ಸಂಗೀತ ಎಲ್ಲರ ಮನಸನ್ನು ಅರಳಿಸಲು ಸಹಕಾರಿ ಎಂದು ಭಟ್ಕಳ ತಾಲೂಕಾ ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ನುಡಿದರು. ಅವರು ಇಲ್ಲಿನ ದಿ ನ್ಯೂ ಇಂಗ್ಲೀಷ್ ಪದವಿ ಪೂರ್ವ ಕಾಲೇಜಿನ ವಿದ್ಯಾಥಿಗಳಿಗೆ ಎಮ್.ಎನ್.ವ್ಯಾಸರಾವ್ ಹಾಗೂ ಸುಮತೀಂದ್ರ ನಾಡಿಗ ವಿರಚಿತ ಗೀತೆ ಗಾಯನ ಸ್ಪರ್ಧೆಯ ಬಹುಮಾನವನ್ನು ವಿತರಿಸಿ ಮಾತನಾಡುತ್ತಿದರು.

ದೀಪ ಬೆಳಗುವ ಮೂಲಕ ಗೀತಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು ವಿಧ್ಯಾರ್ಥಿಗಳಲ್ಲಿರುವ ಗಾಯನ ಪ್ರತಿಭೆಗೆ ವೇದಿಕೆಯನ್ನೊದಗಿಸುವುದರ ಜೊತೆಗೆ ಕನ್ನಡದ ಸಾಹಿತಿಗಳು ಮತ್ತು ಅವರ ಸಾಹಿತ್ಯವನ್ನು ಮಕ್ಕಳಿಗೆ ಪರಿಚಯಿಸುವುದು ಈ ಸ್ಪರ್ಧೇಯ ಮುಖ್ಯ ಉದ್ದೇಶ. ಗೀತೆಗಳನ್ನು ಕೇಳುವುದುರ ಜೊತೆಗೆ ಅದರಲ್ಲಿನ ಸಾಹಿತ್ಯವನ್ನು ಆಸ್ವಾದಿಸುವುದು ಕೂಡ ಅಷ್ಟೇ ಮುಖ್ಯ. ಸಾಹಿತಿಗಳ ಗೀತೆಗಳು ಸಂಗೀತಕ್ಕೆ ಅಳವಡಿಸಲ್ಪಟ್ಟಾಗ ಬಹಳ ಕಾಲ ಎಲ್ಲರ ಮನಸಲ್ಲಿರಲು ಸಾಧ್ಯವಾಗುತ್ತದೆ. ಸಂಗೀತವು ನಮ್ಮ ಮನಸನ್ನು ಅರಳಿಸುವ ಜೊತೆಗೆ ನಮ್ಮ ಭಾವನೆಗಳ ಉದಾತ್ತೀಕರಣಕ್ಕೂ ಕಾರಣವಾಗುತ್ತದೆ ಎಂದು ನುಡಿದು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದಿಸಿದರು.

RELATED ARTICLES  ನಾವು ಅಧಿಕಾರಕ್ಕೆ ಬಂದ್ರೆ ತಕ್ಷಣ ಕೆಪಿಎಂಇ ಕಾಯ್ದೆ ರದ್ದು; ಯಡಿಯೂರಪ್ಪ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ವೀರೇಂದ್ರ ಶಾನಭಾಗ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಂಕಗಳಿಗೇ ಪ್ರಾಧಾನ್ಯತೆ ನೀಡುವ ವ್ಯವಸ್ಥೆಯ ಒತ್ತಡವನ್ನು ಕಡಿಮೆಗೊಳಿಸಲು ಸಾಹಿತ್ಯ ಸಂಗೀತದಂತಹಾ ಪಠ್ಯೇತರ ಚಟುವಟಿಕೆಗಳು ಸಹಕಾರಿ. ದಿನನಿತ್ಯದ ಪಠ್ಯ ಚಟುವಟಿಕೆಗಳ ಒತ್ತಡದ ನಡುವೆ ಮನಸಿಗೆ ಖುಷಿಕೊಡುವಂತಹಾ ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸಿ ಹೆಸರಾತ ಕವಿಗಳ ಉತ್ತಮ ಗೀತೆಗಳನ್ನು ಕೇಳುವ ಆ ಮೂಲಕ ಸಾಹಿತ್ಯವನ್ನೂ ಆಸ್ವಾಧಿಸಲು ಅವಕಾಶ ಮಾಡಿಕೊಡುವ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂದು ನುಡಿದರು. ಗೀತಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಧನಲಕ್ಷ್ಮಿ ಮೊಗೇರ, ದ್ವಿತೀಯ ಸ್ಥಾನ ಪಡೆದ ಗೌರೀಶ ಹೆಗಡೆ, ತ್ರತೀಯ ಸ್ಥಾನ ಪಡೆದ ವಾಣಿಶ್ರೀ ಭಟ್ ಮತ್ತು ಸುಷ್ಮಾ ಹೆಬ್ಬಾರ, ಸಮಾಧಾಣಕರ ಬಹುಮಾನ ಪಡೆದ ಚೈತ್ರಾ ನಾಯ್ಕ ಮತ್ತುಶ್ರೇಯಾ ಹೆಗಡೆ ಇವರುಗಳಿಗೆ ಸಾಹಿತ್ಯ ಪರಿಷತ್ ವತಿಯಿಂದ ಪ್ರಮಾಣ ಪತ್ರ ಹಾಗೂ ಬಹುಮಾನವನ್ನು ವಿತರಿಸಲಾಯಿತು.

RELATED ARTICLES  ಹದಿಹರೆಯ ವಯೋಮಾನದ ಮಕ್ಕಳಲ್ಲಿ ಉಂಟಾಗುವ ಸಮಸ್ಯೆಗಳ ಕುರಿತಾಗಿ ಉಪನ್ಯಾಸ ಕಾರ್ಯಕ್ರಮ

ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ಸಾಂಸ್ಕøತಿಕ ವಿಭಾಗದ ಸಂಯೋಜಕಿ ಪಲ್ಲವಿ ನಾಯ್ಕ ಉಪಸ್ಥಿತರಿದ್ದರು. ಉಪನ್ಯಾಸಕ ಜಯಂತ ನಾಯ್ಕ ಎಲ್ಲರನ್ನು ಸ್ವಾಗತಿಸಿದರು. ಹಿರಿಯ ಉಪನ್ಯಾಸಕರಾದ ರಾಮಚಂದ್ರ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಜಯಶ್ರೀ ಪ್ರಭು ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶ್ಯಾಮಲಾ ಕಾಮತ್, ನಾಗಲಕ್ಷ್ಮೀ ನಾಯ್ಕ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.