ಮೇಷ ರಾಶಿ : ಮಾಡುವ ಕೆಲವೊಂದು ಕೆಲಸದಲ್ಲಿ ಧೈರ್ಯಗೆಡದೆ ಮುನ್ನಡೆಯಿರಿ. ಅಡಚಣೆಗಳು ತಾನಾಗಿಯೇ ದೂರವಾಗುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ವೃಷಭ ರಾಶಿ :ಬುದ್ಧಿವಂತ ಜನರ ಒಡನಾಟ ಸಿಗುವುದು. ಕೆಲವು ಮಹತ್ತರ ವಿಷಯಗಳನ್ನು ಅರಿಯುವಿರಿ. ಹಾಗಾಗಿ ವರ್ತಮಾನದಲ್ಲಿ ಸುಖ-ಸಂತೋಷ ನೆಮ್ಮದಿಯಿಂದ ಇರುವಿರಿ. ಮನೆಯ ಸದಸ್ಯರ ಸಹಕಾರ ದೊರೆಯುವುದು.
ಮಿಥುನ ರಾಶಿ: ನೆರೆಹೊರೆಯವರೊಂದಿಗೆ ಪ್ರೀತಿ -ವಿಶ್ವಾಸದಿಂದ ಇರಿ. ಅನಗತ್ಯ ವಿಷಯಗಳಲ್ಲಿ ಮೂಗು ತೂರಿಸಿ ಮನಸ್ತಾಪಕ್ಕೆ ಒಳಗಾಗುವಿರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ತಲ್ಲೀನತೆಯಿಂದ ಮಗ್ನರಾಗಿ. ಭಗವಂತನ ಆಶೀರ್ವಾದ ದೊರೆಯುವುದು.
ಕಟಕ ರಾಶಿ :ಜನರೊಂದಿಗೆ ವ್ಯವಹರಿಸುವಾಗ ಎಚ್ಚರವಿರಲಿ. ವಿಶೇಷವಾಗಿ ಮಾತಿನ ಮೇಲೆ ನಿಗಾ ಇಡಿ. ಮಾತೇ ಮುತ್ತು ಮಾತೇ ಶತ್ರು ಎನ್ನುವಂತೆ ಕೆಲವೊಮ್ಮೆ ನೀವು ಆಡುವ ಮಾತು ವಿಕೋಪಕ್ಕೆ ಹೋಗುವುದು. ಕೌಟುಂಬಿಕವಾಗಿ ನೆಮ್ಮದಿಯ ದಿನ.
ಸಿಂಹ ರಾಶಿ :ಪರಿಶ್ರಮಕ್ಕೆ ತಕ್ಕ ಫಲ ದೊರೆಯುವುದು. ಭಾವನಾತ್ಮಕವಾಗಿ ಜನರನ್ನು ಸೆಳೆಯುವ ಶಕ್ತಿಯಿಂದ ಬಹಳ ಉಪಯೋಗ ಪಡೆಯುವಿರಿ. ಜನರ ದೃಷ್ಟಿಯಲ್ಲಿ ಒಳ್ಳೆಯ ವ್ಯಕ್ತಿಯಾಗಿ ಕಾಣುವಿರಿ. ಸಾಮಾಜಿಕವಾಗಿಯೂ ಕೀರ್ತಿ ಬೆಳಗುವುದು.
ಕನ್ಯಾ ರಾಶಿ :ಎಲ್ಲರೊಂದಿಗೆ ಬೆರೆಯುವ ಸಹವಾಸಪ್ರಿಯರು. ಮಾತಿನ ಮೋಡಿಯಿಂದ ಜನರನ್ನು ಬಹಳ ಬೇಗ ನಿಮ್ಮತ್ತ ಸೆಳೆದುಕೊಳ್ಳುವಿರಿ. ನಾನ ಬಗೆಯ ಜನರ ಸಂಪರ್ಕದಿಂದ ಸಂತೋಷಪಡುವಿರಿ. ಹಿತೈಷಿಗಳಿಂದ ಮನಸ್ಸಿಗೆ ನೆಮ್ಮದಿ
ತುಲಾ ರಾಶಿ :ಅತಿಥಿಗಳ ದಿಢೀರ್ ಆಗಮನವಾಗಲಿದೆ. ಬಂದವರಿಂದ ನಿಮ್ಮ ಮನಸ್ಸಿಗೆ ಇಷ್ಟವಾಗುವ ಕೆಲವು ವಿಚಾರಗಳು ತಿಳಿಯಲಿವೆ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನಹರಿಸಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು..
