ಶಿರಸಿ : ಗ್ರಾಹಕರ ಹಾಗೂ ರೈತ ಸದಸ್ಯರ ಜೀವನಾವಶ್ಯಕಗಳನ್ನು ಸ್ಪಧಾತ್ಮಕ ದರದಲ್ಲಿ ಒದಗಿಸುತ್ತಾ ಬಂದಿರುವ ಟಿ.ಎಸ್.ಎಸ್. ಶಿರಸಿ ಸುಪರ್ ಮಾರ್ಕೆಟ್‍ನಲ್ಲಿ 2018-19ನೇ ಸಾಲಿನ ಹಣಕಾಸು ವರ್ಷದಲ್ಲಿ 100 ಕೋಟಿ ಮಾರಾಟದ ವ್ಯವಹಾರ ನಡೆಸಿ ಮಹತ್ತರ ಸಾಧನೆ ಮಾಡಿದೆ.

ಸದಸ್ಯರ ಹಾಗೂ ಗ್ರಾಹಕರ ಪ್ರಾಮಾಣ ಕ ವ್ಯವಹಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದ್ದು, ಈ ಸಂಭ್ರಮವನ್ನು ದಿ:25.01.2019ರಂದು ಖರೀದಿಯ ಮೇಲೆ ಖಚಿತ ಉಡುಗೊರೆ ನೀಡುವುದರ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಶ್ರೀ ರಾಮಕೃಷ್ಣ ಹೆಗಡೆ ಕಡವೆ, ನಿರ್ದೇಶಕರಾದ ಶ್ರೀಮತಿ ಶಾರದಾ ಅಣ್ಣಪ್ಪ ಹೆಗಡೆ ಶಿರಸಿಮಕ್ಕಿ, ಪ್ರಧಾನ ವ್ಯವಸ್ಥಾಪಕರಾದ ಶ್ರೀ ರವೀಶ್ ಅ. ಹೆಗಡೆ, ಸದಸ್ಯರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

RELATED ARTICLES  ಕುಮಟಾ ಕೆ.ಇ.ಬಿ ಅಧಿಕಾರಿಗಳ ನಿರ್ಲಕ್ಷತನ:ಜನರ ಗೋಳು ಕೇಳೋರೆ ಇಲ್ಲ.

ಈ ಸಾಧನೆಯ ಯಶಸ್ಸಿಗೆ ಕಾರಣೀಕರ್ತರಾದ ಸಂಘದ ಸದಸ್ಯರಿಗೆ, ಕುಟುಂಬದವರಿಗೆ, ಹಾಗೂ ಗ್ರಾಹಕರಿಗೆ ಧನ್ಯವಾದಗಳನ್ನು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.