ನಮ್ಮ ದೇಹದಲ್ಲಿ ಜೀರ್ಣಕ್ರಿಯೆ ಸರಿಯಾಗಿ ಆಗ್ತಿಲ್ಲ ಅಂದರೆ ನಾವು ಸೇವಿಸುವ ಆಹಾರದಲ್ಲಿ ಏನೋ ಸಮಸ್ಯೆಯಿದೆ ಎಂದರ್ಥ.ನಿಮ್ಮ ಮೂತ್ರ ಪಿಂಕ್/ಕೆಂಪು ಬಣ್ಣಕ್ಕೆ ತಿರುಗಿದರೆ ನಿಮಗೆ ಲೋ ಸ್ಟಮಕ್ ಆಸಿಡ್ ಅಥವಾ ಹೊಟ್ಟೆಯ ಕಡಿಮೆ ಆಮ್ಲೀಯತೆ ಇದ್ದಂತೆ.

ಜೀರ್ಣಕ್ರಿಯೆಯಲ್ಲಿ ಮುಖ್ಯವಾದ ಮೊದಲ ಹಂತ ಹೊಟ್ಟೆ ಆಮ್ಲೀಯತೆಯಾಗಿದೆ. ಇದು ಸಾಕಷ್ಟಿಲ್ಲದಿದ್ದರೆ ನಿಮಗೆ ಬಿ12 ಅನ್ನು ಹೀರಿಕೊಳ್ಳಲಾಗುವಿದಿಲ್ಲ, ಮತ್ತು ಝಿಂಕ್ ಮತ್ತು ಇತರ ಕೆಲವು ನ್ಯೂಟ್ರಿಯಂಟ್ಸ್‌ಗಳನ್ನು ಗ್ರಹಿಸುವಲ್ಲಿ ನಿಮಗೆ ಸಮಸ್ಯೆ ತಲೆದೋರುತ್ತದೆ. ಹೊಟ್ಟೆಯಲ್ಲಿ ಕಡಿಮೆ ಆಮ್ಲೀಯತೆ ಉಂಟಾಗುವುದಕ್ಕೆ ಹಲವಾರು ಕಾರಣಗಳಿದ್ದು, ದೈಹಿಕ ಚಟುವಟಿಕೆಗೆ ಇದು ನಿರ್ಬಂಧವನ್ನು ಹೇರುತ್ತದೆ. ಪೋಷಕಾಂಶಗಳ ಅಭಾವ ನಿಮ್ಮನ್ನು ಕಾಡಬಹುದು.

ಆಮ್ಲೀಯತೆಯ ಪ್ರಮಾಣ ಕಡಿಮೆಯಾದರೆ ಹಲವಾರು ಸಮಸ್ಯೆಗಳು ನಿಮ್ಮ ಆರೋಗ್ಯದ ಮೇಲೆ ಉಂಟಾಗುತ್ತವೆ. ಆಹಾರದಲ್ಲಿನ ಮೂಲ ಅಂಶಗಳನ್ನು ಗ್ರಹಿಸುವಲ್ಲಿ ಕಡಿಮೆ ಆಮ್ಲೀಯತೆ ವಿಫಲಗೊಳ್ಳುತ್ತದೆ. ಜೀರ್ಣಕ್ರಿಯೆ ನಿಧಾನಗೊಂಡು ಮಲಬದ್ಧತೆ, ವಾಯು, ಹೊಟ್ಟೆ ಊದುವಿಕೆ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುವ ವಿವಿಧ ರೀತಿಯ ಆಹಾರಗಳು ನಮ್ಮ ಮನೆಯಲ್ಲೇ ಇದೆ.

RELATED ARTICLES  ನಿಮ್ಮ ಕಾಲಿನ ಹಿಮ್ಮಡಿ ಒಡೆಯುತ್ತಿದೆಯೇ? ಹಾಗಾದರೆ ಒಡೆಯದಂತೆ ನೋಡಿಕೊಳ್ಳಲು ಹೀಗೆ ಮಾಡಿ.

