ಚೆನ್ನೈ: ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳೇ ನಿರ್ಮಿಸಿರುವ ಪಿಎಸ್​ಎಲ್​​​ವಿ- ಸಿ44 ಉಡ್ಡಯನ ವಾಹನ ಇಂದು ರಾತ್ರಿ 11:37ಕ್ಕೆ ನಭಕ್ಕೆ ಹಾರಲಿದೆ. ಅತ್ಯಂತ ಎತ್ತರದ ಕಕ್ಷೆಗೆ ಈ ಉಪಗ್ರಹವನ್ನ ಇಸ್ರೋ ಸೇರಿಸಲಿದೆ.  ಈ ಮೂಲಕ ಇಸ್ರೋ ಮತ್ತೊಂದು ಇತಿಹಾಸ ಬರೆಯಲಿದೆ. ಶ್ರೀಹರಿಕೋಟಾದ ಸತೀಶ್​ ಧವನ್​ ಬಾಹ್ಯಾಕಾಶ ನೆಲೆಯಿಂದ ಈ ಪಿಎಸ್​ಎಲ್​ವಿ- ಸಿ 44 ಉಡ್ಡಯನ ಮಾಡಲಾಗುವುದು ಎಂದು ಇಸ್ರೋ ಘೋಷಿಸಿದೆ ಎಂದು ತಿಳಿದುಬಂದಿದೆ.  

 

ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಬಯಸುವ ಉಡಾಹಕದ ಕೊನೆಯ ಹಂತವೂ ಕಕ್ಷೆಗೆ ಸೇರಿ ಬಾಹ್ಯಾಕಾಶ ಕಸವಾಗುತ್ತದೆ. ಆದರೆ ಇದನ್ನೂ ಮರುಬಳಕೆ ಮಾಡಿಕೊಳ್ಳುವ ಬಗ್ಗೆ ಇಸ್ರೋ ಸಂಶೋಧನೆ ನಡೆಸಿದೆ. ವಿಶೇಷ ವೆಂದರೆ ವಿಶ್ವದಲ್ಲೇ ಈ ನಿಷ್ಕ್ರಿಯ ಭಾಗ ಮರುಬಳಕೆ ಮಾಡುವ ಬಗ್ಗೆ ಸಂಶೋಧನೆ ಮಾಡಿರುವ ಏಕೈಕ ಬಾಹ್ಯಾಕಾಶ ಸಂಸ್ಥೆ ಇಸ್ರೋ. 

RELATED ARTICLES  ಉತ್ತರಕನ್ನಡದ ವಿದ್ಯುತ್ ಯೋಜನೆಗಳ ಬಗ್ಗೆ ಚರ್ಚೆ

 

ಇದು ಅತ್ಯಂತ ಎತ್ತರದ ವೃತ್ತಾಕಾರದ ಕಕ್ಷೆಯನ್ನ ಸೇರಿಸುವ ಸಾಮರ್ಥ್ಯವನ್ನ ಹೊಂದಿದೆ.  ಸಾಮಾನ್ಯವಾಗಿ ರಾಕೆಟ್‌ನ ಕೊನೇ ಹಂತದಲ್ಲಿ ಉಪಗ್ರಹದಿಂದ ಕಳಚಿಕೊಳ್ಳುವ ಭಾಗವು ಉಪಗ್ರಹದ ಕಕ್ಷೆಯಲ್ಲೇ ಸುತ್ತುತ್ತಿರುತ್ತದೆ. ಇದರ ಮೇಲೆ ಬಾಹ್ಯಾಕಾಶ ಕೇಂದ್ರಕ್ಕೆ ಯಾವುದೇ ನಿಯಂತ್ರಣ ಇರುವುದಿಲ್ಲ. ಇದನ್ನು ಸ್ಥಿರ ಕಕ್ಷೆಯಲ್ಲಿ ಇಡುವುದಕ್ಕಾಗಿ  ಹೆಚ್ಚುವರಿ ಇಂಧನ ಒದಗಿಸಲಾಗಿತ್ತದೆ.

RELATED ARTICLES  ಡಾಕ್ಟರೇಟ್ ಪಡೆದ ಹೊನ್ನಾವರದ ಯುವತಿ ಶೆರೋನಾ ಥಾಮಸ್ ಹೊರ್ಟಾ

 

ಸಾಮಾನ್ಯವಾಗಿ ಉಪಗ್ರಹದಿಂದ ಕಳಚಿಕೊಂಡ ರಾಕೆಟ್‌, ನಿಧಾನಕ್ಕೆ ಕುಸಿದು ಭೂಮಿಯ ವಾತಾವರಣಕ್ಕೆ ಸಿಕ್ಕಿ ಸುಟ್ಟುಹೋಗುತ್ತದೆ. ಬ್ಯಾಟರಿ, ಸೌರಫ‌ಲಕ ಅಳವಡಿಸಿದರೆ ಕೆಲವು ತಿಂಗಳು ಇದನ್ನು ಬಳಸಿಕೊಳ್ಳಬಹುದಾಗಿದೆ. ಮೈಕ್ರೋಸ್ಯಾಟ್​ ಆರ್​ ಮತ್ತು ಕಲಾಂ ಸ್ಯಾಟ್​​ ಉಪಗ್ರಹಗಳು ಆಕಾಶದ ಕಕ್ಷೆಗೆ ಸೇರಲಿವೆ ಎಂದು ವರದಿಯಾಗಿದೆ.