ.ದೊಡ್ಡಮನಿ ಸೆಕೆಂಡರಿ ಇಂಗ್ಲೀಷ್ ಸ್ಕೂಲ್ ಅಂಗಡಿ ಭಾಗವಹಿಸಿ ಶಿಕ್ಷಕರ ಪಾಠ ವೀಕ್ಷಣೆ, ಪರಿಹಾರ ಬೋಧನೆ, ಕ್ರೀಯಾ ಯೋಜನೆ, ದತ್ತಕ ಯೋಜನೆ ಮುಂತಾದ ದಾಖಲೆಗಳನ್ನು ಪರಿಶೀಲಿಸಿ ಸಲಹೆ ಸೂಚನೆ ನೀಡಿ 2019 ಶೈಕ್ಷಣ ಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶವನ್ನು ಶೇಕಡಾ 100 ರಷ್ಟು ಪಡೆಯಲು ಪ್ರಯತ್ನಿಸಬೇಕು ಮತ್ತು ಗುಣಮಟ್ಟದ ಶಿಕ್ಷಣ ನೀಡಲು ಚರ್ಚಿಸಿ ಕಾರ್ಯಕ್ರಮ ಅನುಷ್ಠಾಗೊಳಿಸಲು ತಿಳಿಸಿದರು.
ಶಾಲಾ ಮುಖ್ಯಾಧ್ಯಾಪಕ ರೋಹಿದಾಸ ಎಸ್ ಗಾಂವಕರ ಸಂದರ್ಶನ ತಂಡಕ್ಕೆ ಸ್ವಾಗತ ಕೋರಿದರು. ಶಿಕ್ಷಕರಾದ ವಿಶ್ವನಾಥ ಬೇವಿನಕಟ್ಟಿ, ಬಾಲಚಂದ್ರ ಹೆಗಡೇಕರ, ಎನ್.ರಾಮು.ಹಿರೇಗುತ್ತಿ, ಮಹಾದೇವ ಗೌಡ, ಜಾನಕಿ ಗೊಂಡ, ಇಂದಿರಾ ನಾಯಕ, ಶಿಲ್ಪಾ ನಾಯಕ, ಸೌಜನ್ಯ ಬಂಟ್, ಕವಿತಾ ಅಂಬಿಗ ಉಪಸ್ಥಿತರಿದ್ದರು.
ವರದಿ:ಎನ್.ರಾಮು.ಹಿರೇಗುತ್ತಿ