1. ಸೋಂಪು: ಊಟದ ನಂತರ ಸೋಂಪನ್ನ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಅನೇಕ ರೆಸ್ಟೋರೆಂಟ್​ಗಳಲ್ಲಿ ಊಟದ ನಂತರ ತಿನ್ನಲು ಸೋಂಪನ್ನ ನೀಡುತ್ತಾರೆ. ಯಾಕಂದ್ರೆ ಇದು ಜೀರ್ಣಕ್ರಿಯೆಗೆ ಹೆಚ್ಚು ಸಹಕಾರಿ ಅಂತ ಜನಪ್ರಿಯವಾಗಿದೆ. ಅಲ್ಲದೇ ಗ್ಯಾಸ್​ನಿಂದ ಉಂಟಾಗುವ ನೋವು ನಿವಾರಿಸುವುದು, ಜೀರ್ಣಕ್ರಿಯೆಯನ್ನ ಉತ್ತೇಜಿಸುವುದು, ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನ ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

2. ಎಳ್ಳು: ಎಳ್ಳಿನ ಬೀಜಗಳಲ್ಲಿರುವ ಡಯೆಟರಿ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಅಗತ್ಯವಿರುವ ಫೈಬರ್​ ಅನ್ನ ನಿಮ್ಮ ದೇಹಕ್ಕೆ ಒದಗಿಸುತ್ತವೆ. ಗಟ್​ ಬ್ಯಾಕ್ಟೀರಿಯಾವನ್ನು ಸುಧಾರಿಸಲು ಫೈಬರ್ ಸಹಾಯ ಮಾಡುತ್ತದೆ. 100 ಗ್ರಾಂ ಎಳ್ಳಿನಲ್ಲಿ ಸುಮಾರು 12 ಗ್ರಾಂ ಫೈಬರ್​ ಇರುತ್ತದೆ. ಇದು ನಿಮ್ಮ ಆಹಾರಗಳೊಂದಿಗೆ ಸೇರಿದಾಗ ದೇಹದಲ್ಲಿ ಜೀರ್ಣಕಾರಿ ವ್ಯವಸ್ಥೆಯನ್ನು ಉತ್ತಮಗೊಳ್ಳುತ್ತದೆ.

RELATED ARTICLES  ಪ್ಲಾಸ್ಟಿಕ್ ಮಾದರಿಯ ಚರ್ಮ ಹೊಂದಿರುವ ಮಗುವಿಗೆ ಜನ್ಮ ನೀಡಿದ ಮಹಿಳೆ..!

3.ಅಗಸೆ ಬೀಜಗಳು: ಪ್ರೋಟೀನ್, ಕಾರ್ಬ್ಸ್, ಫೈಬರ್, ಒಮೆಗಾ -3 ಕೊಬ್ಬಿನಾಮ್ಲಗಳು, ಬಿ-ವಿಟಮಿನ್​ಗಳು ಮತ್ತು ಹೆಚ್ಚು ರೀತಿಯ ಪೋಷಕಾಂಶಗಳು ಅಗಸೆ ಬೀಜಗಳಲ್ಲಿ ಸಮೃದ್ಧವಾಗಿದೆ. ಆದ್ದರಿಂದ ಅಗಸೆ ಬೀಜಗಳನ್ನ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ.

4.ಬಾದಾಮಿ: ಬಾದಾಮಿಯಲ್ಲಿ ಕೂಡ ಫೈಬರ್​ ಅಂಶ ಸಮೃದ್ಧವಾಗಿದೆ. ಸರಿಯಾದ ಪ್ರಮಾಣದಲ್ಲಿ ಬಾದಾಮಿಯನ್ನ ಸೇವಿಸುವುದರಿಂದ ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ. ಬಾದಾಮಿಗಳನ್ನ ಹೆಚ್ಚಾಗಿ ಸೇವಿಸುವುದರಿಂದ ಗಟ್​ ಬ್ಯಾಕ್ಟೀರಿಯಾ ಅನುಕೂಲವನ್ನ ಒದಗಿಸುತ್ತವೆ. ಇನ್ನು ಇದರಲ್ಲಿರುವ ವಿಟಮಿನ್- E ಹೃದಯದ ಆರೋಗ್ಯ ಮತ್ತು ಕಣ್ಣಿನ ಆರೋಗ್ಯಕ್ಕೆ ಉತ್ತಮವಾಗಿದೆ.

5. ಅಜ್ವೈನ್: ಅಜ್ವೈನ್​ ಅಥವಾ ಓಂ ಕಾಳನ್ನು ಚೆನ್ನಾಗಿ ಅಗಿದು ತಿನ್ನುವುದರಿಂದ ಹೊಟ್ಟೆಯಲ್ಲಿ ಗ್ಯಾಸ್​ ಉಂಟಾಗದಂತೆ ತಡೆಯಬಹುದು. ಇದರಲ್ಲಿ ಥೈಮಾಲ್​ ಎಂಬ ಅಂಶವು ಸಮೃದ್ಧವಾಗಿದ್ದು, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುವ ಗ್ಯಾಸ್ಟ್ರಿಕ್ ರಸವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಅಜೀರ್ಣ ಸಮಸ್ಯೆಗೆ ಹಲವು ವರ್ಷಗಳಿಂದ ಅಜ್ವೈನ್​ನನ್ನ ಬಳಸಲಾಗುತ್ತಿದೆ.