ಮಂಗಳೂರು: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ, ಚಿತ್ರಾಪುರ ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ (80) ನಿನ್ನೆ ಸಂಜೆ ಕೊನೆಯುಸಿರೆಳೆದಿದ್ದಾರೆ ಎಂದು ತಿಲಿದುಬಂದಿದೆ.
ಅವರು ಮೂತ್ರಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಮೂರ್ನಾಲ್ಕು ವರ್ಷಗಳಿಂದ ಗುರುಗಳಿಗೆ ಆರೋಗ್ಯ ಸರಿ ಇಲ್ಲದ ಕಾರಣ ಶಿಷ್ಯರೇ ಪುತ್ತಿಗೆಯಲ್ಲಿ ತಮ್ಮ ಪಟ್ಟದ ದೇವರಾದ ಶ್ರೀ ಕಾಳೀಯಮರ್ದನ ಕೃಷ್ಣನ ಪ್ರತಿಮೆಯನ್ನು ಪೂಜಿಸುತ್ತಿದ್ದರು.
ಚಿತ್ರಾಪುರ ಮಠ ಶತಮಾನಗಳ ಹಿಂದೆ ಪೇಜಾವರ ಮಠದ 6ನೇ ಯತಿಗಳಾಗಿದ್ದ ಶ್ರೀ ವಿಜಯಧ್ವಜ ತೀರ್ಥರಿಂದ ಸ್ಥಾಪನೆಯಾಗಿತ್ತು. ಈ ಮಠದ 18ನೇ ಯತಿಗಳಾಗಿದ್ದ ವಿದ್ಯಾವಲ್ಲಭ ತೀರ್ಥರು, 11ನೇ ಯತಿಗಳಾಗಿದ್ದ ವಿದ್ಯಾಪೂರ್ಣ ತೀರ್ಥ ಶ್ರೀಪಾದರಿಂದ 1962ರಲ್ಲಿ ಪಟ್ಟ ಸ್ವೀಕರಿಸಿದ್ದರು.
ಹಿರಿಯ ಯತಿಗಳ ಸಮೀಪದಲ್ಲೇ ವೃಂದಾವನಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ಹಾಗೂ ಚಿತ್ರಾಪುರ ಮಠದ ಕಿರಿಯ ಯತಿ ಶ್ರೀ ವಿಧೇಂದ್ರ ತೀರ್ಥ ಶ್ರೀಪಾದರ ಸಮ್ಮುಖ, ಶ್ರೀಗಳನ್ನು ಧಾರ್ಮಿಕ ವಿಧಿವಿಧಾನದ ಪ್ರಕಾರ ಮಠದ ಆವರಣದಲ್ಲಿರುವ ಹಿರಿಯ ಯತಿಗಳ ಸಮೀಪದಲ್ಲೇ ವೃಂದಾವನ ಸ್ತರನ್ನಾಗಿಸಲಾಯಿತು ಎಂದು ವರದಿಯಾಗಿದೆ.