ವೃಶ್ಚಿಕ ರಾಶಿ : ಅತ್ತೆ ಒಡೆದ ಪಾತ್ರೆಗಳಿಗೆ ಬೆಲೆಯಿಲ್ಲ. ಅಂತೆಯೇ ಇಂದು ನೀವು ಮಾಡುವ ಕೆಲಸಗಳಲ್ಲಿ ಕೆಲವರು ತಪ್ಪನ್ನು ಕಾಣುವರು. ಅದು ಅಷ್ಟೇನೂ ಮಹತ್ವವಲ್ಲದಿದ್ದರೂ ಮಾನಸಿಕ ಕಿರಿಕಿರಿ ಉಂಟು ಮಾಡುವುದು. ಗುರುಹಿರಿಯರ ಅಪ್ಪಣೆ ಪಡೆದು ಕಾರ್ಯ ನಿರ್ವಹಿಸಿರಿ.
ಧನಸ್ಸು ರಾಶಿ :ಹಣವನ್ನು ತಿಪ್ಪೆಗೆ ಎಸೆದರೂ ಲೆಕ್ಕ ಬರೆದಿಡಬೇಕು ಎಂಬುದು ವ್ಯಾವಹಾರಿಕ ಜಾಣ್ಮೆಯ ಮಾತು. ಹಾಗಾಗಿ ನಿಮ್ಮ ಲೆಕ್ಕಪತ್ರಗಳನ್ನು ಒಂದೆಡೆ ಒಪ್ಪವಾಗಿ ಬರೆದಿಟ್ಟರೆ ಒಳ್ಳೆಯದು. ಇದರಿಂದ ಮುಂದೆ ಅನಾವಶ್ಯಕ ಖರ್ಚುಗಳ ಮೇಲೆ ಹಿಡಿತ ಸಾಧಿಸಬಹುದು.
ಮಕರ ರಾಶಿ : ಹಿರಿಯರು ಹಾಕಿ ಕೊಟ್ಟ ದಾರಿಯಲ್ಲಿ ನಡೆಯಬೇಕೆ ಹೊರತು ಅವರ ಕೆಟ್ಟ ಚಾಳಿಗಳನ್ನು ನಕಲು ಮಾಡಬಾರದು. ಹಿರಿಯರಿಗೆ ಅಗೌರವ ತರುವ ಮಾತನ್ನು ಆಡದಿರುವುದು ಕ್ಷೇಮ. ಹಿರಿಯರ ಶಾಪ ನಿಮ್ಮ ಸಂತೋಷವನ್ನು ಕಸಿದುಕೊಳ್ಳುವುದು.
ಕುಂಭ ರಾಶಿ : ನಾಲಿಗೆ ಮಾತನಾಡಿದರೆ ದವಡೆಹಲ್ಲಿಗೆ ತೊಂದರೆ. ಹಲ್ಲು ಮತ್ತು ನಾಲಿಗೆ ಒಟ್ಟಿಗೆ ಸಹಬಾಳ್ವೆ ನಡೆಸಿದರೆ ಜೀವನ ಸುಗಮ. ಅಂತೆಯೇ ಇಂದು ದುಡುಕಿ ಮಾತನಾಡದಿರಿ. ಇಲ್ಲದಿದ್ದರೆ ನಂತರ ಪಶ್ಚಾತ್ತಾಪ ಪಡಬೇಕಾಗುವುದು. ಆರೋಗ್ಯದ ಕಡೆ ಲಕ್ಷತ್ರ್ಯವಿರಲಿ.
ಮೀನ ರಾಶಿ : ಹಳೆಯ ಗೆಳೆಯನ ಜೊತೆ ಸೇರಿ ಹೊಸ ಯೋಜನೆ ರೂಪಿಸುವಿರಿ. ವ್ಯಾಪಾರ-ವ್ಯವಹಾರದಲ್ಲಿ ಅಧಿಕ ಲಾಭ ಕಂಡು ಬರುವುದು. ಆರೋಗ್ಯ ಉತ್ತಮವಾಗಿರುವುದು. ನಾನಾ ಮೂಲಗಳಿಂದ ಹಣ ಹರಿದು ಬರುವುದು.