ಹೊನ್ನಾವರ : ಕರ್ನಾಟಕ ಕ್ರಾಂತಿರಂಗ ಸಾಲ್ಕೋಡು ಘಟಕದ ಮೊದಲನೇ ವರ್ಷದ ವಾರ್ಷಿಕೋತ್ಸವ ಅದ್ದೂರಿ ಯಾಗಿ ಜರುಗಿತು.
ಹೊನ್ನಾವರ ತಾಲ್ಲೂಕಿನ ದರ್ಬೆಜಡ್ಡಿಯಲ್ಲಿ ಕರ್ನಾಟಕ ಕ್ರಾಂತಿರಂಗ ದ ಮೊದಲನೇ ವರ್ಷದ ವಾರ್ಷಿಕೋತ್ಸವ ವನ್ನು ಉದ್ಯಮಿ ಸುಬ್ರಾಯ ವಾಳ್ಕೆ ಉದ್ಘಾಟಿಸಿದರು . ನಂತರ ಮಾತನಾಡಿದ ಸುಬ್ರಾಯ ವಾಳ್ಕೆ ಸಂಘಟನೆಗಳು ರಾಜಕೀಯ ಪೂರಕವಾಗಿ ಅಥವಾ ರಾಜಕೀಯಕ್ಕೆ ವಿರುದ್ಧವಾಗಿ ಹೋರಾಡಿ, ಸಂಘಟಿತರಾಗಿ ಸರ್ಕಾರಿ ಸೌಲಭ್ಯಕ್ಕಾಗಿ ಹೋರಾಡಬೇಕು ಹಾಗೂ ನ್ಯಾಯಯುತವಾಗಿ ಹೋರಾಟ ನಡೆಸುವವರಿಗೆ ಸಹಕಾರ ನೀಡಬೇಕು.. ಸಂಘಟನೆ ಬಹಳ ಮುಖ್ಯ.. ಅದರ ಜೊತೆಗೆ ನಮ್ಮ ಹೋರಾಟ ನ್ಯಾಯದ ಪರವಾಗಿರಬೇಕು, ಸಮಾಜದ ಅಂಕುಡೊಂಕುಗಳನ್ನು ಗುರುತಿಸಿ ಎಚ್ಚರಿಸುವಂಥಿರಬೇಕು ತನ್ಮೂಲಕ ಉತ್ತಮ ಸಮಾಜದ ನಿರ್ಮಾಣ ಕ್ಕೆ ಆ ಸಂಘಟನೆ ಪರವಾಗಿರಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಮಂಗಲದಾಸ ವಹಿಸಿದ್ದರು. ವೇದಿಕೆಯಲ್ಲಿ ಜಿ ಪಂ ಸದಸ್ಯೆ ಶ್ರೀಕಲಾ ಶಾಸ್ತ್ರಿ, ಸಂಘಟನೆಯ ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.