ಕುಮಟಾ: ತಾಲೂಕ ಕಚೇರಿಯಲ್ಲಿ ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕರಾದ ಶ್ರೀ ದಿನಕರ ಶೆಟ್ಟಿ ಅವರು ಫಲಾನುಭವಿ ಅಂಗವಿಕಲರಿಗೆ ದ್ವಿಚಕ್ರ ವಾಹನ ವಿತರಿಸಿದರು. ಶಾಸಕರ ಕ್ಷೇಮಾಭಿವೃದ್ಧಿ ನಿಧಿಯಿಂದ ಪ್ರತಿವರ್ಷ ಸುಮಾರು 20 ಲಕ್ಷದಷ್ಟು ಹಣವನ್ನು ಅಂಗವಿಕಲರಿಗಾಗಿ ಮೀಸಲಿಡುತ್ತಾರೆ ಅದೇ ಪ್ರಕಾರ ಈ ವರ್ಷವೂ ಸಹ ಫಲಾನುಭವಿ ಅಂಗವಿಕಲರಿಗೆ 27 ಶ್ರೀ ಚಕ್ರ ವಾಹನ ವನ್ನು ನೀಡಲಾಯಿತು.
ಕುಮಟಾ ಹೊನ್ನಾವರ ಕ್ಷೇತ್ರದಎಲ್ಲಾ ಫಲಾನುಭವಿ ಅಂಗವಿಕಲರಿಗೆ ಈ ಸೌಲಭ್ಯ ನೀಡಲಾಯಿತು. ಇವತ್ತು ಕುಮಟಾದ ತಾಸಿಲ್ದಾರ್ ಕಚೇರಿಯಲ್ಲಿ ಕುಮಟಾದ 18 ಜನ ಹಾಗೂ ಹೊನ್ನಾವರದ ಇಬ್ಬರಿಗೆ ಈ ತ್ರಿಚಕ್ರ ವಾಹನವನ್ನು ಶಾಸಕರಾದ ಶ್ರೀ ಶ್ರೀ ದಿನಕರ ಶೆಟ್ಟಿ ಅವರು ಈ ವಾಹನವನ್ನು ಹಸ್ತಾಂತರಿಸಿದರು.
ಪ್ರತಿ ತ್ರಿಚಕ್ರ ವಾಹನ ಸುಮಾರು 72ಸಾವಿರ ದಷ್ಟು ಮೌಲ್ಯವನ್ನು ಹೊಂದಿದ್ದು ಪ್ರತಿ ವಾಹನಕ್ಕೂ 1 ವರ್ಷದ ವಿಮೆ ಹಾಗೂ ತೆರಿಗೆಯನ್ನು ಸಂಪೂರ್ಣವಾಗಿ ಸರಕಾರದ ವತಿಯಿಂದ ಭರಿಸಲಾಗುತ್ತದೆ. ಆದರೆ ಆದರೆ ಫಲಾನುಭವಿಗಳು ಕಡ್ಡಾಯವಾಗಿ ಲೈಸನ್ಸ್ಮಾಡಿಸಿಕೊಳ್ಳಬೇಕು.
ಈ ಸಮಯದಲ್ಲಿ ಕುಮಟಾ ತಾಸಿಲ್ದಾರ್ ಮೇಘರಾಜ್ ನಾಯಕ್ ಬಿಜೆಪಿ ಮುಖಂಡರಾದ ಶ್ರೀ ವಿನಾಯಕ ಭಟ್ ಶ್ರೀ ಜಿ ಆಯ್ ಹೆಗಡೆ ಮುಂತಾದವರು ಹಾಜರಿದ್ದರು